ಅಮರಾವತಿ:ಮಹಾರಾಷ್ಟ್ರದ ಲೇಡಿ ಸಿಂಗಮ್​ ಖ್ಯಾತಿಯ ಮಹಿಳಾ ಶ್ರೇಣಿ ಅರಣ್ಯ ಅಧಿಕಾರಿ ದೀಪಾಲಿ ಚೌಹಾಣ್​ ಮೊಹೈತ್​ ಅವರ ಮೃತದೇಹವು ಆತ್ಮಹತ್ಯೆ ಮಾಡಿಕೊಂಡಿರುವ ಪತ್ತೆಯಾಗಿದೆ.
ದೀಪಾಲಿ ಅವರನ್ನು ಮಹಾರಾಷ್ಟ್ರದ ಮೆಲ್ಘಟ್​ ಹುಲಿ ಸಂರಕ್ಷಿತಾರಣ್ಯ (ಎಂಆರ್​ಟಿ) ಕ್ಕೆ ಪೋಸ್ಟಿಂಗ್​ ಮಾಡಲಾಗಿತ್ತು. ಅಧಿಕಾರಿ ಮೂಲಗಳ ಪ್ರಕಾರ ಡೆತ್​ನೋಟ್​ ಸಹ ಪತ್ತೆಯಾಗಿದ್ದು, ಭಾರತೀಯ ಅರಣ್ಯಾಧಿಕಾರಿ (ಐಎಫ್​ಎಸ್​)ಯ ಲೈಂಗಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆನ್ನಲಾಗಿದೆ.
ಇದನ್ನೂ ಓದಿರಿ:ಕರೊನಾ 2ನೇ ಅಲೆ ಬೆನ್ನಲ್ಲೇ ಹೊರಬಿದ್ದ ಹೊಸ ಸಂಶೋಧನಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಸಂಗತಿ!
28 ವರ್ಷದ ಆರ್​ಎಫ್​ಒ ದೀಪಾಲಿ ಅವರು ಹರಿಸಾಲ್​ ಗ್ರಾಮದಲ್ಲಿರುವ ಹೆಡ್​ಕ್ವಾಟ್ರಸ್​ನಲ್ಲಿ ತಮ್ಮ ಸರ್ವೀಸ್​ ರಿವಾಲ್ವರ್​ನಿಂದ ನಿನ್ನೆ ರಾತ್ರಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದಾದ ಬಳಿಕ ದೀಪಾಲಿ ಅವರು ಸಂಬಂಧಿಕರು ಆಕೆಯ ಮೃತದೇಹ ಮತ್ತು ಪಕ್ಕದಲ್ಲಿ ರಿವಾಲ್ವರ್​ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಘಟನೆಯ ಬಗ್ಗೆ ಕೇಳಿದಾಗ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು. ಯಾವುದೇ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಎಂದರು.
ಇನ್ನು ಆತ್ಮಹತ್ಯೆ ಸಮಯದಲ್ಲಿ ದೀಪಾಲಿ ಅವರ ತಾಯಿ ಸತಾರಾದಲ್ಲಿದ್ದರು ಮತ್ತು ಆಕೆಯ ಪತಿ ಕೆಲಸದಲ್ಲಿದ್ದರು. ಡೆತ್​ನೋಟ್​ನಲ್ಲಿ ಉಲ್ಲೇಖವಾಗಿರುವ ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ದೀಪಾಲಿ ಸಂಬಂಧಿಕರು ಒತ್ತಾಯಿಸಿದರು.
ಇದನ್ನೂ ಓದಿರಿ:ಮರಗಳಿಗೆ ಕೊಡಲಿಯೇಟು?, ರಸ್ತೆಗಾಗಿ ಬೃಹತ್ ಮರಗಳ ಮಾರಣ ಹೋಮಕ್ಕೆ ಸಿದ್ಧತೆ
ಹೀಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ಹೆಸರು ದೀಪಾಲಿ ಅವರ ಡೆತ್​ನೋಟ್​ನಲ್ಲಿ ಉಲ್ಲೇಖವಾಗಿತ್ತು. ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಅಮರಾವತಿ ಗ್ರಾಮೀಣ ಪೊಲೀಸ್​ ವರಿಷ್ಠಾಧಿಕಾರಿ ಡಾ. ಹರಿ ಬಾಲಾಜಿ ಎನ್​ ಮಾಹಿತಿ ನೀಡಿದ್ದಾರೆ. ಶಿವಕುಮಾರ್​ ಅವರು ಬೆಂಗಳೂರಿಗೆ ಹೋಗಲು ರೈಲು ನಿಲ್ದಾಣದಲ್ಲಿ ಇರುವಾಗ ವಶಕ್ಕೆ ಪಡೆಯಲಾಗಿದೆ.
ಕಳೆದ ಕೆಲವು ತಿಂಗಳಿಂದ ಶಿವಕುಮಾರ್, ದೀಪಾಲಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರಂತೆ. ಇದ ಆಕೆಯ ಮಾನಸಿಕ ಹಿಂಸೆಗೆ ಕಾರಣವಾಗಿತ್ತು ಎಂದು ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಅಂದಹಾಗೆ ದೀಪಾಲಿ ಅವರು 2013ರಲ್ಲಿ ಮಹಾರಾಷ್ಟ್ರ ಸರ್ಕಾರ ಸೇವೆಗೆ ಆಯ್ಕೆಯಾಗಿದ್ದರು.(ಏಜೆನ್ಸೀಸ್​)
ರೈತರ ಹಿತ ಕಾಯಲು ವಿದ್ಯಾರ್ಥಿಗಳ ರಣತಂತ್ರ; ರಣಂ ಸಿನಿಮಾ ವಿಮರ್ಶೆ

ವಿಚಾರಣೆಗೆ ಬರಬೇಕಾದ್ರೆ ಇದನ್ನು ನೆರವೇರಿಸಿ: ಎಸ್​ಐಟಿಗೆ ತಲೆನೋವಾದ ಸಿಡಿ ಲೇಡಿಯ ಮತ್ತೊಂದು ವಿಡಿಯೋ!

Web Exclusive | ಕಲ್ಲು ಗಣಿಗಾರಿಕೆಗೆ ಬೆಚ್ಚಿ ನಾಡಿನತ್ತ ಚಿರತೆಗಳ ದೌಡು; ಕಾಡಂಚಿನ ಜನರಲ್ಲಿ ಆತಂಕ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nineteen − one =
Remember me
