ನವದೆಹಲಿ:ಶಂಭು ಗಡಿಯನ್ನು ತೆರೆಯಲು ಹಾಗೂ ಸಂಚಾರ ನಿಯಂತ್ರಿಸುವಂತೆ ಹರಿಯಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್​​ ಶುಕ್ರವಾರ (ಜುಲೈ 12) ನಿರ್ದೇಶಿಸಿದೆ. ರಾಜ್ಯ ಸರ್ಕಾರ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಹೇಗೆ ತಡೆಯುತ್ತದೆ ಎಂದು ಪ್ರಶ್ನಿಸಿದ ನ್ಯಾಯಾಲಯ ಟ್ರಾಫಿಕ್​ ನಿಯಂತ್ರಿಸುವುದು ರಾಜ್ಯ ಸರ್ಕಾರದ ಕೆಲಸ ಎಂದು ಹೇಳಿದೆ.
ಇದನ್ನು ಓದಿ:ಡ್ರಗ್ಸ್​​ ಪ್ರಕರಣದಲ್ಲಿ ಸಂಸದ ಅಮೃತಪಾಲ್​ ಸಿಂಗ್​ ಸಹೋದರ ಅರೆಸ್ಟ್​​​
ಏಳು ದಿನಗಳಲ್ಲಿ ಗಡಿ ತೆರಯುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜುಲೈ 10ರಂದು ನಿರ್ದೇಶಿಸಿದ ಆದೇಶದ ವಿರುದ್ಧ ಹರಿಯಾಣ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಎಂದು ವಕೀಲರು ತಿಳಿಸಿದ ನಂತರ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಈ ಅಭಿಪ್ರಾಯವನ್ನು ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶಂಭು ಗಡಿ ತೆರೆಯುವಂತೆ ಎರಡು ದಿನಗಳ ಹಿಂದೆ ತೀರ್ಪು ನೀಡಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯಗಳಿಗೆ ನ್ಯಾಯಾಲಯ ಹೇಳಿತ್ತು.
ವಿವಿಧ ರೈತ ಸಂಘಟನೆಗಳು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಬೆಂಬಲಿಸಲು ದೆಹಲಿಯತ್ತ ಸಾಗುವುದಾಗಿ ಘೋಷಿಸಿದ ಬಳಿಕ ಬ್ಯಾರಿಕೇಡ್​ಗಳನ್ನ ಹಾಕಿ ಪಂಜಾಬ್ ಮತ್ತು ಹರಿಯಾಣದ ನಡುವಿನ ಶಂಭು ಗಡಿಯನ್ನು ಫೆಬ್ರವರಿ 13ರಿಂದ ಮುಚ್ಚಲಾಗಿದೆ. ಆ ವೇಳೆ ನಡೆದ ಗಲಾಟೆಯಿಂದಾಗಿ ರೈತರು ಗಡಿ ದಾಟಲು ಆಗದೆ ಅಲ್ಲಿಯೆ ಮೋಕ್ಕಾಂ ಹೂಡಿದ್ದರು.
ಹರಿಯಾಣ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ನಮಗೆ ಮತ್ತು ಲಕ್ಷಾಂತರ ಜನರಿಗೆ ಅನಾನುಕೂಲತೆ ಉಂಟುಮಾಡಲಾಗಿದೆ ಎಂಬುದು ಈಗ ಸ್ಪಷ್ಟವಾಗಿದೆ. ಹೈಕೋರ್ಟಿನ ಆದೇಶದಂತೆ ಬ್ಯಾರಿಕೇಡ್‌ಗಳನ್ನು ತೆಗೆದ ನಂತರ ಜುಲೈ 16ರಂದು ಸಭೆ ನಡೆಸುತ್ತೇವೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. (ಏಜೆನ್ಸೀಸ್​)
ಭೂಕುಸಿತದಿಂದ ನದಿಗೆ ಬಿದ್ದ ಎರಡು ಬಸ್​; ಕಣ್ಮರೆಯಾದ 63 ಮಂದಿಗಾಗಿ ಹುಡುಕಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
