ನವದೆಹಲಿ:ಈ ವರ್ಷ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾರತೀಯ ವಾಯುಪಡೆಯ ತುಕಡಿಯಲ್ಲಿ ಮಹಿಳಾ ಅಗ್ನೀವಿರ ಸೈನಿಕರು ಭಾಗವಹಿಸಲಿದ್ದಾರೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಸೆಪ್ಟೆಂಬರ್​ 2022ರಲ್ಲಿ ಜಾರಿಗೊಳಿಸಲಾದ ಅಗ್ನಿಪಥ್​ ಯೋಜನೆಯು ದೇಶದ ಸಶಸ ಪಡೆಗಳಲ್ಲಿ ಯುವಜನರು ನಾಲ್ಕು ವರ್ಷಗಳ ಸೇವೆ ಸಲ್ಲಿಸಲು ಅವಕಾಶ ಒದಗಿಸುತ್ತದೆ.
ಅದರ ನಂತರ ಸಶಸ್ತ್ರ ಪಡೆಗಳಿಗೆ ಸಾಮಾನ್ಯ ಕೇಡರ್​ ಆಗಿ ಸೇರ್ಪಡೆಗೊಳ್ಳಲು ಆಯ್ಕೆಯಾದವರು ಕನಿಷ್ಠ 15 ವರ್ಷಗಳ ಅವಧಿಗೆ ಸೇವೆ ಸಲ್ಲಿಸಬಹುದು. ಈ ವರ್ಷ ಗಣರಾಜ್ಯೋತ್ಸವ ಪರೇಡ್​ನಲ್ಲಿ ರಕ್ಷಣಾ ಪಡೆಗಳ ಎರಡು ಮಹಿಳಾ ತುಕಡಿಗಳು ಪಥಸಂಚಲನ ನಡೆಸಲಿವೆ. 144 ಸಿಬ್ಬಂದಿ ಒಳಗೊಂಡಿರುವ ತುಕಡಿಯಲ್ಲಿ ಎಲ್ಲ ಮಹಿಳಾ ಸೈನಿಕರು ಇರುತ್ತಾರೆ. ಅದರಲ್ಲಿ 60 ಮಂದಿ ಸೇನೆಯಿಂದ ಮತ್ತು ಉಳಿದವರು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಿಂದ ಇರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಪರೇಡ್​ಗಾಗಿ ಫುಲ್​ ಡ್ರೆಸ್​ ರಿಹರ್ಸಲ್​ಗಳು ಹಲವು ದಿನಗಳಿಂದ ದೆಹಲಿಯ ಚಳಿಗಾಲದ ಮುಂಜಾನೆಯಲ್ಲಿ ನಡೆಯುತ್ತಿವೆ. ಈಶಾನ್ಯದಿಂದ 45 ಹುಡುಗಿಯರನ್ನು ಒಳಗೊಂಡ ಬ್ಯಾಂಡ್​ ಮೊದಲ ಬಾರಿಗೆ ಶಿಬಿರದಲ್ಲಿ ಭಾಗವಹಿಸುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
