ನವದೆಹಲಿ:ಉದ್ಯಮಿ ಒಬ್ಬರಿಂದ ಲಂಚ ಹಾಗು ದುಬಾರಿ ಉಡುಗೊರೆಗಳನ್ನು ಪಡೆದು ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಸಂಸತ್​ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಈ ವಿಚಾರವಾಗಿ ತನಿಖೆಯಾಗಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಆಗ್ರಹಿಸಿದ್ದಾರೆ.
ಈ ಕುರಿತು ಲೋಕಸಬೆ ಸ್ಪೀಕರ್​ ಅವರಿಗೆ ಪತ್ರಗಳನ್ನು ಬರೆದಿರುವ ಅವರು ತೃಣಮೂಲ ಸಂಸದೆಗೆ 2.75 ಕೋಟಿ ರೂಪಾಯಿ ಹಣ , ಐಫೋನ್​ ಸೇರಿದಮತೆ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಹಾಗೂ ತೃಣಮೂಲ ಪಕ್ಷದ ಸಂಸದರು ಪ್ರತಿ ಅಧಿವೇಶನದಲ್ಲೂ ಅದಾನಿ ವಿಚಾರವಾಗಿ ಕೂಗಾಡಿ ಕಲಾಪವನ್ನು ವ್ಯರ್ಥ ಮಾಡುತ್ತಾರೆ. ಪ್ರತಿಬಾರಿಯೂ ಈಗೇಕೆ ಆಗುತ್ತದೆ ಎಂದು ವಿಚಾರಿಸಿದಾಗ ಅವರು ಹೀರಾನಂದಿನಿ ಸಂಸ್ಥೆಯ ಮಾಲೀಕರಿಂದ ಲಂಚ ಪಡೆದು ಅವರು ಹೇಳಿದ ಹಾಗೆ ಇವರು ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ತಿಳಿದು ಬಂದಿತ್ತು.
11 सांसद को इसी भारतीय संसद ने प्रश्न पैसे लेने के कारण सदस्यता रद्द कर दिया था, आज भी चोरी और सीनाज़ोरी नहीं चलेगी,एक व्यापारी ख़राब लेकिन दूसरे व्यापारी से 35 जोड़ी जूते श्रीमती मारकोस की आत्मा की तरह Hermes,LV,Gucci का बैग,पर्स,कपड़े,नक़द हवाला से पैसे नहीं चलेंगे । सदस्यता तो…
2019-23ರ ವರೆಗಿನ ಅಧಿವೇಶನದಲ್ಲಿ ಸಂಸದೆ ಮಹುವಾ ಅವರು 61 ಪ್ರಶ್ನೆಗಳನ್ನು ಕೇಳಿದ್ದು, ಈ ಪೈಕಿ 50 ಪ್ರಶ್ನೆಗಳು ಹೀರಾನಂದಿನಿ ಹಾಗೂ ಅದಾನಿಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ಈಗಾಗಲೇ ಸಿಬಿಐಗೆ ದೂರು ನೀಡಿದ್ದು, ಲೋಕಸಭೆ ವತಿಯಿಂದ ವಿಶೇಷ ಸಮಿತಿ ಒಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ತಮ್ಮ ವಿನಂತಿಸಿಕೊಳ್ಳುತ್ತೇನೆ ಎಂದು ಸ್ಪೀಕರ್​ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಪಾಕ್​ ವಿರುದ್ಧದ ಗೆಲುವಿಗೆ ಮೊಹಬತ್​ ಕಿ ದುಕಾನ್ ಮಾತ್ರ​ ಯಾಕೆ ಸುಮ್ಮನಿತ್ತು; ರಾಹುಲ್​ ಗಾಂಧಿ ಹೆಸರೇಳದೆ ಕುಟುಕಿದ ಅಸ್ಸಾಂ ಸಿಎಂ
ಇನ್ನು ತಮ್ಮ ವಿರುದ್ಧ ತನಿಖೆಗೆ ಆಗ್ರಹಿಸಿ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಸಂಸದೆ ಮಹುವಾ ಮೊಯಿತ್ರಾ, ಬಿಜೆಪಿ ಸಂಸದ ನಿಶಿಕಾಂತ್​ ದುಬೆ ನನ್ನ ವಿರುದ್ಧ ಮಾಡಿರುವ ಅಷ್ಟು ಆರೋಪಗಳು ಸುಳ್ಳು. ನನ್ನ ವಿರುದ್ಧ ಯಾವುದೇ ರೀತಿಯ ತನಿಖೆ ನಡೆಸಿದ್ದರು ನಾನು ಸಹಕರಿಸಲು ಸಿದ್ದಳಾಗಿದ್ದೇನೆ. ಬಿಜೆಪಿಯವರು ನನ್ನ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ.
ಹೀರಾನಂದಿನ ಗ್ರೂಪ್ಸ್​ ಹಾಗೂ ನನಗೂ ಯಾವುದೇ ತರಹದ ಸಂಬಂಧವಿಲ್ಲ. ನಾನು ಒಬ್ಬ ಜನಪ್ರತಿನಿಧಿಯಾಗಿ ಸರ್ಕಾರದ ವೈಫಲ್ಯಗಳನ್ನು ಅಧಿವೇಶನದ ಸಮಯದಲ್ಲಿ ಪ್ರಶ್ನಿಸಿದ್ದೇನೆ. ಅದನ್ನು ಇವರು ಲಂಚ ಪಡೆದಿದ್ದಾರೆಂದು ಬಿಂಬಿಸಲಿ ಹೊರಟಿರುವುದು ದ್ವೇಷ ರಾಜಕಾರಣವಲ್ಲದೇ ಬೇರೇನೂ ಅಲ್ಲ ಎಂದು ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸಂಸದೆ ಮಹುವಾ ಮೊಯಿತ್ರಾ ತಳ್ಳಿ ಹಾಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 11 =
Remember me
