ಮುಂಬೈ:ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದ್ದು, ಕಳೆಗುಂದಿರುವ ಜನರಿಗೆ ಆತ್ಮಸ್ಥೈರ್ಯ ತುಂಬಲು ಅನೇಕ ಸರ್ಕಾರಗಳು ದಿಟ್ಟ ಹೆಜ್ಜೆಗಳನ್ನು ಇಟ್ಟಿವೆ. ಈಗಾಗಲೇ ದೆಹಲಿ ಸರ್ಕಾರ ಬಾಡಿಗೆದಾರರಿಗೆ ರಿಲೀಫ್​ ನೀಡಿದ್ದು, ಅದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ಕೂಡ ಇದೇ ಹಾದಿಯನ್ನು ತುಳಿದಿದೆ.
ಕನಿಷ್ಠ ಮೂರು ತಿಂಗಳು ಬಾಡಿಗೆ ಸಂಗ್ರಹವನ್ನು ಮುಂದೂಡುವಂತೆ ಮನೆ ಮಾಲೀಕರಿಗೆ ಸಿಎಂ ಉದ್ಧವ್​ ಠಾಕ್ರೆ ಸರ್ಕಾರ ತಾಕೀತು ಮಾಡಿದ್ದು, ಮೂರು ತಿಂಗಳ ಅವಧಿಯಲ್ಲಿ ಹಣ ಪಾವತಿ ಮಾಡುವಲ್ಲಿ ವಿಫಲವಾದರೆ, ಅಂತಹ ಬಾಡಿಗೆದಾರರನ್ನು ಹೊರಹಾಕದಂತೆಯು ಆದೇಶಿಸಿದ್ದು, ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದ್ದಾರೆ.
ಲಾಕ್​ಡೌನ್​ನಿಂದ ಬಹುತೇಕ ವ್ಯವಹಾರಗಳು ಸ್ಥಗಿತವಾಗಿರುವುದರಿಂದ ಯಾವುದೇ ಕೆಲಸವಿಲ್ಲದೆ, ಆದಾಯದ ಮೂಲವಿಲ್ಲದೇ ಬದುಕು ಕಷ್ಟವಾಗಿರುವ ಸಮಯದಲ್ಲಿ ಬಾಡಿಗೆ ರೂಪದಲ್ಲಿ ಬಾಡುಗೆದಾರರನ್ನು ಹಿಂಸಿಸಬೇಡಿ ಎನ್ನುವುದು ಮಹಾರಾಷ್ಟ್ರ ಸರ್ಕಾರದ ಉದ್ದೇಶವಾಗಿದೆ.
ಇಷ್ಟೇ ಅಲ್ಲದೆ, ಶಾಲಾ ಶುಲ್ಕವನ್ನು ಪಾವತಿಸುವಂತೆ ಪಾಲಕರನ್ನು ಬಲವಂತ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿಯು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.(ಏಜೆನ್ಸೀಸ್​)
ರಾಮನಗರದಲ್ಲಿ ನಿಖಿಲ್-ರೇವತಿ ಅದ್ದೂರಿ ವಿವಾಹ: ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಆರೋಪ

ನಾನು ಜಹೀರಾ ವಸೀಂ ಅಲ್ಲ, ಬಬಿತಾ ಪೊಗಾಟ್​; ಟ್ವಿಟರ್​ ಖಾತೆ ರದ್ದುಗೊಳಿಸುವ ಆಗ್ರಹಕ್ಕೆ ತಿರುಗೇಟು ನೀಡಿದ ಕುಸ್ತಿಪಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 8 =
Remember me
