ಗಡ್ಚಿರೋಲಿ:ಮೇಲ್ಛಾವಣಿ ಮುರಿದರೂ ಬಸ್ಸೊಂದು ​ಹೆದ್ದಾರಿಯಲ್ಲಿ ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ಮನೆಯ ಬಾತ್​ರೂಮ್​​ನಲ್ಲಿ 15ಕ್ಕೂ ಹೆಚ್ಚು ನಾಗರಹಾವಿನ ಮರಿ ಪ್ರತ್ಯಕ್ಷ: ವೃದ್ಧ ದಂಪತಿ ಕಂಗಾಲು
ಬಸ್‌ನ ಮೇಲ್ಛಾವಣಿಯ ಹೊರ ಹೊದಿಕೆಯು ಒಂದು ಬದಿಯಿಂದ ಬೇರ್ಪಟ್ಟು ಗಾಳಿಯಲ್ಲಿ ಹಾರಾಡುತ್ತಿರುವ ಬೀಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದು​ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್‌ಆರ್‌ಟಿಸಿ)ಗೆ ಸಂಬಂಧಿಸಿದೆ.
Shocking! Maharashtra State Road Transport Corp. (MSRTC) bus runs with a broken roof!#MumbaiRains#BaarishAaGayiHai#BarishAaGayiHai#WorldCup2023pic.twitter.com/x96BpuxAFF
— Voice of Mumbai (@GreaterMumbai)July 26, 2023
ಬಸ್ ಗಡ್ಚಿರೋಲಿ-ಅಹೇರಿ ಮಾರ್ಗದಲ್ಲಿ ಚಲಿಸುತ್ತಿದ್ದು, ವಾಹನದ ಸಂಪೂರ್ಣ ಮೇಲ್ಛಾವಣಿಯು ಹೊರಬರಲಿಲ್ಲ, ಆದರೆ ಹೆದ್ದಾರಿಯಲ್ಲಿ ಬಸ್ ಓಡುತ್ತಿರುವಾಗ ಚಾಲಕನ ಕ್ಯಾಬಿನ್ ಮೇಲಿನ ಹೊರಭಾಗದ ಫೈಬರ್ ಭಾಗ ಮಾತ್ರ ಮುರಿದು ಗಾಳಿಯಲ್ಲಿ ಹಾರಾಡುತ್ತಿತ್ತು. ಪ್ರಯಾಣಿಕರ ಕ್ಯಾಬಿನ್‌ನ ಮೇಲಿನ ಬಾಹ್ಯ ಅಲ್ಯೂಮಿನಿಯಂ ಮೇಲ್ಛಾವಣಿ ಭಾಗ ಮತ್ತು ಸಂಪೂರ್ಣ ಬಸ್‌ನ ಮೇಲ್ಛಾವಣಿಯ ಒಳ ಪದರವು ಹಾಗೇ ಇತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಾಹನಗಳ ನಿರ್ವಹಣೆಯ ಹೊಣೆ ಹೊತ್ತಿರುವ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಈ ಕುರಿತಾಗಿ ಸಾರಿಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. MSRTC ಸುಮಾರು 15,000 ಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿರುವ ದೇಶದ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + thirteen =
Remember me
