ನವದೆಹಲಿ: ಉಗ್ರರ ದಾಳಿಗೆ ಬಲಿಯಾದ ಮೇಜರ್​ ವಿಭೂತಿ ಶಂಕರ್​ ದೌಂಡಿಯಾಲ್​ ಅವರ ಪತ್ನಿ ನಿತಿಕಾ ಕೌಲ್​ ಅವರು ಭಾರತೀಯ ಸೇನೆಗೆ ಸೇರಲು ಅಂತಿಮ ಮೆರಿಟ್​ ಪಟ್ಟಿ ಪ್ರಕಟಣೆಯಾಗುವುದನ್ನು ಕಾಯುತ್ತಿದ್ದಾರೆ.
ದೆಹಲಿಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಿತಿಕಾ ಕೌಲ್​ ಅವರು ಸೇನೆಯ ಅಂತಿಮ ಸಂದರ್ಶನ ಎದುರಿಸಿ ಹುದ್ದೆ ಪಡೆದು ಪತಿಯಂತೆ ಉತ್ತಮ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ.
ನಿತಿಕಾ ಕೌಲ್​ ಅವರ ಪತಿ ವಿಭೂತಿ ಶಂಕರ್​ 2019ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ನಡೆದ ಬಾಂಬ್​ ಸ್ಫೋಟದಲ್ಲಿ ​ ಬಲಿಯಾಗಿದ್ದರು. ಇವರು 2018ರ ಏಪ್ರಿಲ್​ನಲ್ಲಿ ನಿತಿಕಾ ಅವರನ್ನು ವಿವಾಹವಾಗಿದ್ದರು.
ನಿತಿಕಾ ಕೌಲ್​ ಅವರು ಶಾರ್ಟ್ ಸರ್ವೀಸ್ ಕಮಿಷನ್ (ಎಸ್‌ಎಸ್‌ಸಿ) ಪರೀಕ್ಷೆ ಬರೆದು ಉತ್ತಮ ಅಂಕ ಪಡೆದಿದ್ದಾರೆ. ನಂತರ ಸಂದರ್ಶನ ಎದುರಿಸಿದ್ದಾರೆ. ಸಂದರ್ಶನದಲ್ಲಿ ಉತ್ತಮ ಅಂಕ ಬರುವ ಭರವಸೆ ಹೊಂದಿದ್ದಾರೆ.
ಮೆರಿಟ್​ಪಟ್ಟಿಯಲ್ಲಿ ಹೆಸರು ಪ್ರಕಟಗೊಂಡ ನಂತರ ಅವರು ಸೇವೆಗೆ ಸೇರ್ಪಡೆಯಾಗಲಿದ್ದಾರೆ. ಪತಿ ಮರಣದ ನಂತರ ನಿತಿಕಾ ಅವರು ಪಾಲಕರೊಂದಿಗೆ ದೆಹಲಿಯಲ್ಲಿ ವಾಸ ಮಾಡುತ್ತಿದ್ದಾರೆ. ಪತಿಯ ಸಾವಿನ ಆಘಾತದಿಂದ ಹೊರ ಬರಲು ಹಲವು ಸಮಯ ತೆಗೆದುಕೊಂಡಿದ್ದೇನೆ. ಕೆಲಸಕ್ಕೆ ಸೇರಿದ್ದರಿಂದ ನೋವು ಮರೆಯಲು ಸಾಧ್ಯವಾಯಿತು. ಪತಿ ನಿಧನದ 15 ದಿನಗಳ ನಂತರ ಕೆಲಸಕ್ಕೆ ಮರಳಿದೆ. ಕೆಲಸಕ್ಕೆ ಹೋಗುವುದು ಕಷ್ಟವಾದರೂ ನೋವು ಮರೆಯಲು ಹಾಗೂ ಕುಟುಂಬ ಪಾಲನೆಗೆ ಕೆಲಸ ಅನಿವಾರ್ಯವಾಗಿತ್ತು. ಸೇನೆಗೆ ಕಳೆದ ಸೆಪ್ಟಂಬರ್​ನಲ್ಲಿ ಅವರು ಅರ್ಜಿ ಸಲ್ಲಿಸಿದ್ದೆ ಎಂದು ಅವರು ಹೇಳಿದ್ದಾರೆ.
ನಾನು ಸೇನೆಗೆ ಸೇರುವುದು ಕುಟುಂಬದವರಿಗೆ ಇಷ್ಟ ಇರಲಿಲ್ಲ. ಪತಿಯಂತೆ ಕೆಲಸ ಮಾಡುವುದಾಗಿ ಕುಟುಂಬದವರ ಮನವೊಲಿಸಿದ್ದೇನೆ ಎಂದು ಕೌಲ್​ ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
