ಮುಂಬೈ:ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಜೆಯ ಅಧಿಕಾರ ದುರುಪಯೋಗ, ಭ್ರಷ್ಟಾಚಾರಗಳು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ವಿಚಾರಣೆ ವೇಳೆ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ವಜೆ ವಸೂಲಿ ದಂಧೆಯು ನಾರಿಮನ್ ಪಾಯಿಂಟ್​ನಲ್ಲಿರುವ ಪಂಚತಾರಾ ಹೋಟೆಲ್​ನಲ್ಲಿ ನಡೆಯುತ್ತಿತ್ತು ಎಂಬುದು ಬಯಲಾಗಿದೆ.
ಉದ್ಯಮಿಯೊಬ್ಬರು 12 ಲಕ್ಷ ರೂಪಾಯಿ ನೀಡಿ ಈ ಹೋಟೆಲ್​ನ 1964ನೇ ಸಂಖ್ಯೆಯ ರೂಂನನ್ನು 100 ದಿನಕ್ಕಾಗಿ ಬುಕ್ ಮಾಡಿದ್ದರು. ವಜೆ ನಕಲಿ ಆಧಾರ್ ಕಾರ್ಡ್ ಬಳಸಿ ಸುಶಾಂತ್ ಸದಾಶಿವ ಖೇಮ್ಕರ್ ಎಂಬ ಹೆಸರಿನಲ್ಲಿ ಈ ಹೋಟೆಲ್​ಗೆ ಬರುತ್ತಿದ್ದರು ಎಂದು ಎನ್​ಐಎ ತಿಳಿಸಿದೆ.
ಕೆಲ ವಿವಾದದಲ್ಲಿ ಸಿಲುಕಿಕೊಂಡಿದ್ದ ಉದ್ಯಮಿ, ವಜೆಯಿಂದ ನೆರವು ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಈ ರೂಂನನ್ನು ಟ್ರಾವಲ್ ಏಜೆಂಟರೊಬ್ಬರ ಮೂಲಕ ಬುಕ್ ಮಾಡಿಕೊಟ್ಟಿದ್ದರು. ಈ ಹೋಟೆಲ್​ಗೆ ಫೆ. 16ರಂದು ಇನ್ನೋವಾ ಕಾರಿನಲ್ಲಿ ಬಂದಿದ್ದ ವಜೆ, ಫೆ. 20ಕ್ಕೆ ಇಲ್ಲಿಂದ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ನಿರ್ಗಮಿಸಿದ್ದರು.
ಈ ಎರಡೂ ವಾಹನಗಳನ್ನು ಎನ್​ಐಎ ವಶಕ್ಕೆ ಪಡೆದಿದೆ. ಮುಕೇಶ್ ಅಂಬಾನಿ ನಿವಾಸದ ಬಳಿ ಪತ್ತೆಯಾದ ಸ್ಪೋಟಕ ಸಾಮಗ್ರಿ ಇರಿಸಿದ್ದ ಕಾರು ಮತ್ತು ಈ ಕಾರಿನ ಮಾಲೀಕ ಮನಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣ ಸಂಬಂಧ ವಜೆಯನ್ನು ಬಂಧಿಸಲಾಗಿದೆ.
ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ: ಬೆಳ್ಳಿ ರಥದಲ್ಲಿ ಮಾಜಿ ಸೈನಿಕ ಶಿವಕುಮಾರ್ ಮೆರವಣಿಗೆ; ಸ್ನೇಹಿತರಿಂದ ಬೈಕ್ ರ‍್ಯಾಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
