ತಿರುವನಂತಪುರಂ:ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಸಂಭವಿಸುವ ಮಕರಜ್ಯೋತಿಯನ್ನು (ಮಕರವಿಳಕ್ಕು) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರ ಜ್ಯೋತಿ ಬೆಳಗಿದೆ. ಮೂರು ಬಾರಿ ಜ್ಯೋತಿ ದರ್ಶನವಾಗಿದೆ. ಮಕರವಿಳಕ್ಕು ದರ್ಶನವಾಗುತ್ತಿದ್ದಂತೆ ಭಕ್ತರು ಅಯ್ಯಪ್ಪ ನಾಮಸ್ಮರಣೆ ಮಾಡಿದರು.
ಪಂದಳ ಅರಮನೆಯಿಂದ ಹೊರಟ ತಿರುವಾಭರಣ 6 ಗಂಟೆ ಹೊತ್ತಿಗೆ ಸಾರಂಗುದಿ ತಲುಪಿತು. ಬಳಿಕ ದೇವಸ್ವಂ ಮಂಡಳಿ ಸದಸ್ಯರು ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಿರುವಾಭರಣ ಸ್ವೀಕರಿಸಿದ್ದಾರೆ. ಮೆರವಣಿಗೆ ಮೂಲಕ ಅಯ್ಯಪ್ಪ ಸನ್ನಿಧಾನಕ್ಕೆ ಬಂದ ತಿರುವಾಭರಣಕ್ಕೆ ಪೂಜೆ ಸಲ್ಲಿಸಲಾಯಿತು. ಪೂಜೆ ನೇರವೇರಿದ ಬೆನ್ನಲ್ಲೇ ಪೊನ್ನಂಬಲ ಬೆಟ್ಟದ ಮೇಲಿನಿಂದ ಮಕರಜ್ಯೋತಿಯ ದರ್ಶನವಾಗಿದೆ.
ಭಕ್ತರು ಸುಸೂತ್ರವಾಗಿ ಮಕರಜ್ಯೋತಿ ದರ್ಶನ ಪಡೆಯಲು ಶಬರಿಮಲೆಯ ಹಲವೆಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಾಳಿಗಾಪ್ಪುರಂ ದೇವಸ್ಥಾನ ಆವರಣ, ಅನ್ನದಾನಮಂಟಪದ ಮುಂಭಾಗದಲ್ಲಿರುವ ಸಮತಟ್ಟು ಜಾಗ, ಮರಮಟ್ ಕಾಂಪ್ಲೆಕ್ ಟರೇಸ್, ವಾಟರ್ ಟ್ಯಾಂಕ್, ಪಂಡಿತಳವಳಂ ಸೇರಿದಂತೆ 10ಕ್ಕೂ ಹೆಚ್ಚು ಜಾಗದಲ್ಲಿ ಮಕರಜ್ಯೋತಿ ದರ್ಶನ ಪಡೆಯಲು ಭಕ್ತರಿಗೆ ದೇವಸ್ವಂ ಬೋರ್ಡ್ ವ್ಯವಸ್ಥೆ ಮಾಡಿತ್ತು.
ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯ ನಂತರ ಹಳೆಯ ಮೂರ್ತಿ ಎಲ್ಲಿಡಲಾಗುತ್ತದೆ? ಇಲ್ಲಿದೆ ನೋಡಿ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + nineteen =
Remember me
