ಝಲಾವರ್​:ಪೂರ್ತಿ ದೇಶವೇ ಬೆಚ್ಚಿ ಬೀಳುವಂತಹ ಅಘಾತಕಾರಿ ಘಟನೆಯೊಂದು ರಾಜಸ್ಥಾನದ ಝಲಾವರ್​ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಸಮುದಾಯಕ್ಕೆ ಸೇರಿರುವ 36 ಮಹಿಳೆಯರು ಮತ್ತು ಮಕ್ಕಳನ್ನು 100 ಜನರ ಗ್ಯಾಂಗ್​ ಒಂದು ಅಪಹರಣ ಮಾಡುವ ಪ್ರಯತ್ನ ಮಾಡಿದೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಹೈದರಾಬಾದ್ ಮನೆಗೆ ಹೊಸ ಅತಿಥಿ: ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ
ರಾಜಸ್ಥಾನದ ಉನ್ಹೆಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಮನ್ ದೇವ್ರಿಯಾ ಮತ್ತು ಹಜ್ಡಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಪಹರಣಕಾರರು ಮಧ್ಯಪ್ರದೇಶದ ರತ್ನಂ ಜಿಲ್ಲೆಯ ಅಲೋಟ್ ತಹಸಿಲ್‌ನ ಕಲ್ಸಿಯಾ ಗ್ರಾಮದಿಂದ ಬಂದವರು ಎನ್ನಲಾಗಿದೆ. ಈ ಗ್ಯಾಂಗ್​ ಕೈನಲ್ಲಿ ಕತ್ತಿ ಸೇರಿ ಹಲವಾರು ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದು ಕಂಜಾರ್ ಸಮುದಾಯಕ್ಕೆ ಸೇರಿದ 36 ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲು ಮುಂದಾಗಿದ್ದಾರೆ. ಅವರನ್ನೆಲ್ಲ ಟ್ರಕ್​ ಮತ್ತು ಮಿನಿ ಬಸ್​ಗೆ ತುಂಬಿಸಲಾಗಿದೆ. ಸಂತ್ರಸ್ತರನ್ನು ನಂತರ ಮಧ್ಯಪ್ರದೇಶದ ಅಲೋಟ್‌ಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ:ಕಾಡಿನಲ್ಲಿ ಬಸವನ ಹುಳು ತಿಂದೇ ಬದುಕುತ್ತಿದ್ದ ವ್ಯಕ್ತಿ! ನಾಡಿಗೆ ಬಂದೊಡನೆ ಅರೆಸ್ಟ್​ ಮಾಡಿದ ಪೊಲೀಸರು
ಅಷ್ಟರಲ್ಲಿ ಕಾರ್ಯಪ್ರವರ್ತರಾದ ಝಲಾವರ್​ ಜಿಲ್ಲಾ ಪೊಲೀಸರು, ವಾಹನಗಳನ್ನು ಅಡ್ಡಗಟ್ಟಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. ಅಪಹರಣಕಾರರ ಗ್ಯಾಂಗ್​ನಲ್ಲಿ ಕೇವಲ ಆರು ಮಂದಿ ಮಾತ್ರ ಸಿಕ್ಕಿಬಿದ್ದಿದ್ದಾರೆ. ಅಪಹರಣ ಮಾಡುತ್ತಿರುವ ವಿಡಿಯೋ ಸಿಕ್ಕಿದ್ದು, ಅದರಲ್ಲಿ ಆರೋಪಿಗಳನ್ನು ಗುರುತಿಸಿ, ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ಅಪಹರಣ ನಡೆಸಲಾಗುತ್ತಿತ್ತು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್​)
ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
