ಬೆಂಗಳೂರು:ಸ್ವದೇಶಿ ನಿರ್ಮಿತ ಮಾನವ ರಹಿತ ವಿಮಾನದ ಪರೀಕ್ಷಾರ್ಥ ಯಶಸ್ವಿಯಾಗಿದ್ದು, ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ತಮ್ಮ ಟ್ವಿಟ್ಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಾನವ ರಹಿತ ವಿಮಾನವನ್ನು ತಯಾರಿಸಿದ್ದು, ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಇಂದು (ಜೂನ್​ 1) ಇದರ ಪರೀಕ್ಷಾರ್ಥ ಪ್ರಯೋಗ ಮುಗಿದಿದ್ದು, ಭಾರತೀಯ ರಕ್ಷಣಾ ಪಡೆಗೆ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಎಂದು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಮಾನವ ರಹಿತ ವಿಮಾನ ಪರೀಕ್ಷಾರ್ಥ ಯಶಸ್ವಿಗಾಗಿ ಡಿಆರ್​ಡಿಒ ವನ್ನು ಅಭಿನಂದಿಸಿದ್ದಾರೆ. ಇದು ಸ್ವಾಯತ್ತ ವಿಮಾನದ ಪ್ರಮುಖ ಸಾಧನೆಯಾಗಿದ್ದು, ಮಿಲಿಟರಿ ವ್ಯವಸ್ಥೆಗಳಲ್ಲಿ ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಡಿಆರ್​ಡಿಒ ಅಧ್ಯಕ್ಷ ಡಾ.ಜಿ.ಸತೀಶ್​ ರೆಡ್ಡಿ ಅವರು ವಿಮಾನದ ವಿನ್ಯಾಸ, ಅಭಿವೃದ್ಧಿ ಮತ್ತು ಪರೀಕ್ಷಾರ್ಥ ಯಶಸ್ವಿಗಾಗಿ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.
ಏನಿದರ ವಿಶೇಷತೆ: ಸ್ವಯಂಚಾಲಿತ, ಚಾಲಕ ರಹಿತ ವಿಮಾನ ಇದಾಗಿದ್ದು, ಟೇಕ್​ ಆಫ್​ ನಿಂದ ಹಿಡಿದು ನ್ಯಾವಿಗೇಷನ್​ ಮೂಲಕ ಪರಿಪೂರ್ಣ ಹಾರಾಟವನ್ನು ಮಾಡಲಿದೆ. ಭವಿಷ್ಯದಲ್ಲಿ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ಪಾತ್ರ ವಹಿಸಲಿದೆ.(ಏಜೆನ್ಸೀಸ್​)
ಅಮಿತ್​ ಶಾ ಅವರು ಈ ಮಾತು ನಡೆಸಿಕೊಟ್ಟಿದ್ದರೆ ಬಿಜೆಪಿ ಜತೆಯಲ್ಲೇ ಇರುತ್ತಿದ್ದೆವು: ಉದ್ಧವ್​ ಠಾಕ್ರೆ

ಸದ್ಯದಲ್ಲೇ ಬಿಜೆಪಿಗೆ ಅಮರಿಂದರ್​ ಸಿಂಗ್​​​ ಸೇರ್ಪಡೆ: ಪಂಜಾಬ್​ ಲೋಕ್​​ ಕಾಂಗ್ರೆಸ್​ ವಿಲೀನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 2 =
Remember me
