ಅಮರಾವತಿ:ತೆಲುಗು ಚಿತ್ರರಂಗದ ಪ್ರಸಿದ್ಧ ವಿಮರ್ಶಕ, ಬಿಗ್​ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಹಾಗೂ ನಟ ಮಹೇಶ್ ಕಾಥಿ ಶನಿವಾರದಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಹೇಶ್ ಕಾಥಿ ಅವರು ಕಳೆದ ಜೂನ್ 25ರಂದು ನೆಲ್ಲೂರು ಜಿಲ್ಲೆಯ ಕೊಡವಲೂರು ಮಂಡಲದ ಬಳಿ ಚೆನ್ನೈ-ಕೋಲ್ಕತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಅವರನ್ನು ಚೆನ್ನೈನ ಅಪೊಲೊ ಗ್ರೀಮ್ಸ್ ರಸ್ತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಸಂಜೆ 4 ಗಂಟೆ ಸಮಯಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಮಹೇಶ್ ತೆಲುಗು ಸಿನಿಮಾಗಳ ವಿಮರ್ಶೆ ಮಾಡಿ ಭಾರೀ ಸುದ್ದಿಯಾಗುತ್ತಿದ್ದರು. ಪವನ್ ಕಲ್ಯಾಣ್ ಸಿನಿಮಾಗಳ ಬಗ್ಗೆ ಅವರು ಮಾಡುತ್ತಿದ್ದ ವಿಮರ್ಶೆ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಬಿಗ್​ಬಾಸ್​ನಲ್ಲೂ ಸ್ಪರ್ಧಿಸಿದ್ದ ಅವರು ಕೆಲವು ವಾಹಿನಿಗಳಲ್ಲಿ ಪ್ಯಾನೆಲ್​ ಡಿಬೆಟ್​ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಒಂದೆರಡು ಸಿನಿಮಾಗಳಲ್ಲೂ ನಟಿಸಿದ್ದರು. ಧಾರ್ಮಿಕ ವಿಚಾರದಲ್ಲಿ ಹೇಳಿಕೆ ನೀಡಿ ವಿವಾದವನ್ನೂ ಮೈ ಮೇಲೆ ಎಳೆದುಕೊಂಡಿದ್ದರು. (ಏಜೆನ್ಸೀಸ್)
ಇಂದು ಬೇಬಿ ಶಾಮಿಲಿ ಬರ್ತ್​ ಡೇ: ಕನ್ನಡಿಗರ ಮನ ಗೆದ್ದಿದ್ದ ಪುಟಾಣಿಗೆ ಈಗೆಷ್ಟು ವಯಸ್ಸು?

‘ಫ್ಯಾಮಿಲಿ ಮ್ಯಾನ್​ನಿಂದಾಗಿ ಸಾವಿರಾರು ಸಂಬಂಧಗಳು ಬರ್ತಿವೆ’ ವೆಬ್ ಸೀರಿಸ್​ನ ಅನುಭವ ಹಂಚಿಕೊಂಡ ಆಶ್ಲೇಷ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + eleven =
Remember me
