ನವದೆಹಲಿ:ಚೀನಾ ಮತ್ತು ಪಾಕ್ ಗಡಿ ಭಾಗದಲ್ಲಿ ಗಡಿ ಸಂಘರ್ಷ ಮುಂದುವರಿದಿರುವಂತೆಯೇ ಈ ಸಾಲಿನ ಮಲಬಾರ್ ನೌಕಾಪಡೆ ಸಮರಾಭ್ಯಾಸ ಇಂದಿನಿಂದ ಆರನೇ ತಾರೀಕುವರೆಗೆ ವಿಶಾಖಪಟ್ಟಣಂ ಸಮೀಪ ಬಂಗಾಳ ಕೊಲ್ಲಿಯಲ್ಲಿ ಶುರುವಾಗಿದೆ.  ಚತುಷ್ಪಕ್ಷೀಯ ಮೈತ್ರಿಕೂಟ (ಕ್ವಾಡ್)ದ ನಾಲ್ಕು ಸದಸ್ಯ ರಾಷ್ಟ್ರಗಳಾದ ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾಗಳು ಇದೇ ಮೊದಲ ಬಾರಿಗೆ ಭಾಗಿಯಾಗುತ್ತಿವೆ. ಭಾರತದ ಜತೆ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿಯಾಗುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಸಮರ ನೌಕೆಗಳು
ಕ್ಷಿಪಣಿ ವಿಧ್ವಂಸಕ ಯುಎಸ್​ಎಸ್ ಜಾನ್ ಎಸ್ ಮೆಕೇನ್ (ಅಮೆರಿಕ)ದೀರ್ಘ-ಶ್ರೇಣಿಯ ಯುದ್ಧನೌಕೆ 60 ಹೆಲಿಕಾಪ್ಟರ್ ಸಾಮರ್ಥ್ಯದ ಎಚ್​ಎಂಎಎಸ್ ಬಲ್ಲಾರತ್ (ಆಸ್ಟ್ರೇಲಿಯಾ)ಜೆಎಸ್ ಒನಾಮಿ (ಜಪಾನ್ )ಭಾರತದ ನೌಕೆಗಳು: ಐಎನ್​ಎಸ್ ರಣವಿಜಯ್. ಸ್ಟೆಲ್ತ್ ಫ್ರಿಗೇಟ್ ಐಎನ್​ಎಸ್ ಶಿವಾಲಿಕ್, ಆಫ್-ಶೋರ್ ಪೆಟ್ರೋಲ್ ಹಡಗು ಐಎನ್​ಎಸ್ ಸುಕನ್ಯ,ಫ್ಲೀಟ್ ಸಪೋರ್ಟ್ ಹಡಗು ಐಎನ್​ಎಸ್ ಶಕ್ತಿ, ಜಲಾಂತರ್ಗಾಮಿ ಐಎನ್​ಎಸ್ ಸಿಂಧುರಾಜ್
1992 ಮೊದಲ ಬಾರಿ ಅಮೆರಿಕ ಮತ್ತು ಭಾರತದ ಮಧ್ಯೆ ದ್ವಿಪಕ್ಷೀಯ ಸಮರಾಭ್ಯಾಸ ನಡೆಯಿತು. 1997ರ ವರೆಗೆ ಮೂರು ಬಾರಿ ಸಮರಾಭ್ಯಾಸ ನಡೆಸಲಾಯಿತು.2007 ಜಪಾನ್, ಸಿಂಗಾಪುರ ಮತ್ತು ಆಸ್ಟ್ರೇಲಿಯಾದ ನೌಕಾಪಡೆಗಳು ಮೊದಲ ಬಾರಿಗೆ ಮಲಬಾರ್ ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದವು.2015 ಜಪಾನ್ ಮಲಬಾರ್ ಸಮರಾಭ್ಯಾಸದ ಖಾಯಂ ಸದಸ್ಯ ರಾಷ್ಟ್ರವಾಯಿತು.2018 ಫಿಲಿಪ್ಪೀನ್​ ಸಮುದ್ರದಲ್ಲಿನ ಗುವಾಮ್ ತೀರದಲ್ಲಿ ಸಮರಾಭ್ಯಾಸ2019 ಜಪಾನ್ ಕರಾವಳಿಯಲ್ಲಿ ಸಮರಾಭ್ಯಾಸ
ಸಾಗರ ಭದ್ರತೆ ಕ್ಷೇತ್ರದಲ್ಲಿ ಇತರ ದೇಶಗಳೊಂದಿಗೆ ಸಹಕಾರ ವೃದ್ಧಿಸುವುದು ಭಾರತದ ಉದ್ದೇಶ. ಕ್ವಾಡ್​ನ ಈ ವಾರ್ಷಿಕ ಸಮರ ಕವಾಯತು, ಇಂಡೋ-ಪೆಸಿಫಿಕ್ ವಲಯದಲ್ಲಿ ತನ್ನ ಪ್ರಭಾವವನ್ನು ನಿಯಂತ್ರಿಸುವ ಹುನ್ನಾರ ಎಂಬುದು ಚೀನಾ ಆತಂಕವಾಗಿದೆ. ಅರಬ್ಬಿ ಸಮುದ್ರದಲ್ಲಿ ಎರಡನೇ ಹಂತದ ಸಮರಾಭ್ಯಾಸ ನವೆಂಬರ್ 17ರಿಂದ 20ರವರೆಗೆ ನಡೆಯಲಿದೆ. ಮಲಬಾರ್ ಸಮರಾಭ್ಯಾಸದ ನೇತೃತ್ವವನ್ನು ಈಸ್ಟರ್ನ್ ಪ್ಲೀಟ್ ಕಮಾಂಡಿಂಗ್ ಫ್ಯ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಸಂಜಯ್ ವಹಿಸಲಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ಜಲಕಂಟಕ: ದೇಶದ 30 ನಗರಗಳಿಗೆ ಕಾದಿದೆ ಗಂಭೀರ ಆಪತ್ತು…
ಯಾಕಿಷ್ಟು ಮಹತ್ವ?:ಚೀನಾದ ಪ್ರಭಾವಕ್ಕೆ ಇಂಡೋ-ಪೆಸಿಫಿಕ್ ಭಾಗದಲ್ಲಿ ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಸಲುವಾಗಿ ಇದೇ ಮೊದಲ ಬಾರಿ ಕ್ವಾಡ್​ನ ನಾಲ್ಕೂ ಸದಸ್ಯ ರಾಷ್ಟ್ರಗಳು ಒಗ್ಗಟ್ಟು ಪ್ರದರ್ಶಿಸಿವೆ. ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕ ಜತೆ ಚೀನಾದ ಸಂಬಂಧ ಇತ್ತೀಚೆಗೆ ಹದಗೆಟ್ಟಿರುವುದು ಹಾಗೂ ಈ ಭಾಗದಲ್ಲಿ ಭಾರತದ ಬಲ ಹೆಚ್ಚಳಕ್ಕೆ ಅಮೆರಿಕ ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವುದು ಗಮನಾರ್ಹ.
ಇದನ್ನೂ ಓದಿ:ಮನಸ್ಸು ಹತೋಟಿ ಇಲ್ಲದವರು ನಾಯಕರಾದರೆ?; ಡಾ.ಕೆ.ಎಸ್.ನಾರಾಯಣಾಚಾರ್ಯರ ಅಂಕಣ..
ಚೀನಾ ಆಕ್ರೋಶ :ಬಂಗಾಳಕೊಲ್ಲಿಯಲ್ಲಿ 2007ರಲ್ಲಿ ನಡೆದ ಭಾರತ-ಅಮೆರಿಕ ಮಲಬಾರ್ ಸಮರಾಭ್ಯಾಸವನ್ನು ಚೀನಾ ತೀವ್ರವಾಗಿ ಖಂಡಿಸಿತ್ತು. ಬಳಿಕ 2015ರಲ್ಲಿ ಜಪಾನ್ ಕೂಡ ಈ ಗುಂಪಿಗೆ ಸೇರ್ಪಡೆಗೊಂಡ ಕಾರಣ ಚೀನಾದ ಆಕ್ರೋಶ ಹೆಚ್ಚಾಗಿತ್ತು. ಈಗ ಆಸ್ಟ್ರೇಲಿಯಾ ಕೂಡ ಇದರಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಚೀನಾ, ಮಿಲಿಟರಿ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅನುಕೂಲಕರವಾಗಿರಬೇಕು ಎಂದು ಪ್ರತಿಪಾದಿಸತೊಡಗಿದೆ. (ಏಜೆನ್ಸೀಸ್)
Phase 1 of 24th edition of Naval Exercise Malabar 2020 to commence off Visakhapatnam in BayofBengal from 3rd to 6th Nov: Ministry of Defence. (File pics)pic.twitter.com/xDzqMuDfTh
— ANI (@ANI)November 3, 2020

ಯುವ ಮಾಸ್ ಎಂಟ್ರಿ: ಅಪ್ಪ-ಚಿಕ್ಕಪ್ಪನ ಸಮ್ಮುಖದಲ್ಲಿ ಚಂದನವನಕ್ಕೆ ಆಗಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 11 =
Remember me
