ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ಮಂದಿಯ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು ಸೋಮವಾರ ಹಿರಿಯ ನಿರ್ಮಾಪಕ, ನಿರ್ದೇಶಕ ಮಹೇಶ್​ ಭಟ್​ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಅವರಿಗೆ ನೋಟಿಸ್​ ನೀಡಲಾಗಿದೆ ಎಂದು ಹೇಳಲಾಗಿದೆ.
ಇದೇ ವಿಷಯವಾಗಿ ಶೀಘ್ರದಲ್ಲೇ ಕರಣ್​ ಜೋಹರ್​ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈಗಾಗಲೆ ಇವರ ಮ್ಯಾನೇಜರ್​ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ ಎಂದು ಮುಂಬೈ ಪೊಲೀಸ್​ ಮೂಲಗಳು ಹೇಳಿವೆ.
ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಕರಣ್​ ಜೋಹರ್​ ಅವರ ಹೆಸರು ಜೋರಾಗಿ ಕೇಳಿಬಂದಿತ್ತು. ಅಲ್ಲದೆ, ಇವರ ವಿರುದ್ಧ ಸ್ವಜನಪಕ್ಷಪಾತದ ಆರೋಪವೂ ಇದೆ. ಆದ್ದರಿಂದ, ಮೊದಲಿಗೆ ಅವರ ಮ್ಯಾನೇಜರ್​ ಅನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿವೆ.
ಇವರ ವಿಚಾರಣೆಯ ಬಳಿಕ ಕರಣ್​ ಜೋಹರ್​ ವಿಚಾರಣೆ ನಡೆಸುವ ಅವಶ್ಯಕತೆಯನ್ನು ನಿರ್ಧರಿಸಲಾಗುವುದು. ಬಳಿಕ ಕರಣ್​ ಜೋಹರ್​ ಅವರನ್ನು ವಿಚಾರಣೆಗೆ ಕರೆಸಲಾಗುವುದು ಎಂದು ತಿಳಿಸಿವೆ.
ಇದನ್ನೂ ಓದಿ:ನೀನು ಬಿ-ಗ್ರೇಡ್​ ನಟಿಯಲ್ಲ … ಹಾಗಂತ ತಾಪ್ಸಿಗೆ ಹೇಳಿದ್ದು ಯಾರು?
ಮಹೇಶ್​ ಭಟ್​ ಅವರಿಗೆ ಬಾಂದ್ರಾ ಪೊಲೀಸ್​ ಠಾಣೆಗೆ ಬರಲು ಸೂಚಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಬರಲು ಸೂಚಿಸಿದ್ದು, ಅಲ್ಲಿಗೆ ಬಂದಾಗ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿವೆ.
ವಹಿವಾಟಿನ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಬಾಲಿವುಡ್​ನಲ್ಲಿ ಹೊರಗಿನ ಪ್ರತಿಭೆಗಳನ್ನು ಹೊಸಕುವ ಕೆಟ್ಟ ಸಂಪ್ರದಾಯ ಮತ್ತು ದುಷ್ಟಕೂಟ ಏನಾದರು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ.
ಮಾಹಿತಿಯ ಪ್ರಕಾರ ಒಟ್ಟು 39 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ. ಸಿನಿವಿಮರ್ಶಕ ರಾಜೀವ್​ ಮಸಾಮಡ್​, ನಿರ್ದೇಶಕ-ನಿರ್ಮಾಪಕ ಸಂಜಯ್​ ಲೀಲಾ ಬನ್ಸಾಲಿ, ಚಿತ್ರನಿರ್ಮಾಪಕ ಆದಿತ್ಯ ಚೋಪ್ರಾ ಅಲ್ಲದೆ, ಸುಶಾಂತ್​ ಸಿಂಗ್​ ರಜಪೂತ್​ ಜತೆ ಸಂಪರ್ಕ ಹೊಂದಿದ್ದವರು, ಸ್ನೇಹಿತರು ಕೂಡ ಇದರಲ್ಲಿ ಸೇರಿದ್ದಾರೆ.
ಸೊಸೆಯ ದುಷ್ಟಶಕ್ತಿ ಓಡಿಸಲು ಮಾವನ ಸಾಯಿಸಿದ ‘ದೇವಮಾನವ’ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
