

ನವದೆಹಲಿ:ಮಾಜಿ ಕುಸ್ತಿ ತರಬೇತುದಾರ ಮತ್ತು ವಿನೇಶ್ ಫೋಗಟ್ ಅವರ ಮಾವ ಮಹಾವೀರ್ ಫೋಗಟ್ ಅವರು ಒಲಿಂಪಿಕ್ ತಾರೆ ರಾಜಕೀಯಕ್ಕೆ ಸೇರಿರುವುದು ಮತ್ತು ಮುಂದಿನ ತಿಂಗಳು ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಹಮಿತ ಇಲ್ಲ ಎಂದು ಸೋಮವಾರ ತಿಳಿಸಿದ್ದಾರೆ.ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಹಾವೀರ್ ಫೋಗಟ್ ಅವರು, ವಿನೇಶ್ ರಾಜಕೀಯಕ್ಕೆ ಸೇರುವ ಬದಲು 2028 ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗ: ಕ್ಲೋರಿನ್ ಗ್ಯಾಸ್​ ಸೋರಿಕೆಯಾಗಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ವಿನೇಶ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸುವ ಮೊದಲು ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕಾಗಿತ್ತು ಮತ್ತು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ನಿರ್ಧಾರಕ್ಕೆ ಸಹಮತ ಇಲ್ಲ ಎಂದು ಅವರು ಹೇಳಿದರು.
ರಾಜಕೀಯಕ್ಕೆ ಸೇರುವುದನ್ನು ನಾನು ವಿರೋಧಿಸುತ್ತೇನೆ:ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ. ಅವಳು ತನ್ನ ಒಲಿಂಪಿಕ್ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕಾಗಿತ್ತು. ಅವರು ರಾಜಕೀಯಕ್ಕೆ ಸೇರುವುದನ್ನು ನಾನು ವಿರೋಧಿಸುತ್ತೇನೆ. “ಚಿಕ್ಕ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದು ಅವರ ಮೇಲೆ ಅವಲಂಬಿತವಾಗಿದೆ. ಅವರನ್ನು ಪೋಷಿಸಿ ಬೆಳೆಸುವುದು ನನ್ನ ಕರ್ತವ್ಯವಾಗಿತ್ತು. ಈ ವಯಸ್ಸಿನಲ್ಲಿ ವಿನೇಶ್ ಇನ್ನೂ ಒಂದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದಿತ್ತು. ಈ ಬಾರಿ ಆಕೆ ಚಿನ್ನದ ಪದಕ ಗೆಲ್ಲಬೇಕೆಂದು ನಾನು ಬಯಸಿದ್ದೆ,” ಎಂದು ಮಹಾವೀರ್ ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆದಿದೆ:ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ವಿನೇಶ್ ಫೋಗಟ್ ಅವರ ಪ್ರತಿಭಟನೆಯು ಅವರ ರಾಜಕೀಯ ಜೀವನಕ್ಕೆ ದಾರಿ ಮಾಡಿಕೊಟ್ಟಿದೆಯೇ ಎಂದು ಕೇಳಿದಾಗ, ಪ್ರತಿಭಟನೆಗಳು ವ್ಯಕ್ತಿಯ ವಿರುದ್ಧ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. “ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ನಡೆದಿದೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಿಂದೆ ಯಾವುದೇ ಸಮಸ್ಯೆಗಳಿರಲಿಲ್ಲ. ಚುನಾವಣೆ ಘೋಷಣೆಯಾಯಿತು ಅದರ ನಂತರ, ವಿನೇಶ್ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆದವು. ಇದು ಸತ್ಯ” ಎಂದು ಮಹಾವೀರ್ ಹೇಳಿದ್ದಾರೆ.
2024 ರ ಒಲಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ವಿನೇಶ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದಾಗ, ಆಕೆಯ ಮಾವ ಮಹಾವೀರ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದು, ಶೀಘ್ರದಲ್ಲೇ ಪ್ಯಾರಿಸ್ ಕ್ರೀಡಾಕೂಟದ ಈ ನೋವು ನಿವಾರಿಸುತ್ತದೆ ಎಂದಿದ್ದರು. ವಿನೇಶ್ ಫೋಗಟ್​ ಶುಕ್ರವಾರ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದು, ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆ 2024 ರಲ್ಲಿ ಜೂಲಾನಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಆದರೆ, ವಿನೇಶ್ ಜೊತೆಗೆ ಪಕ್ಷಕ್ಕೆ ಸೇರಿದ ಕುಸ್ತಿಪಟು ಬಜರಂಗ್ ಪುನಿಯಾ ಅವರಿಗೆ ಟಿಕೆಟ್ ನೀಡಲಾಗಿಲ್ಲ.
ಕಾಂಗ್ರೆಸ್ ಸೇರಿದ ನಂತರ ಮಾತನಾಡಿದ ವಿನೇಶ್ ಫೋಗಟ್, ನಮ್ಮ ಕಣ್ಣೀರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅರ್ಥವಾಗಿತ್ತು. ಇದು ನನ್ನ ಜೀವನದಲ್ಲಿ ಹೊಸ ಅಧ್ಯಾಯ. ನಾನು ಇತರ ಕ್ರೀಡಾಪಟುಗಳಿಗೆ ಕೆಲಸ ಮಾಡುತ್ತೇನೆ ಇದರಿಂದ ನಾವು ಅನುಭವಿಸಿದ ಅನುಭವವನ್ನು ಅವರು ಅನುಭವಿಸಬೇಕಾಗಿ ಬರುವುದಿಲ್ಲ ಎಂದು ಹೇಳಿದ್ದರು.

ರಾಜಸ್ಥಾನದಲ್ಲಿ ಭಾರತ ಮತ್ತು ಅಮೆರಿಕ ಸೇನೆಗಳ ಜಂಟಿ ಸಮಾರಾಭ್ಯಾಸ ಆರಂಭ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × two =
Remember me
