ಹೈದರಾಬಾದ್​:ಜೀವಂತ ಮೀನನ್ನು ನುಂಗಲು ಯತ್ನಿಸಿ ಗಂಟಲಲ್ಲಿ ಸಿಲುಕಿ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಮಹೆಬೂಬ್‌ನಗರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿವರಣೆಗೆ ಬರುವುದಾದರೆ…ಮೆಹಬೂಬನಗರ ಜಿಲ್ಲೆಯ ಬಾಳನಗರ ಮಂಡಲದ ಮೇಡಿಗಡ್ಡ ತಾಂಡಾದಿಂದ ಕೆಲವು ಸ್ನೇಹಿತರು ಶನಿವಾರ ಮೀನುಗಾರಿಕೆಗೆ ತೆರಳಿದ್ದರು. ಮೋತಿಘಾನಪುರ ಗ್ರಾಮದ ಬಳಿಯ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಿದ್ದರು. ಅಲ್ಲದೆ, ಬಲೆ ಹಾಕಿ ಸಾಕಷ್ಟು ಮೀನು ಸಹ ಹಿಡಿದರು. ಆದರೆ, ಸ್ನೇಹಿತರ ಗುಂಪಿನಲ್ಲಿ ಒಬ್ಬರಾದ ನೀಲ್ಯಾ ನಾಯ್ಕ್ ಎಂಬುವರು ಮೋಜಿಗಾಗಿ ಜೀವಂತ ಮೀನನ್ನು ತಿನ್ನಲು ಪ್ರಯತ್ನಿಸಿದರು.
ನೀಲ್ಯಾ ನಾಯ್ಕ್ ಮೀನನ್ನು ತೆಗೆದುಕೊಂಡು ಬಾಯಿಗೆ ಹಾಕಿದನು. ಆದರೆ, ಮೀನು ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಸ್ನೇಹಿತರು ಎಷ್ಟೇ ಪ್ರಯತ್ನಿಸಿದರೂ ಮೀನು ಮಾತ್ರ ಹೊರಬರಲಿಲ್ಲ. ಈ ವೇಳೆ ಉಸಿರಾಡಲಾಗದೇ ನೀಲ್ಯಾ ನಾಯ್ಕ ಸ್ಥಳದಲ್ಲೇ ಮೃತಪಟ್ಟರು.
ತನ್ನ ಎಡವಟ್ಟಿನಿಂದಲೇ ನೀಲ್ಯಾ ನಾಯ್ಕ್​ ಪ್ರಾಣವನ್ನು ಕಳೆದುಕೊಂಡನು. ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕ್ಷುಲ್ಲಕ ಚೇಷ್ಟೆಗಳಿಂದ ನೀಲ್ಯಾ ನಾಯ್ಕ್ ಅಕಾಲಿಕ ಮರಣ ಹೊಂದಿದ್ದು, ತನ್ನನ್ನೇ ನಂಬಿದ್ದ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಈ ರೀತಿಯ ಪ್ರಯತ್ನಗಳನ್ನು ಮಾಡದಂತೆ ಸ್ಥಳೀಯರು ಮೀನುಗಾರರಲ್ಲಿ ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
ಕೊನೆಯವರೆಗೂ ಡೇನಿಯಲ್​ ಬಾಲಾಜಿ ಮದುವೆಯಾಗಲಿಲ್ಲ ಏಕೆ? ಇಲ್ಲಿದೆ ಅಸಲಿ ಕಾರಣ

ಮಾಫಿಯಾ ಡಾನ್​​​​, ರಾಜಕಾರಣಿ ಮುಖ್ತಾರ್ ಅನ್ಸಾರಿ ಹಿನ್ನೆಲೆ ಏನು? ದೇಶಭಕ್ತಿ ಕುಟುಂಬದಲ್ಲಿ ಜನಿಸಿದವ ದೊಡ್ಡ ಕ್ರಿಮಿನಲ್​ ಆಗಿದ್ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twelve =
Remember me
