ಮುಂಬೈ:ಕ್ರಿಕೆಟ್​​ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಆನ್‌ಲೈನ್ ಗೇಮಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಮುಂಬೈನ ಬಾಂದ್ರಾದಲ್ಲಿರುವ ತೆಂಡೂಲ್ಕರ್ ಅವರ ಮನೆಯ ಎದುರು ಮಹಾರಾಷ್ಟ್ರದ ಸ್ವತಂತ್ರ ಶಾಸಕ ಬಚ್ಚು ಕಾಡು ಮತ್ತು ಅವರ ಬೆಂಬಲಿಗರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
भारतरत्न सचिन तेंडुलकर यांना वारंवार paytm first जुगाराची जाहीरात बंद करण्याची विनंती केली. परंतु अद्याप ही जाहीरात बंद नाही झाली आहे. आमचा विरोध तेंडुलकरना नाही परंतु भारतरत्न व्यक्तीस ही बाब अशोभनीय आहे. एकतर त्यांनी जाहीरात बंद करावी नाहीतर भारतरत्न परत करावा. (१/२)pic.twitter.com/Qi4uernXwR
— BACCHU KADU (@RealBacchuKadu)August 31, 2023

ಸಚಿನ್ ತೆಂಡೂಲ್ಕರ್ ಅವರು ಆನ್‌ಲೈನ್ ಗೇಮಿಂಗ್ ಆ್ಯಪ್​ಗಳ ಜಾಹೀರಾತಿನಲ್ಲಿ ನಟಿಸಿದ್ದಾರೆ. ಸಚಿನ್ ಅವರ ನಿರ್ಧಾರದಿಂದ ಅಸಮಾಧಾನಗೊಂಡಿರುವ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು, ಸಚಿನ್ ನಟಿಸಿರುವ ಜಾಹೀರಾತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ತೆಂಡೂಲ್ಕರ್ ಅವರ ಮನೆಯ ಹೊರಗೆ ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ಹಿಡಿದುಕೊಂಡು ಬೆಂಬಲಿಗರೊಂದಿಗೆ ಬಂದ ಬಚ್ಚು ಕಾಡು, ತೆಂಡೂಲ್ಕರ್  ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಯುವ ಪೀಳಿಗೆಯ ಮೇಲೆ ಪರಿಣಾಮ ಬೀರುವ ಇಂತಹ ಚಟುವಟಿಕೆಗಳನ್ನು  ಜಾಹೀರಾತನ್ನು 15 ದಿನಗಳಲ್ಲಿ ನಿಲ್ಲಿಸುವಂತೆ ಕರೆ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಚ್ಚು ಕಡು, ‘ ಸಚಿನ್ ಒಬ್ಬ ಆದರ್ಶ ವ್ಯಕ್ತಿ. ಕೆಲವರಿಗೆ ಅವರು ಕ್ರಿಕೆಟ್ ದೇವರಂತೆ ಬಿಂಬಿತವಾಗಿದ್ದಾರೆ. ಅಲ್ಲದೆ ಸಚಿನ್ ಅವರಿಗೆ ಲಕ್ಷ್ಯಾಂತರ ಫಾಲೋವರ್ಸ್ ಕೂಡ ಇದ್ದಾರೆ. ಹಾಗಾಗಿ ಸಚಿನ್ ಏನಾದರೂ ತಪ್ಪು ಮಾಡಿದ್ದರೆ ಅದು ಯುವ ಪೀಳಿಗೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಯಾವುದನ್ನು ಜಾಹೀರಾತು ಮಾಡಬೇಕು, ಯಾವುದನ್ನು ನೀಡಬಾರದು ಎಂಬುದಕ್ಕೆ ಭಾರತ ರತ್ನ ನೀತಿ ಸಂಹಿತೆ ಹೊಂದಿದೆ. ಈಗ ಲಾಯರ್ ಮೂಲಕ ಸಚಿನ್​ ತೆಂಡೂಲ್ಕರ್​ಗೆ ನೋಟಿಸ್ ಕಳುಹಿಸುದ್ದೇನೆ ಎಂದು ಬಚ್ಚು ಕಡು ಆರೋಪಿಸಿದ್ದಾರೆ.
ಮಳೆಗಾಗಿ ಇಬ್ಬರು ಗಂಡು ಮಕ್ಕಳಿಗೆ ಅದ್ಧೂರಿಯಾಗಿ ಮದುವೆ ಮಾಡಿದ ಪಚ್ಚಾರಲಹಳ್ಳಿ ಗ್ರಾಮಸ್ಥರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + two =
Remember me
