ಮಹಾರಾಷ್ಟ್ರ:ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚಲು ಇದೀಗ ಕೇರಳ ಮಾದರಿಯನ್ನು ಅನುಸರಿಸಲು ಮಹಾರಾಷ್ಟ್ರ ಸರ್ಕಾರ ಯೋಜಿಸಿದೆ. ಕೇರಳ ಸರ್ಕಾರ ಅಳವಡಿಸಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಯಾಮೆರಾಗಳನ್ನು ಮಹಾರಾಷ್ಟ್ರದಲ್ಲಿಯೂ ಇನ್​ಸ್ಟಾಲ್​ ಮಾಡಲು ಇದೀಗ ಮುಂದಾಗಿದೆ.
ಇದನ್ನೂ ಓದಿ:Touts On Rise At Chitradurga RTO Office | ಚಿತ್ರದುರ್ಗ ಆರ್‌ಟಿಒದಲ್ಲಿ ಅನಧಿಕೃತ ವ್ಯಕ್ತಿಗಳಿರುವ ಬಗ್ಗೆ ವಿಡಿಯೋ ಮಾಡಿ ಕಳಿಸಿದ ಜನ
ಮಹಾರಾಷ್ಟ್ರದ ಸಾರಿಗೆ ಆಯುಕ್ತರಾದ ವಿವೇಕ್ ಭೀಮನವರ್ ಅವರು ಇತ್ತೀಚೆಗಷ್ಟೇ ಕೇರಳಕ್ಕೆ ಭೇಟಿ ನೀಡಿದರು. ಸಂಚಾರ ನಿಯಮ ಉಲ್ಲಂಘನೆಗಳನ್ನು ಮೇಲ್ವಿಚಾರಣೆ ಮಾಡಲು ಎಐ ಕ್ಯಾಮೆರಾಗಳ ನಿಯೋಜನೆಯ ಬಗ್ಗೆ ಹೆಚ್ಚಾಗಿ ತಿಳಿಯುವ ಸಲುವಾಗಿ ಕೇರಳ ಸಾರಿಗೆ ಸಚಿವ ಆಂಟೋನಿ ರಾಜು ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮಹಾರಾಷ್ಟ್ರದಲ್ಲೂ ಇದೇ ವ್ಯವಸ್ಥೆ ಜಾರಿಗೆ ತರಲು ಆಸಕ್ತಿ ತೋರಿದ್ದಾರೆ.
ಇದನ್ನೂ ಓದಿ:ಬೀರುವಿನಲ್ಲಿಟ್ಟಿದ್ದ 8.48 ಲಕ್ಷ ರೂ. ನಗದು ಕಳವು
ವಿವೇಕ್ ಭೀಮನವರ್ ಅವರು ಎಐ ಕ್ಯಾಮೆರಾ ಜಿಲ್ಲಾ ನಿಯಂತ್ರಣ ಕೊಠಡಿ ಮತ್ತು ರಾಜ್ಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಎಐ ಕ್ಯಾಮೆರಾ ಯೋಜನೆಯು ಇಡೀ ಭಾರತಕ್ಕೆ ಸಂಭಾವ್ಯ ಮಾದರಿ ಎಂದು ಶ್ಲಾಘಿಸಿದ್ದಾರೆ. ಕೇರಳದ ಎಐ ಕ್ಯಾಮೆರಾ ಉಪಕ್ರಮದ ಪರಿಣಾಮಕಾರಿತ್ವವು ಇತರ ರಾಜ್ಯಗಳ ಗಮನವನ್ನೂ ಕೂಡ ಸೆಳೆದಿದೆ.
ಇದನ್ನೂ ಓದಿ:ದಿನಕ್ಕೊಂದು ಏಲಕ್ಕಿ ತಿನ್ನಿ, ಇದರಿಂದ ದೇಹದಲ್ಲಾಗುವ ಮ್ಯಾಜಿಕ್ ನೋಡಿ..
ಕರ್ನಾಟಕ ಮತ್ತು ತಮಿಳುನಾಡಿನ ಸಾರಿಗೆ ಇಲಾಖೆಯ ಪ್ರತಿನಿಧಿಗಳು ಜೂನ್ ಮತ್ತು ಜುಲೈನಲ್ಲಿ ಕೇರಳಕ್ಕೆ ಭೇಟಿ ನೀಡಿ, ಕ್ಯಾಮೆರಾಗಳ ಅಳವಡಿಕೆಯ ಬಗ್ಗೆ ಅಧ್ಯಯನ ಮಾಡಿದ್ದಾರೆ. ‘ಸುರಕ್ಷಿತ ಕೇರಳ’ ಯೋಜನೆಯ ಭಾಗವಾಗಿ, ರಾಜ್ಯದಾದ್ಯಂತ ಸರಿಸುಮಾರು 726 AI ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ಕ್ಯಾಮೆರಾಗಳು ಪ್ರಾಥಮಿಕವಾಗಿ ಟ್ರಾಫಿಕ್ ನಿಯಮ ಉಲ್ಲಂಘನೆಗಳಾದ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ, ಸೀಟ್ ಬೆಲ್ಟ್ ಧರಿಸದೆ ಇರುವುದು, ವೇಗದ ಮಿತಿಯನ್ನು ಮೀರುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಮತ್ತು ಸಿಗ್ನಲ್​ ಜಂಪ್​ ಮಾಡುವುದು ಸೇರಿದಂತೆ ಮುಂತಾದ ಸಂಚಾರ ಅಪರಾಧಗಳನ್ನು ಪತ್ತೆ ಹಚ್ಚಲಿದೆ,(ಏಜೆನ್ಸೀಸ್).
ರಾಜಮಂಡ್ರಿಯಲ್ಲಿ ‘ಕಂಗುವ’ ಹವಾ; ಸೂರ್ಯ ನಟನೆಯ ಚಿತ್ರಕ್ಕೆ ಫ್ಯಾನ್ಸ್​ ಕಾತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 12 =
Remember me
