ನವದೆಹಲಿ:ಸದ್ಯ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.
ಸೋನಿಯಾ ಅವರ ಇಡಿ ವಿಚಾರಣೆಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದ್ದು, ಅಲ್ಲಲ್ಲಿ ಪ್ರತಿಭಟನೆ ಕೂಡ ಕೈಗೊಂಡಿದೆ. ಈ ನಡುವೆ ಯಾವುದಕ್ಕೂ ಹೆದರಲ್ಲ ಎಂದಿದ್ದ ಸೋನಿಯಾ ಅವರ ಈ ಹಿಂದಿನ ವಿಡಿಯೋವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.
ಇದೇ ವಿಡಿಯೋ ಈಗ ನೆಟ್ಟಿಗರ ಹಂಚಿಕೊಳ್ಳುವ ಮೂಲಕ ಯಾರಿಗೂ ಹೆದರದ ಕಾಂಗ್ರೆಸ್​​ ಇಂದು ಇಡಿ ಮುಂದೆ ತಲೆಬಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ತಮಿಳುನಾಡು ಭೇಟಿ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುವ ವೇಳೆ ಸೋನಿಯಾ ಗಾಂಧಿ ಅವರು ನಾನು ಇಂದಿರಾಗಾಂಧಿ ಅವರ ಸೊಸೆ, ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ. ಈ ವೇಳೆ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಹಾಗೂ ಕಾಂಗ್ರೆಸ್​ ಮುಖಂಡ ವೇಣುಗೋಪಾಲ್​ ಕೂಡ ಈ ವಿಡಿಯೋದಲ್ಲಿ ಇದ್ದಾರೆ.
நான் இந்திராவின் மருமகள், யாருக்கும் அஞ்ச மாட்டேன்.🔥pic.twitter.com/3mnwqbv88s
— Tamil Nadu Congress Committee (@INCTamilNadu)July 21, 2022

ಹಲವು ಬಾರಿ ವಿಚಾರಣೆಗೆ ಕರೆದಿದ್ದರೂ, ಗೈರಾಗಿದ್ದ ಸೋನಿಯಾ ಗಾಂಧಿ ಅವರು ಗುರುವಾರ ಇಡಿ ಮುಂದೆ ಹಾಜರಾಗಿದ್ದರು. ಇದೇ ಪ್ರಕರಣದಲ್ಲಿ ಹಲವು ಬಾರಿ ರಾಹುಲ್​ ಗಾಂಧಿ ಅವರ ವಿಚಾರಣೆ ಕೂಡ ನಡೆಸಲಾಗಿದೆ.(ಏಜೆನ್ಸೀಸ್​)
VIDEO: ಅತಿ ವೇಗದ ಚಾಲನೆ ಮಾಡಿ ಟ್ರೋಲ್​​ ಆದ ಬಾಹುಬಲಿ ನಟ ಪ್ರಭಾಸ್​! ನೆಟ್ಟಿಗರು ಹೇಳಿದ್ದು ಹೀಗೆ

ಅಮೆರಿಕದಲ್ಲಿದ್ದ ಭಾರತೀಯ ವಿದ್ಯಾರ್ಥಿನಿ 3 ವರ್ಷಗಳಿಂದ ನಾಪತ್ತೆ! ಕುಟುಂಬಸ್ಥರಿಂದ ತನಿಖಾ ಸಂಸ್ಥೆ ಮೊರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
