ಸುಲ್ತಾನಪುರ (ಉತ್ತರ ಪ್ರದೇಶ):ಇಲ್ಲಿ ವಾರಾಂತ್ಯದ ಲಾಕ್‌ಡೌನ್‌ನಲ್ಲಿ ಪೊಲೀಸ್‌ ಸಿಬ್ಬಂದಿ ಬೇಸ್ತುಬಿದ್ದ ಘಟನೆಯೊಂದು ನಡೆದಿದೆ.ಅದೇನೆಂದರೆ ಲಾಕ್‌ಡೌನ್‌ ರೌಂಡ್ಸ್‌ನಲ್ಲಿದ್ದ ಪೊಲೀಸರ ಎದುರು ಮಾಸ್ಕ್‌ ಧರಿಸಿದ ವ್ಯಕ್ತಿಯೊಬ್ಬ ಬ್ಯಾರಿಕೇಡ್‌ನಿಂದ ಜಿಗಿದು ಓಡಲು ಆರಂಭಿಸಿದ. ಪೊಲೀಸರು ಆತನ ಬೆನ್ನಟ್ಟಿದರು. ಆ ಕಳ್ಳ ಇನ್ನೂ ತಪ್ಪಿಸಿಕೊಳ್ಳಲು ಜೋರಾಗಿ ಓಡಿದ.
ಆತನ ಓಡಿದಷ್ಟೇ ಶರವೇಗದಲ್ಲಿ ಕೆಲವು ಪೊಲೀಸರು ಓಡಿ, ನಿಲ್ಲು ನಿಲ್ಲು ಎನ್ನತೊಡಗಿದರು. ಆದರೆ ಆ ‘ಕಳ್ಳ’ ನಿಲ್ಲದೇ ಇನ್ನೂ ಜೋರಾಗಿ ಓಡಿದ. ಸುಮಾರು ದೂರ ಹೋದ ಮೇಲೆ ಅಂತೂ ಕಳ್ಳನನ್ನು ಪೊಲೀಸ್‌ ಸಿಬ್ಬಂದಿ ಹಿಡಿಯುವಲ್ಲಿ ಯಶಸ್ವಿಯಾದರು.
ಇನ್ನೇನು ಆತನನ್ನು ಹೊಡೆಯಬೇಕು ಎನ್ನುವಷ್ಟರಲ್ಲಿ ಕಳ್ಳನೇ ಮಾಸ್ಕ್‌ ತೆಗೆದ. ರೋಷಾವೇಷದಲ್ಲಿದ್ದ ಪೊಲೀಸ್ ಸಿಬ್ಬಂದಿ ಏಕಾಏಕಿ ಬೇಸ್ತುಬಿದ್ದು, ಸೆಲ್ಯೂಟ್‌ ಹೊಡೆದರು!
ಅಷ್ಟಕ್ಕೂ ಆ ಕಳ್ಳ ಬೇರೆ ಯಾರೂ ಅಲ್ಲ. ಸುಲ್ತಾನಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಹರಿ ಮೀನಾ. ಲಾಕ್‌ಡೌನ್‌ ಸಮಯದಲ್ಲಿ ಪೊಲೀಸರು ಎಷ್ಟು ಕರ್ತವ್ಯಪ್ರಜ್ಞೆ ಮರೆಯುತ್ತಿದ್ದಾರೆ ಹಾಗೂ ಲಾಕ್‌ಡೌನ್‌ನಿಂದಾಗಿ ಹಿಂದಿನಷ್ಟು ವ್ಯಾಯಾಮ ಪೊಲೀಸರಿಗೆ ಸಿಗದ ಕಾರಣ, ಅವರು ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಪರೀಕ್ಷೆ ಮಾಡುವ ಸಲುವಾಗಿ ಶಿವಹರಿ ಮೀನಾ ಅವರು ಇಂಥದ್ದೊಂದು ಚಿಕ್ಕ ಪರೀಕ್ಷೆ ಮಾಡಿದ್ದರು.
ಇದನ್ನೂ ಓದಿ:ಇನ್ನೂ ಎಂಥೆಂಥ ವಿಲಕ್ಷಣ ಫೇಸ್​​ಮಾಸ್ಕ್​ಗಳು ಬರುತ್ತವೋ…
ಕಳ್ಳನಂತೆ ಸಾಧಾರಣ ಬಟ್ಟೆತೊಟ್ಟು ಮುಖ ಕಾಣಿಸದಂತೆ ದೊಡ್ಡದಾಗಿ ಮಾಸ್ಕ್‌ ಧರಿಸಿ ಓಡಿದ್ದರು. ನಂತರ ತಮ್ಮನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವ ಪೊಲೀಸ್‌ ಸಿಬ್ಬಂದಿಗೆ ಅಭಿನಂದಿಸಿದ ಎಸ್‌ಪಿ, ತಮ್ಮನ್ನು ಹಿಡಿಯಲು ಪ್ರಯತ್ನಿಸಿದ ಎಂಟು ಪೊಲೀಸ್‌ ಸಿಬ್ಬಂದಿಗೆ ತಲಾ 2,100 ರೂಪಾಯಿಗಳ ನಗದು ಬಹುಮಾನ ಘೋಷಿಸಿದರು.
ಎಷ್ಟು ಕಿರುಚಾಡಿದ್ರೂ ಹೆಂಡ್ತಿಯರ ಪಾಡು ಇಷ್ಟೇ ಸ್ವಾಮಿ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
