ಮಹರಾಷ್ಟ್ರ:ದೇಶಾದ್ಯಂತ ಟೊಮ್ಯಾಟೋ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಮಹಾರಾಷ್ಟ್ರಲ್ಲೂ ಟೊಮ್ಯಾಟೋ ಕೆಜಿಗೆ 140 ರೂ. ಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಅನುಗುಣವಾಗಿ ಟೊಮ್ಯಾಟೊ ಬೆಲೆ ಬದಲಾಗುತ್ತಿದ್ದರೂ, ಪ್ರಸ್ತುತ 140-180 ರೂ. ಇದೆ. ಹೀಗಿರುವಾಗ ಟೊಮ್ಯಾಟೋ ಖರೀದಿ ಮಾಡಲು ಜನರು ಹಿಂದೆಮುಂದೆ ನೋಡುವಂತಾಗಿದೆ.

ಇದನ್ನೂ ಓದಿ:ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು
ಜನ್ಮದಿನ ಎಂದರೆ ವಿವಿಧ ಉಡುಗೊರೆಯಾಗಿ ಹೂವು, ಟೆಡ್ಡಿ ಬೇರ್, ಚಾಕೊಲೇಟ್ ನೀಡಲಾಗುತ್ತದೆ. ಬೆಳ್ಳಿ ಮತ್ತು ಚಿನ್ನವನ್ನು ಆಯಾ ಮಟ್ಟಕ್ಕೆ ಅನುಗುಣವಾಗಿ ಉಡುಗೊರೆಯಾಗಿ ನೀಡಲಾಗುತ್ತದೆ. ಆದರೆ ನೀವು ಇತ್ತೀಚೆಗೆ ಯಾರಿಗಾದರೂ ದುಬಾರಿ ಉಡುಗೊರೆಯನ್ನು ನೀಡಲು ಬಯಸಿದ್ದೀರಾ? ಹಾಗಿದ್ರೆ ಟೊಮ್ಯಾಟೋವನ್ನು ಕೊಡಬಹುದು ಎನ್ನುವುದನ್ನು ವ್ಯಕ್ತಿಯೊಬ್ಬರು ಸಾಬೀತು ಪಡಿಸಿದ್ದಾರೆ.

ಕಲ್ಯಾಣ್ ಪ್ರದೇಶದ ಕೊಚಾಡಿಯ ಸ್ಥಳೀಯ ಸೋನಮ್ ಬೋರ್ಸೆ ಎಂಬ ಮಹಿಳೆ ಜುಲೈ 5 ರಂದು ತನ್ನ ಮನೆಯಲ್ಲಿ ತನ್ನ ಸಂಬಂಧಿಕರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಆಕೆಯ ಸಂಬಂಧಿಕರು ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದರು. ಸಂಬಂಧಿಕರೆಲ್ಲರೂ 4 ಕೆಜಿಗೂ ಹೆಚ್ಚು ಟೊಮ್ಯಾಟೋಗಳನ್ನು ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ:ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಸೋನಮ್ ಬೋರ್ಸೆ ಮಾತನಾಡಿ, “ನನ್ನ ಹುಟ್ಟುಹಬ್ಬದಂದು ನಾನು ಹಲವಾರು ಉಡುಗೊರೆಗಳನ್ನು ಸ್ವೀಕರಿಸಿದ್ದೇನೆ. ಆದರೆ ನನ್ನ ಸಹೋದರ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ನೀಡಿದ ಉಡುಗೊರೆಗಳಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ. ಅವರು ನನಗೆ ಟೊಮ್ಯಾಟೋಗಳನ್ನು ಉಡುಗೊರೆಯಾಗಿ ನೀಡಿದರು. ನನ್ನ ಸಹೋದರ ನನಗೆ 2.15 ಕೆಜಿ ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನನಗೆ ತಲಾ 1 ಕೆಜಿ ಟೊಮ್ಯಾಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಯನ್ನು ಸ್ವೀಕರಿಸಿದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.
ಪ್ರೀತಿಗೆ ಹಿರಿಯರು ಒಪ್ಪುವುದಿಲ್ಲ ಎಂಬ ಭಯ: ಹುಡುಗನ ಮನೆಯಲ್ಲಿ ನಡೆಯಿತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − nine =
Remember me
