ನವದೆಹಲಿ:ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕಟ್ಟಾ ಹಿಂದೂವಾದಿಯಾಗಿದ್ದರು ಎಂದು ಆರ್​ಎಸ್​ಎಸ್​ ಸಂಘಟನೆಯ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.
ಎನ್​ಸಿಇಆರ್​ಟಿಯ ಮಾಜಿ ನಿರ್ದೇಶಕ ಜೆ.ಎಸ್​.ರಜಪೂತ್​ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಗಾಂಧೀಜಿ ಭಾರತವನ್ನು ಅರಿತುಕೊಳ್ಳುವ ಸಲುವಾಗಿ ಪೂರ್ತಿ ದೇಶವನ್ನು ಸುತ್ತಿದರು. ಅವರು ಹಿಂದೂ ಎಂದು ಹೇಳಿಕೊಳ್ಳಲು ಎಂದೂ ಅಂಜುತ್ತಿರಲಿಲ್ಲ. ನಾನು ಕಟ್ಟಾ ಸನಾತನೀ ಹಿಂದೂ ಎಂದು ಅವರು ಹೇಳಿಕೊಂಡಿದ್ದರು. ಹಾಗೆಯೇ ಬೇರೆ ಧರ್ಮಗಳನ್ನೂ ಗೌರವಿಸುತ್ತಿದ್ದರು.” ಎಂದು ಹೇಳಿದರು.
ಗಾಂಧೀಜಿಯನ್ನು ಇಂದಿನವರಿಗೆ ಹೋಲಿಕೆ ಮಾಡುತ್ತಾ ಮಾತನಾಡಿದ ಆರ್​ಎಸ್​ಎಸ್​ನ ಮುಖ್ಯಸ್ಥ, “ಗಾಂಧೀಜಿಯವರ ಹಲವು ಚಳವಳಿಗಳು ಸರಿಯಿರಲಿಲ್ಲ. ಸರಿಯಾದ ಉದ್ದೇಶವಿತ್ತಾದರೂ ಸರಿಯಾದ ಮಾರ್ಗವನ್ನು ಅವರು ಅನುಸರಿಸಲಿಲ್ಲ. ಅಂತಹ ತಪ್ಪಿನ ಹೊಣೆಯನ್ನು ಅವರು ಹೊರುತ್ತಿದ್ದರು ಮತ್ತು ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದರು. ಆದರೆ ಈಗ ಹಾಗೆ ಉಳಿದಿಲ್ಲ. ಅಧಿಕಾರಿ ವರ್ಗದವರು ಹೋರಾಟ ನಡೆಸುತ್ತಾರೆ. ಅವರ ಹೋರಾಟಕ್ಕೆ ಯಾರೋ ಕಾರ್ಯಕರ್ತರು ಜೈಲು ಅನುಭವಿಸಬೇಕಾಗುತ್ತದೆ. ಆದರೆ ಅಂತಹ ತಪ್ಪಿನ ಹೊಣೆಯನ್ನು ಯಾವುದೇ ಅಧಿಕಾರಿಯಾಗಲೀ ಅಥವಾ ರಾಜಕಾರಣಿಯಾಗಲೀ ಹೊರುವುದಿಲ್ಲ. ಪಶ್ಚಾತ್ತಾಪವನ್ನೂ ಪಡುವುದಿಲ್ಲ” ಎಂದು ಹೇಳಿದರು.
ಗಾಂಧೀಜಿ ಕಂಡ ಭಾರತದ ಕನಸು ನನಸಾಗುತ್ತದೆ. ಈಗಿನ ಯುವಜನತೆ ಈಗಲ್ಲದಿದ್ದರೂ ಇನ್ನು 20 ವರ್ಷ ಬಿಟ್ಟಾದರೂ ಅದನ್ನು ನೆರವೇರಿಸುತ್ತದೆ ಎಂದು ಅವರು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
