ಬೆಂಗಳೂರು:ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಸುದ್ದಿಯೊಂದು ಬಂದಿದೆ. ಕಳೆದ ಕೆಲವು ದಿನಗಳಿಂದ ಧೋನಿ ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಕೊನೆಗೂ ಈ ಸುದ್ದಿಯ ಕುರಿತಾಗಿ ಈಗ ಸ್ಪಷ್ಟನೆ ಸಿಕ್ಕಿದೆ.
ಐಪಿಎಲ್ ನಂತರ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ, ನಡೆಯುತ್ತಿರುವ ಐಪಿಎಲ್ 2024ರಲ್ಲೂ ಧೋನಿ ಆಡಿದ್ದರು. ಆದರೆ, CSK ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೋತಿದ್ದು ಪ್ಲೇ ಆಫ್ ಅವಕಾಶದಿಂದ ವಂಚಿತವಾಗಿದೆ. ಆ ಪಂದ್ಯದ ನಂತರ ಧೋನಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವ್ಯಾಪಕ ಪ್ರಚಾರ ನಡೆದಿತ್ತು.
ಆರ್‌ಸಿಬಿ ವಿರುದ್ಧದ ಪಂದ್ಯದ ನಂತರ ಧೋನಿ ನಿವೃತ್ತಿ ಘೋಷಿಸಲಿದ್ದಾರೆ  ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೆ ಧೋನಿ ಅಂತಹ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.
ಕ್ರಿಕ್‌ಬಜ್ ಪ್ರಕಾರ, ಧೋನಿ ಅವರು ನಿವೃತ್ತಿಯಾಗುತ್ತಿರುವ ಬಗ್ಗೆ ಸಿಎಸ್‌ಕೆ ತಂಡದಲ್ಲಿ ಯಾರಿಗೂ ಹೇಳಿಲ್ಲ. CSK ನಿರ್ಧಾರ ಪ್ರಕಾರ ಅವರನ್ನು ಮುಂದುವರಿಸಲು ಬಯಸುತ್ತಾರೆ. ಸಿಎಸ್‌ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಅವರು ಧೋನಿ ಬ್ಯಾಟಿಂಗ್ ರೀತಿಯನ್ನು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಆದರೆ, ಇದು ಧೋನಿಯ ಇಚ್ಛೆಯ ಮೇಲೆ ಅವಲಂಬಿತವಾಗಿದೆ.
ಎರಡು ತಿಂಗಳ ನಂತರ ನಿವೃತ್ತಿ ವಿಚಾರದಲ್ಲಿ ಸ್ಪಷ್ಟನೆ ನೀಡುವುದಾಗಿ ಧೋನಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನಲೆಯಲ್ಲಿ.. ಮುಂದಿನ ಐಪಿಎಲ್ ಸೀಸನ್ ನಲ್ಲೂ ಧೋನಿ ಚೆನ್ನೈ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಾರಾ..? ಅದಕ್ಕೂ ಮುನ್ನ ಅವರು ಐಪಿಎಲ್‌ಗೆ ನಿವೃತ್ತಿ ಘೋಷಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಧೋನಿ ಕಡೆಯಿಂದಲೇ ಈ ವಿಚಾರವಾಗಿ ಅಧಿಕೃತವಾದ ಸ್ಪಷ್ಟನೆ ಸಿಗುವವರೆಗೂ ಕಾಯಬೇಕಾಗಿದೆ.
ಬೆಂಗಳೂರಿನ ರೇವ್ ಪಾರ್ಟಿಗೂ ನನಗೂ ಯಾವುದೇ ಸಂಬಂಧವಿಲ್ಲ: ಸ್ಪಷ್ಟನೆ ಕೊಟ್ಟ’ಪವರ್​​’ ಸಿನಿಮಾ ನಟಿ ಹೇಮಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − six =
Remember me
