ಮುಂಬೈ:ಯೋಗ ಗುರು ಬಾಬಾ ರಾಮ್​ದೇವ್​ ಅವರ ಪತಂಜಲಿ ಸಂಸ್ಥೆ ಕರೊನಾ ಗುಣಪಡಿಸುವ ಕರೊನಿಲ್​ ಔಷಧವನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ವಿವಾದವೂ ಸೃಷ್ಟಿಯಾಗಿದೆ.
ಆಯುಷ್​ ಇಲಾಖೆ, ಭಾರತೀಯ ವೈದ್ಯಕೀಯ ಮಂಡಳಿಗಳು ಈ ಮಾತ್ರೆಗಳಿಂದ ಅಂತರ ಕಾಯ್ದುಕೊಂಡಿವೆ. ಸದ್ಯ ಯಾವುದೇ ರೀತಿಯ ಪ್ರಚಾರ ಕೊಡಬೇಡಿ ಎಂದು ಕೇಂದ್ರ ಸರ್ಕಾರವೂ ಸೂಚನೆ ನೀಡಿದೆ. ಈ ಮಧ್ಯೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​ ಅವರು ಯೋಗ ಗುರು ರಾಮ್​ದೇವ್​ ಅವರಿಗೆ ಖಡಕ್​ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಪತಂಜಲಿ ಸಂಸ್ಥೆ ಹೊರತಂದ ಕರೊನಿಲ್​ ಒಂದು ನಕಲಿ ಔಷಧವಾಗಿದ್ದು, ಮಹಾರಾಷ್ಟ್ರದಲ್ಲಿ ಇದರ ಮಾರಾಟಕ್ಕೆ ಯಾವ ಕಾರಣಕ್ಕೂ ಅನುಮತಿ ನೀಡುವುದಿಲ್ಲ, ಇದು ಯೋಗ ಗುರು ಬಾಬಾ ರಾಮ್​ದೇವ್​ಗೆ ನನ್ನ ಖಡಕ್​ ಎಚ್ಚರಿಕೆ ಎಂದು ಟ್ವೀಟ್​ ಮಾಡಿದ್ದಾರೆ.ಕರೊನಿಲ್​ ಆಯುರ್ವೇದ ಔಷಧಿಯ ಕ್ಲಿನಿಕಲ್​ ಪ್ರಯೋಗ ಯಶಸ್ವಿಯಾಗಿದೆ ಎಂದು ಪತಂಜಲಿ ಸಂಸ್ಥೆ ಹೇಳಿದೆ. ಆದರೆ ಅದು ನಿಜಕ್ಕೂ ಆಗಿದೆಯಾ? ಇಲ್ಲವಾ ಎಂಬುದನ್ನು ಜೈಪುರದ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ನ್ಯಾಷನಲ್​ ಸೈನ್​ ಪರೀಕ್ಷೆ ಮಾಡಲಿದೆ ಎಂದು ಅನಿಲ್​ ದೇಶ್​ಮುಖ್​ ಹೇಳಿದ್ದಾರೆ.ಇದನ್ನೂ ಓದಿ:ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!
ಹಾಗೇ ಕರೊನಿಲ್​ ಔಷಧದಿಂದ ಅಂತರ ಕಾಯ್ದುಕೊಂಡು, ಪ್ರಚಾರ ಮಾಡಬೇಡಿ ಎಂದು ಸೂಚನೆ ನೀಡಿದ ಆಯುಷ್​ ಇಲಾಖೆಯ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ.
ಔಷಧಿಯ ಕ್ಲಿನಿಕಲ್​ ಪ್ರಯೋಗದ ಬಗ್ಗೆ ಸರಿಯಾದ ಮಾಹಿತಿ ತಿಳಿಸದೆ, ಅದರ ಮಾದರಿ, ಅಳತೆ, ನೋಂದಣಿಯ ವಿವರಗಳನ್ನೇನೂ ಹೇಳದೆ, ಒಮ್ಮೆಲೇ ಬಂದು ಕರೊನಾ ಗುಣಪಡಿಸಲು ಔಷಧಿ ಕಂಡುಹಿಡಿದಿದ್ದೇವೆ. ಅದರಿಂದ ಹಲವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿಬಿಟ್ಟರೆ, ಅದನ್ನೆಲ್ಲ ಒಪ್ಪಲಾಗದೆ. ಈ ವಿಚಾರದಲ್ಲಿ ಆಯುಷ್​ ಇಲಾಖೆಯ ಕ್ರಮ ಸ್ವಾಗತಾರ್ಹ. ಪ್ರಚಾರ ಮಾಡದಂತೆ ಸೂಚನೆ ನೀಡಿ ಒಳ್ಳೆಯ ಕೆಲಸ ಮಾಡಿದೆ ಎಂದಿದ್ದಾರೆ.ಇದನ್ನೂ ಓದಿ:ಕರೊನಾ ಮಣಿಸಲು ಸಾಸಿವೆ ಎಣ್ಣೆ ಅದ್ಭುತ ಮದ್ದು; ಪೊಲೀಸರು ಕಂಡುಕೊಂಡ ಔಷಧಿ ಇದು…
ಕರೊನಿಲ್​ ಔಷಧಿಗೆ ಬಳಸಲಾದ ಅಂಶಗಳನ್ನು ತಿಳಿಸುವಂತೆ ಪತಂಜಲಿ ಸಂಸ್ಥೆಗೆ ಕೇಂದ್ರ ಸರ್ಕಾರ ತಿಳಿಸಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 2 =
Remember me
