ಗುರ್​ಗಾಂವ್​:ಕರೊನಾ ವೈರಸ್​ ಸಂಕಷ್ಟದ ಜತೆಗೆ ಬೆಳೆ ನಾಶಕರ ಮಿಡತೆಗಳ ದಂಡು ಒಂದಾದ ಬಳಿಕ ಒಂದು ರಾಜ್ಯಕ್ಕೆ ಪ್ರವೇಶ ಮಾಡುತ್ತಿದ್ದು, ಅವುಗಳ ನಿಯಂತ್ರಣವೂ ಕಷ್ಟವಾಗುತ್ತಿದೆ.
ಪಾಕಿಸ್ತಾನದಿಂದ ಬಂದಿರುವ ಮಿಡತೆಗಳು ಉತ್ತರ ಭಾರತದ ರಾಜ್ಯಗಳ ರೈತರನ್ನು ಹೈರಾಣಾಗಿಸಿವೆ. ಆ ಕೀಟಗಳಿಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆಯಾ ರಾಜ್ಯ ಸರ್ಕಾರಗಳು ಆದಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದೆ.
ಇದೀಗ ಮಿಡತೆಗಳ ದಂಡು ಹರಿಯಾಣಾದ ಬಳಿ ಕಾಣಿಸಿಕೊಂಡಿದ್ದು, ಅಲ್ಲಿನ ರೈತರಿಗೆ ಸರ್ಕಾರ ಮುನ್ನೆಚ್ಚರಿಕೆ ಕೊಟ್ಟಿದೆ. ಗುರ್​ಗಾಂವ್​ನಲ್ಲಿ ಕೂಡ ಸ್ಥಳೀಯ ಆಡಳಿತ ರೈತರನ್ನು ಎಚ್ಚರಿಸಿದೆ. ಮನೆಯ ಕಿಟಕಿಗಳನ್ನು ಸಾಧ್ಯವಾದಷ್ಟು ಮುಚ್ಚಿಕೊಂಡೇ ಇರಿ. ಪಾತ್ರೆ, ಡ್ರಮ್​​ಗಳನ್ನು ಬಡಿಯುವ ಮೂಲಕ ದೊಡ್ಡದಾಗಿ ಶಬ್ದ ಮಾಡಿ ಎಂದು ಸಲಹೆ ನೀಡಿದೆ.
ಮಿಡತೆಗಳ ಸಮೂಹ ಮಹೇಂದ್ರಗಢ್​ ಜಿಲ್ಲೆಯನ್ನು ಪ್ರವೇಶಿಸಿದೆ. ಇನ್ನೇನು ರೇವಾರಿ ಗಡಿಯನ್ನು ತಲುಪಲಿದೆ. ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮನೆಯ ಕಿಟಕಿಗಳನ್ನು ತೆರೆದಿಡಬಾರದು. ಹಾಗೇ ಪಾತ್ರೆಗಳು, ಡ್ರಮ್​ಗಳನ್ನು ದೊಡ್ಡದಾಗಿ ಬಡಿಯುತ್ತಿರಬೇಕು. ದೊಡ್ಡದಾಗಿ ಸದ್ದು ಮಾಡುತ್ತಿದ್ದರೆ ಕೀಟಗಳು ಒಂದು ಕಡೆ ಉಳಿಯುವುದಿಲ್ಲ. ಅವು ಹಾರಿ ಮುಂದೆ ಹೋಗುತ್ತವೆ ಎಂದು ಗುರ್​ಗಾಂವ್​ ಆಡಳಿತ ತಿಳಿಸಿದೆ.
ಹಾಗೇ ರೈತರು ಕೀಟನಾಶಕ ಸಿಂಪಡಣಾ ಪಂಪ್​​ಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಯಾವಾಗ ಅಗತ್ಯಬಿದ್ದರೂ ಅದನ್ನು ಉಪಯೋಗಿಸಿ. ಬೆಳೆ ರಕ್ಷಣೆ ಆದ್ಯತೆಯಾಗಲಿ ಎಂದು ಹೇಳಿದೆ.ಇದನ್ನೂ ಓದಿ:ಇನ್​ಸ್ಟಾಗ್ರಾಂ ಮಿತ್ರನಿಗಾಗಿ ಮನೆ ಬಿಟ್ಟ ಬಾಲಕಿ: ಬಲೆಗೆ ಬೀಳುವಷ್ಟರಲ್ಲಿ ಬಚಾವ್​ ಆಗಿದ್ಹೇಗೆ?
ಅಷ್ಟೇ ಅಲ್ಲ, ರೈತರಿಗೆ ಮಿಡತೆಗಳ ದಾಳಿ ಬಗ್ಗೆ ಸರಿಯಾದ ಅರಿವು ಮೂಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದೆ. ಮಿಡತೆಗಳು ಈಗಾಗಲೇ ಮಹಾರಾಷ್ಟ್ರ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಗುಜರಾತ್​, ಮಧ್ಯಪ್ರದೇಶಗಳಲ್ಲಿ ಬೆಳೆ ನಾಶ ಮಾಡಿವೆ.
ಮಿಡತೆ ದಾಳಿ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಒಟ್ಟು 11 ಕಂಟ್ರೋಲ್​ ರೂಂಗಳನ್ನು ರಚಿಸಿದೆ. (ಏಜೆನ್ಸೀಸ್​)
ಕಾಂಗ್ರೆಸ್​ ಮುಖಂಡ ಅಭಿಷೇಕ್​ ಮನು ಸಿಂಘ್ವಿಯವರಿಗೆ ಕೊವಿಡ್​-19; ಇಡೀ ಕುಟುಂಬಕ್ಕೆ ತಗುಲಿದ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
