ಮುಂಬೈ:ಭಾರತದ ವಿರುದ್ಧ ಸಂಘರ್ಷಕ್ಕೆ ಇಳಿದಿರುವ ಚೀನಾಗೆ ತಕ್ಕ ಪಾಠ ಕಲಿಸಲು ಇದಾಗಲೇ ಭಾರತ ಮುಂದಾಗಿದೆ. ಚೀನಾಕ್ಕೆ ನೀಡಲಾಗಿರುವ ಕೆಲವು ಗುತ್ತಿಗೆಗಳನ್ನು ಇದಾಗಲೇ ರದ್ದು ಮಾಡಿರುವ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಸರ್ಕಾರ ಕೂಡ ತಾನು ಮಾಡಿಕೊಂಡಿರುವ ಒಪ್ಪಂದಕ್ಕೆ ತಡೆ ನೀಡಿದೆ.
ಗಲ್ವಾನ್ ಸಂಘರ್ಷದ ನಡುವೆಯೂ ಚೀನಾ ಮೂಲದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಟೀಕೆ ಎದುರಿಸುತ್ತಿದ್ದ ಸರ್ಕಾರ, ಈ ಟೀಕೆಗೆ ಮಣಿದು ಐದು ಸಾವಿರ ಕೋಟಿ ರೂಪಾಯಿಯ ಮೂರು ಒಪ್ಪಂದಕ್ಕೆ ಸದ್ಯ ಬ್ರೇಕ್​ ಹಾಗಿದೆ.
ಇದನ್ನೂ ಓದಿ:VIDEO: ಚೀನಾ, ಪಾಕ್​ಗೆ ಕಾಶ್ಮೀರಿಗಳ ಸ್ಪಷ್ಟ ಸಂದೇಶ
ಕೇಂದ್ರ ಸರ್ಕಾರದ ಜತೆ ಮಾತುಕತೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ತಿಳಿಸಿದ್ದಾರೆ. ಚೀನಾದ ಸಂಸ್ಥೆಗಳೊಂದಿಗೆ ಮುಂದಿನ ದಿನಗಳಲ್ಲಿ ಯಾವುದೇ ಒಡಂಬಡಿಕೆ ಮಾಡಿಕೊಳ್ಳಬೇಡಿ ಎಂದು ವಿದೇಶಾಂಗ ಸಚಿವಾಲಯ ಸಲಹೆ ನೀಡಿರುವುದಾಗಿಯೂ ಸಚಿವರು ತಿಳಿಸಿದ್ದಾರೆ.
ಕರೊನಾ ಬಿಕ್ಕಟ್ಟಿನ ನಂತರ, ಆರ್ಥಿಕ ಪುನಶ್ಚೇತನಕ್ಕಾಗಿ ಮಹಾರಾಷ್ಟ್ರ ಸರ್ಕಾರವು ಮ್ಯಾಗ್ನೇಟಿಕ್‌ ಮಹಾರಾಷ್ಟ್ರ 2.0 ಅಭಿಯಾನ ಆರಂಭಿಸಿತ್ತು. ಇದರ ಅಡಿಯಲ್ಲಿ ಚೀನಾದ ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್‌ ಜೆವಿ, ಹೆಂಗ್ಲಿ ಇಂಜಿನಿಯರಿಂಗ್‌ ಮತ್ತು ಫೋಟಾನ್‌, ಗ್ರೇಟ್‌ ಮೋಟಾರ್‌ನೊಂದಿಗೆ ಜೂ.17ರಂದು ಪುಣೆಯ ತಲೆಗಾಂವ್‌ನಲ್ಲಿ ಹೂಡಿಕೆ ಸಂಬಂಧ ಮೂರು ಒಪ್ಪಂದಗಳನ್ನ ಮಾಡಿಕೊಂಡಿತ್ತು. ಇದು ಭಾರಿ ಟೀಕೆಗೆ ಒಳಗಾಗಿತ್ತು.
ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ವಿಶ್ವದ 12 ಸಂಸ್ಛೆಗಳೊಂದಿಗೆ ಎಒಯುಗೆ ಸಹಿ ಹಾಕಿದ್ದು. ಈ ಪೈಕಿ ಚೀನಾ ಮೂಲದ ಈ ಮೂರು ಸಂಸ್ಥೆಗಳು ಕೂಡ ಸೇರಿವೆ. ಫೋಟಾನ್‌ ಮತ್ತು ಗ್ರೇಟ್‌ ಮೋಟಾರ್‌-3,770 ಕೋಟಿ ರೂ, ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್‌ ಜೆವಿ ಮತ್ತು ಫೋಟಾನ್‌- ಒಂದು ಸಾವಿರ ಕೋಟಿ ಮತ್ತು ಹೆಂಗ್ಲಿ ಇಂಜಿನಿಯರಿಂಗ್‌ಗೆ 250 ಕೋಟಿ ರೂ ಹೂಡಿಕೆ ಮಾಡಿವೆ. ಒಪ್ಪಂದ ಹಿಂದಪಡೆಯುವಂತೆ ಸರ್ಕಾರದ ಮೇಲೆ ಒತ್ತಡವೂ ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಈಗ ಅದು ತಡೆ ನೀಡಿದೆ.(ಏಜೆನ್ಸೀಸ್​)
ಮ್ಯಾನ್ಮಾರ್‌ ಅಧಿಕಾರಿಗಳಿಗೂ ಲಂಚ ತಿನ್ನಿಸಿ ಭಯಾನಕ ಸ್ಕೆಚ್‌ ಹಾಕುತ್ತಿದೆ ಕುತಂತ್ರಿ ಚೀನಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + seven =
Remember me
