ಹೈದರಾಬಾದ್​:ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಸಿನಿಮಾಗೆ ಪ್ರವೇಶಿಸುವ ಮೊದಲು ಸಾಕಷ್ಟು ಪ್ರೀತಿ ಮತ್ತು ಖ್ಯಾತಿಯನ್ನು ಪಡೆಯುತ್ತಿದ್ದಾರೆ. ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ಸ್ಟಾರ್​ ಕಿಡ್​​ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಸುದ್ದಿಯಲ್ಲಿದ್ದಾರೆ.
2012 ಜುಲೈ 20ರಂದು ಜನಿಸಿದ ಸಿತಾರಾ ಇಂದು ತಮ್ಮ 11 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಯಾಗಿರುವ ಸಿತಾರಾ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದಕ್ಕಿಂತ ಸರಳವಾಗಿ ಮತ್ತು ಚಿಂತನಶೀಲವಾಗಿ ಆಚರಿಸಿಕೊಂಡಿದ್ದಾರೆ. ಸಿತಾರಾ ತಮ್ಮ ಹುಟ್ಟುಹಬ್ಬವನ್ನು ಮಹೇಶ್ ಬಾಬು ಫೌಂಡೇಶನ್‌ನ ಮಕ್ಕಳೊಂದಿಗೆ ಆಚರಿಸಿಕೊಂಡರು.
ಹುಟ್ಟುಹಬ್ಬದಂದು ಬಡ ಮಕ್ಕಳಿಗೆ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ.ಶಾಲೆಗೆ ನಡೆದುಕೊಂಡು ಹೋಗುತ್ತಿದ್ದವರಿಗೆ  ಸಿತಾರಾ ಸೈಕಲ್ ಖರೀದಿಸಿದರು.ಅವರೆಲ್ಲರ ನಡುವೆ ಕೇಕ್ ಕತ್ತರಿಸಿದ ನಂತರ ಸಿತಾರಾ ಸೈಕಲ್​​ಗಳನ್ನು ಅವರಿಗೆ ಉಡುಗೊರೆಯಾಗಿ ನೀಡಿದರು.ಈ ವಿಷಯವನ್ನು ಅವರ ತಾಯಿ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಪೋಸ್ಟ್ ನೋಡಿದ ನೆಟ್ಟಿಗರು ಸಿತಾರಾ ಅವರನ್ನು ಹೊಗಳುತ್ತಿದ್ದಾರೆ.
A post shared by Namrata Shirodkar (@namratashirodkar)
ಜಾಹೀರಾತಿಗೆ ತೆಗೆದುಕೊಂಡ ಸಂಭಾವನೆಯನ್ನು ಚಾರಿಟಿಗೆ ದೇಣಿಗೆಯಾಗಿ ನೀಡಿ ಎಲ್ಲರ ಮನವನ್ನು ಕದ್ದಿದ್ದಾರೆ. ಈಗ ಮತ್ತೊಂದು ಮಹತ್ಕಾರ್ಯ ಮಾಡಿದ್ದು ತಂದೆಗೆ ತಕ್ಕ ಮಗಳು ಅನ್ನಿಸುತ್ತಿದೆ.VIDEO| ಲೋಕಾಯುಕ್ತ ಅಧಿಕಾರಿ ಹೆಸರು ಹೇಳಿಕೊಂಡು ಕಂದಾಯ ಅಧಿಕಾರಿಗೆ ವಂಚನೆ ಯತ್ನ
ಜಾಹೀರಾತಿಗೆ ತೆಗೆದುಕೊಂಡ ಸಂಭಾವನೆಯನ್ನು ಚಾರಿಟಿಗೆ ದೇಣಿಗೆಯಾಗಿ ನೀಡಿ ಎಲ್ಲರ ಮನವನ್ನು ಕದ್ದಿದ್ದಾರೆ. ಈಗ ಮತ್ತೊಂದು ಮಹತ್ಕಾರ್ಯ ಮಾಡಿದ್ದು ತಂದೆಗೆ ತಕ್ಕ ಮಗಳು ಅನ್ನಿಸುತ್ತಿದೆ.
VIDEO| ಲೋಕಾಯುಕ್ತ ಅಧಿಕಾರಿ ಹೆಸರು ಹೇಳಿಕೊಂಡು ಕಂದಾಯ ಅಧಿಕಾರಿಗೆ ವಂಚನೆ ಯತ್ನ
VIDEO| ಲೋಕಾಯುಕ್ತ ಅಧಿಕಾರಿ ಹೆಸರು ಹೇಳಿಕೊಂಡು ಕಂದಾಯ ಅಧಿಕಾರಿಗೆ ವಂಚನೆ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 16 =
Remember me
