ದೆಹಲಿ:ಕರೊನಾ ವೈರಸ್​ ನಂತರದ ಕಾಲದಲ್ಲಿ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಆತಂಕವನ್ನು ಸೃಷ್ಟಿ ಮಾಡಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳುನ ವರದಿಯಾಗುತ್ತಿದ್ದು, ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇದೀಗ ಭಾರತೀಯ ಮೂಲದ 32 ವರ್ಷದ ಮಹಿಳೆ ಯುನೈಟೆಡ್​ ಅರಬ್​ ಎಮಿರೇಟ್ಸ್​ ದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತಳನ್ನು ಸರಣ್ಯ ಎಂದು ಗುರುತಿಸಲಾಗಿದೆ. ಈಕೆ ಕೇರಳದ ಪಲಕ್ಕಾಡ್ ಜಿಲ್ಲೆಯ ಶ್ರೀಕೃಷ್ಣಪುರಂ​ ಮೂಲದವಳು. ಪ್ರಭಾಕರನ್​ ಮತ್ತು ಶಾಂತಕುಮಾರಿ ದಂಪತಿಯ ಪುತ್ರಿ.
ಪತಿ ಮೃದಲ್​ ಮೋಹನ್ ಜತೆ ಅರಬ್​ನ ಶಾರ್ಜಾದಲ್ಲಿ ನೆಲೆಸಿದ್ದಳು. ಗಂಡನ ಜತೆ ಊಟ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಸರಣ್ಯ ಮೃತಪಟ್ಟಿದ್ದಾಳೆ. ತನ್ನ ಕಣ್ಣೆದುರಲ್ಲೇ ಪತ್ನಿ ಕೊನೆಯುಸಿರೆಳೆದಿದ್ದು ಮೋಹನ್​ಗೆ ಭಾರೀ ಆಘಾತವಾಗಿದೆ.
ಇದನ್ನೂ ಓದಿ:ಕೇಳುವವರಿಲ್ಲ ಗೌರಿದುಃಖ!: ಹೆಣ್ಣು ಮಕ್ಕಳ ಕಳ್ಳಸಾಗಣೆ; ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಳ, ಆಡುವ ವಯಸ್ಸಲ್ಲಿ ಬಾಲ್ಯ ಕಳೆದುಕೊಂಡ 45 ಸಾವಿರ ಬಾಲಕಿಯರು
ಹೃದಯಾಘಾತವಾದ ತಕ್ಷಣ ಸರಣ್ಯಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಇಹಲೋಕ ತ್ಯಜಿಸಿದಳು. ಮರಣೋತ್ತರ ವರದಿ ಸೇರಿದಂತೆ ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಸೋಮವಾರ ಸರಣ್ಯ ಮೃತದೇಹವನ್ನು ತವರಿಗೆ ತರುವ ಸಾಧ್ಯತೆ ಇದೆ.
ಕಳೆದ ಭಾನುವಾರಷ್ಟೇ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಥಾಯ್ಲೆಂಡ್​ ರಾಜಧಾನಿ ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ರಾತ್ರಿ ಊಟ ಮಾಡಿ ಮಲಗಿದವರು ಬೆಳಗ್ಗೆ ಎದ್ದೇಳಲಿಲ್ಲ ಎಂದು ಹೇಳಲಾಗುತ್ತಿದೆ. ಸ್ವಂದನಾ ಸಾವಿನ ಸುದ್ದಿ ಸೋಮವಾರ ತಿಳಿಯಿತು. ಬ್ಯಾಂಕಾಕ್​ನಲ್ಲೇ ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಮುಗಿಸಿ ಮಂಗಳವಾರ ತಡರಾತ್ರಿ ಸ್ಪಂದನಾರ ಮೃತದೇಹವನ್ನು ಭಾರತಕ್ಕೆ ಕರೆತರಲಾಯಿತು. ಇದಾದ ಬಳಿಕ ಬುಧವಾರ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.(ಏಜೆನ್ಸೀಸ್​)
ನಿರ್ಜನ ಪ್ರದೇಶದಲ್ಲಿ ಗೆಳೆಯರ ಜತೆ ಒಬ್ಬಳೇ ಯುವತಿ: ಅಲ್ಲಿಗೆ ಹೋದ ಸ್ಥಳೀಯರಿಗೆ ಕಾದಿತ್ತು ಶಾಕ್​!

ಸುಧಾಮೂರ್ತಿಗೆ ನಟ ಪ್ರಭಾಸ್ ಸಿನಿಮಾದ ಯಾವ ಹಾಡು ತುಂಬಾ ಇಷ್ಟ ಗೊತ್ತಾ?

77ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮಾಣಿಕ್ ಷಾ ಪರೇಡ್ ಗ್ರೌಂಡ್​ ಸಜ್ಜು: ಏನೆಲ್ಲಾ ಸಿದ್ಧತೆ ನಡೆದಿದೆ? ಇಲ್ಲಿದೆ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
