ಮುಂಬೈ:ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಅಸ್ಸಾಂನ ಗುವಾಹಟಿಯಲ್ಲೇ ಉಳಿದಿರುವ ಬಂಡಾಯ ಶಾಸಕರ ಪೈಕಿ ಮತ್ತೋರ್ವ ಸಚಿವ ಸೇರ್ಪಡೆಯಾಗಿದ್ದಾರೆ.
ಭಾನುವಾರ ಗುವಾಹಟಿಗೆ ತೆರಳಿರುವ ಸಚಿವ ರೆಬೆಲ್​​ ಶಾಸಕರ ಜತೆ ಕೈ ಜೋಡಿಸಿದ್ದಾರೆ. ಉನ್ನತ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದ ಉದಯ್​ ಸಮಂತ್​ ಅವರು ಭಾನುವಾರ ಸೂರತ್​ ನಿಂದ ಗುವಾಹಟಿಗೆ ತೆರಳಿದ್ದಾರೆ.
ವಿಮಾನ ಪ್ರಯಾಣಿಕರ ಪಟ್ಟಿಯಲ್ಲಿ ಉದಯ್​ ಸಮಂತ್​ ಪ್ರಯಾಣ ಮಾಡಿರುವುದು ಖಚಿತಗೊಂಡಿದೆ. ಸದ್ಯ ಅಸ್ಸಾಂನಲ್ಲೇ ಬೀಡುಬಿಟ್ಟಿರುವ ಸಚಿವರ ಜತೆ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಶಾಸಕರ ಅನರ್ಹ ಕೋರಿ ನೋಟಿಸ್​ ನೀಡಲಾಗಿದ್ದು, ನಾಳೆ ಸಂಜೆಯೊಳಗೆ ಶಾಸಕರು ಉತ್ತರಿಸಲೇಬೇಕಿದೆ. ಸದ್ಯ ಉದ್ಧವ್​ ಠಾಕ್ರೆ ಅವರ ಸರ್ಕಾರದಿಂದ ಒಂದೊಂದೇ ಶಾಸಕರು ಹೊರಬರುತ್ತಿದ್ದು, ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
