ಮುಂಬೈ:ಬಾಲಿವುಡ್​​ನಲ್ಲಿ ಮನಮೋಹಕ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ಪಾಕಿಸ್ತಾನಿ ನಟಿ ಮಹಿರಾ ಖಾನ್ ಅವರು ಮಾನಸಿಕ ಖಿನ್ನತೆಯಿಂದ  ಬಳಲುತ್ತಿದ್ದಾರೆ. ಈ ಕುರಿತಾಗಿ ಮೊದಲ ಬಾರಿಗೆ ಮಾತನಾಡಿರುವುದು ಸುದ್ದಿಯಾಗಿದ್ದಾರೆ.
ಮಹಿರಾ ಖಾನ್, ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದೇ ಮೊದಲ ಬಾರಿ ಅವರು ಅಭಿಮಾನಿಗಳ ಮುಂದೆ ತನ್ನ ಖಾಯಿಲೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸುಮಾರು 6-7 ವರ್ಷಗಳಿಂದ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿರುವ ಮಹಿರಾ ಇದಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಮಹಿರಾ, ಪಾಕಿಸ್ತಾನಿ ನಟರು ಭಾರತದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದಾಗ ನನಗೆ ಈ ಅನಾರೋಗ್ಯ ಇರುವುದು ಗೊತ್ತಾಯ್ತು. ನಾನು ಏನನ್ನಾದರೂ ಯೋಚಿಸುವ ಅಥವಾ ಅರ್ಥಮಾಡಿಕೊಳ್ಳುವ ಮೊದಲು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ದ್ವೇಷಿಸಲು ಶುರು ಮಾಡಿದ್ದರು. ನಾನು ಏನು ಮಾಡಬೇಕು ಮತ್ತು ನನ್ನ ವೃತ್ತಿಜೀವನಕ್ಕೆ ಏನಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಕಳೆದ ವರ್ಷ, ನನ್ನ ಸ್ಥಿತಿ ಕೆಟ್ಟದಾಗಿತ್ತು.ಹಾಸಿಗೆಯಿಂದ ಏಳಲು ನನಗೆ ಸಾಧ್ಯವಾಗ್ತಿರಲಿಲ್ಲ. ಈವರೆಗೂ ನಾನು ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖಳಾಗಿಲ್ಲ. ಜನರ ಪ್ರತಿಕ್ರಿಯೆ ಮತ್ತು ಸಾಮಾಜಿಕ ಮಾಧ್ಯಮ ಟ್ರೋಲಿಂಗ್‌ನಿಂದಾಗಿ ನನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ನಟಿ ಹೇಳಿದ್ದಾರೆ.
ಜನರು ತಮ್ಮ ಮಾನಸಿಕ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು. ಕ್ಲಿನಿಕಲ್ ಖಿನ್ನತೆಯನ್ನು ಸಾಮಾನ್ಯವೆಂದು ಪರಿಗಣಿಸಿ ಔಷಧಿ ತೆಗೆದುಕೊಳ್ಳಬೇಕು. ನಾನು ಅದನ್ನು ನಿರ್ಲಕ್ಷ್ಯ ಮಾಡಿದ ಕಾರಣ, ಮಾತ್ರೆ ಬಿಟ್ಟ ಕಾರಣ ಮತ್ತೆ ಹಾಸಿಗೆ ಹಿಡಿಯಬೇಕಾಯ್ತು ಎನ್ನುತ್ತಾರೆ ಮಹಿರಾ.
ಬೈಪೋಲಾರ್ ಡಿಸಾರ್ಡರ್ ಲಕ್ಷಣ:ವ್ಯಕ್ತಿಯ ಮನಸ್ಥಿತಿಯಲ್ಲಿ ತ್ವರಿತ ಬದಲಾವಣೆ ಕಂಡುಬರುತ್ತದೆ. ಈ ಮಾನಸಿಕ ಸ್ಥಿತಿಯಲ್ಲಿ ಎರಡು ಬದಲಾವಣೆಯನ್ನು ನೀವು ಕಾಣಬಹುದು. ಒಂದರಲ್ಲಿ ವ್ಯಕ್ತಿ ಅತೀ ಸಕ್ರಿಯವಾಗಿರುತ್ತಾನೆ, ಹೆಚ್ಚು ಮಾತನಾಡುತ್ತಾನೆ. ಇನ್ನೊಂದರಲ್ಲಿ ಶಾಂತವಾಗಿರುತ್ತಾನೆ ಮತ್ತು ದುಃಖಿತನಾಗಿರುತ್ತಾನೆ. ಎರಡನೇ ಸ್ಥಿತಿಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯೋಚಿಸುವ ಅಪಾಯವಿರುತ್ತದೆ.
2017ರಲ್ಲಿ ಶಾರುಕ್ ಖಾನ್ ಅಭಿನಯದ ರಾಯಿಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಹಿರಾ ಖಾನ್ ರನ್ನು ಜನರು ಅಷ್ಟಾಗಿ ಮೆಚ್ಚಿಕೊಂಡಿರಲಿಲ್ಲ. ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಹಿಟ್ ಆಗಿರಲಿಲ್ಲ. ಅದ್ರ ಬೆನ್ನಲ್ಲೆ ಮಹಿರಾ, ರಣಬೀರ್ ಕಪೂರ್ ಜೊತೆ ಧೂಮಪಾನ ಮಾಡ್ತಿದ್ದ ಫೋಟೋ ವೈರಲ್ ಆಗ್ತಿದ್ದಂತೆ ಮಹಿರಾ ಟ್ರೋಲ್ ಆಗಿದ್ದರು.
‘ನನಗೆ ಮೋಸವಾಗಿದೆ…ಒಳ್ಳೆಯ ಸಲಹೆ ನೀಡಲು ಯಾರಾದರೂ ಇದ್ದರೆ ನಾನು ಎಲ್ಲರಂತೆ ಸಂತೋಷವಾಗಿರುತ್ತಿದ್ದೆ’ ಎಂದ ಹೆಬ್ಬುಲಿ ನಟಿ ಅಮಲಾ ಪೌಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
