ನವದೆಹಲಿ:ಕಳೆದ ತಿಂಗಳವರೆಗೆ ಒಂದು ಕೆಜಿಗೆ 200 ರೂಪಾಯಿಗಿಂತಲೂ ಹೆಚ್ಚಿನ ಬೆಲೆಯಿಂದಾಗಿ ಗ್ರಾಹಕರನ್ನು ಕಂಗೆಡಿಸಿದ್ದ ಟೊಮ್ಯಾಟೊ ಧಾರಣೆ ಇದೀಗ ಒಂದು ಕೆಜಿಗೆ ಎರಡು ರೂಪಾಯಿಯಷ್ಟು ತಳ ಮಟ್ಟಕ್ಕೆ ಕುಸಿದು ಬೆಳೆಗಾರರು ದಿಕ್ಕು ತೋಚದಂತಾಗಿದೆ. ಗಗನಕ್ಕೆ ಏರಿದ್ದ ಟೊಮ್ಯಾಟೊ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ರೈತರ ಮೊಗದಲ್ಲಿ ನಗು ಮಾಯವಾಗಿ ಗ್ರಾಹಕರು ಸಂಭ್ರಮಿಸುವಂತಾಗಿದೆ.
ಬಂಪರ್​ ಬೆಳೆ ಬಂದಿರುವುದರಿಂದ ಕೆಜಿ ಟೊಮಾಟೋ ದರ 3ರಿಂದ 5 ರೂಪಾಯಿಗೆ ಕುಸಿದ ಕಾರಣ ಕಣ್ಣೀರಿಡುತ್ತಿರುವ ಮಹಾರಾಷ್ಟ್ರ ರೈತರು ಸಲನ್ನು ನಾಶ ಮಾಡಲು ಆರಂಭಿಸಿದ್ದಾರೆ. ಈ ರೀತಿಯ ದರ ಏರಿಳಿತ ತಡೆಯಲು ಟೊಮ್ಯಾಟೊ ಮತ್ತು ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ನಿಗದಿಪಡಿಸುವುದು ಉತ್ತಮ ಪರಿಹಾರ ಕ್ರಮ ಎನ್ನುತ್ತಾರೆ ನಾಸಿಕ್​ ರೈತ ಸಚಿನ್​ ಹೋಳ್ಕರ್​.
ಟೊಮ್ಯಾಟೊ ಧಾರಣೆ ಇಳಿಯಲು ಆರಂಭವಾಗಿರುವುದರಿಂದ ರೈತರಿಗೆ ಕೃಷಿ ವೆಚ್ಚವನ್ನು ವಾಪಸ್​ ಪಡೆಯಲು ಸಾಧ್ಯವಾಗುತ್ತಿಲ್ಲ. ಖರ್ಚಿನ ಅರ್ಧಕ್ಕಿಂತ ಕಡಿಮೆ ಆದಾಯ ಬರುತ್ತಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಬೆಳೆಗಾರರು ಒಂದು ಕೆಜಿಗೆ ಎರಡು ರೂಪಾಯಿಯಷ್ಟು ಕನಿಷ್ಠ ಬೆಲೆಗೆ ಸಲನ್ನು ಮಾರುತ್ತಿದ್ದಾರೆ. ಒಂದು ಎಕರೆ ಪ್ರದೇಶದಲ್ಲಿ ಟೊಮಾಟೋ ಬೆಳೆಯಲು ಕನಿಷ್ಠ ಎರಡು ಲಕ್ಷ ರೂಪಾಯಿ ಬಂಡವಾಳ ಬೇಕಾಗುತ್ತದೆ.
ಪುಣೆ ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಧಾರಣೆ ಕೆಜಿಗೆ ಐದು ರೂಪಾಯಿಗೆ ಕುಸಿದಿದೆ. ಮೂರು ಪ್ರಮುಖ ಸಗಟು ಮಾರುಕಟ್ಟೆಗಳಾದ ಪಿಂಪಲ್​ಗಾಂವ್​, ನಾಸಿಕ್​ ಮತ್ತು ಲಸಲ್​ಗಾಂವ್​ನಲ್ಲಿ 20 ಕೆಜಿಯ ಕ್ರೇಟ್​ ದರ 90 ರೂಪಾಯಿಗೆ ಕುಸಿದಿದೆ. ಕಳೆದ ಆರು ವಾರಗಳಲ್ಲಿ ಅದು 2,000 ರೂಪಾಯಿ ಆಗಿತ್ತು. ಕೊಲ್ಲಾಪುರದ ಚಿಲ್ಲರೆ ಮಾರ್ಕೆಟ್​ನಲ್ಲಿ ಕೆಜಿಗೆ 2ರಿಂದ 3 ರೂಪಾಯಿಯಂತೆ ಮಾರಾಟವಾಗುತ್ತಿದೆ. ಒಂದು ತಿಂಗಳ ಹಿಂದೆ ಕೆಜಿ ಟೊಮಾಟೋ ದರ ಸುಮಾರು 220 ರೂಪಾಯಿ ಆಗಿತ್ತು. ಕಳೆದ ಕೆಲವು ವಾರಗಳಿಂದ ಸಗಟು ಮಾರ್ಕೆಟ್​ಗಳಲ್ಲಿ ಬೆಲೆ ಪಾತಾಳಕ್ಕೆ ಹೋಗಿರುವುದರಿಂದ ಪುಣೆ ಜಿಲ್ಲೆಯ ಜುನ್ನಾರ್​ ಮತ್ತು ಅಂಬೆಗಾಂವ್​ ತಹಸೀಲ್​ಗಳ ರೈತರು ಟೊಮಾಟೋ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ.
ಮಹಾರಾಷ್ಟ್ರದ ಅತಿ ದೊಡ್ಡ ಪಿಂಪಲ್​ಗಾಂವ್​ ಎಪಿಎಂಸಿಯಲ್ಲಿ ಪ್ರತಿನಿತ್ಯ ಸುಮಾರು 2 ಲಕ್ಷ ಕ್ರೇಟ್​ ಟೊಮ್ಯಾಟೊ ಹರಾಜು ನಡೆಯುತ್ತದೆ. ನಾಸಿಕ್​ ಜಿಲ್ಲೆಯಲ್ಲಿ ಸುಮಾರು 17,000 ಹೆಕ್ಟೇರ್​ನಲ್ಲಿ ಸರಾಸರಿ 6 ಲಕ್ಷ ಮೆಟ್ರಿಕ್​ ಟನ್​ ಟೊಮ್ಯಾಟೊ ಬೆಳೆಯಲಾಗುತ್ತದೆ. ಆದರೆ ಈ ವರ್ಷ ಇಳುವರಿ ದುಪ್ಪಟ್ಟುಗೊಂಡು 35,000 ಹೆಕ್ಟೇರ್​ನಲ್ಲಿ 12.17 ಲಕ್ಷ ಮೆಟ್ರಿಕ್​ ಟನ್​ ಸಲು ಬಂದಿದೆ ಎಂದು ರಾಜ್ಯದ ಕೃಷಿ ಇಲಾಖೆ ತಿಳಿಸಿದೆ. ಕೆಲವು ತಿಂಗಳಲ್ಲಿ ಧಾರಣೆ ವಿಪರೀತ ಜಾಸ್ತಿಯಾಗಿದ್ದರಿಂದ ಅಪಾರ ಲಾಭ ಮಾಡಿಕೊಳ್ಳುವ ನಿರೀೆಯಿಂದ ರೈತರು ಟೊಮ್ಯಾಟೊ ಬೆಳೆಯಲು ಆಸಕ್ತಿ ತೋರಿಸಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × four =
Remember me
