ಕೊಲ್ಲಂ:ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಮೃತರನ್ನು ಆನಂದ್​ ಸುಜಿತ್​ ಹೆನ್ರಿ (38), ಆತನ ಪತ್ನಿ ಅಲೈಸ್​ ಪ್ರಿಯಾಂಕಾ (37), ಇಬ್ಬರು ಮಕ್ಕಳಾದ ನೋಹ್​ (4) ಮತ್ತು ನ್ಯಾಥನ್​ (4) ಎಂದು ಗುರುತಿಸಲಾಗಿದೆ. ಆನಂದ್ ಅವರು ಕೊಲ್ಲಂನ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಪಟ್ಟಠಾಣಂ ಮೂಲದ ಜಿ ಹೆನ್ರಿ ಮತ್ತು ಶಾಂತಮ್ಮ ಅವರ ಕಿರಿಯ ಪುತ್ರ.
ಎಸಿ ಅಥವಾ ವಾಟರ್​ ಹೀಟರ್​ನ ವಿಷಕಾರಿ ಅನಿಲವನ್ನು ಸೇವಿಸಿ ಸಾವು ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಮೆರಿಕದ ಕಾಲಮಾನ ಸೋಮವಾರ ಬೆಳಗ್ಗೆ 9.15ಕ್ಕೆ ಸ್ಯಾನ್ ಮಾಟಿಯೊದಲ್ಲಿರುವ ಮನೆಯೊಳಗಿನ ಕೋಣೆಯಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ.
ಅಲೈಸ್​ ಪ್ರಿಯಾಂಕಾಗೆ ಅವರ ತಾಯಿ ಎಷ್ಟೇ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಅಮೆರಿದಲ್ಲೇ ಇರುವ ಮತ್ತೊಬ್ಬ ಸಂಬಂಧಿಗೆ ತಾಯಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸಂಬಂಧಿ, ಪ್ರಿಯಾಂಕಾ ಮನೆಗೆ ಭೇಟಿ ನೀಡಿದರು. ಸಾಕಷ್ಟು ಬಾರಿ ಬಾಗಿಲು ಬಡಿದಾಗ ಯಾರೂ ಪ್ರತಿಕ್ರಿಯಿಸದಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ನೋಡಿದಾಗ ನಾಲ್ವರ ಶವಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ ಎಂದು ಸ್ಯಾನ್ ಮಾಟಿಯೊ ಪೊಲೀಸರು ತಿಳಿಸಿದ್ದಾರೆ.
ಆನಂದ್ ಮತ್ತು ಆಲಿಸ್ ಒಂಬತ್ತು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆನಂದ್ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಆಲಿಸ್ ಪ್ರಿಯಾಂಕಾ ಹಿರಿಯ ವಿಶ್ಲೇಷಕರಾಗಿದ್ದರು. ಎಂಟು ವರ್ಷಗಳ ಹಿಂದೆ ಕೊನೆಯದಾಗಿ ತಮ್ಮ ಊರಿಗೆ ಬಂದಿದ್ದರು.(ಏಜೆನ್ಸೀಸ್​)
ಎಐ, ಡೀಪ್​ಫೇಕ್ಸ್​ ಮೂಲಕ ಹನಿಟ್ರ್ಯಾಪ್: ಪ್ರೇಮಿಗಳ ದಿನದಂದೇ ಪಾಕಿಸ್ತಾನ ಆ್ಯಕ್ಟೀವ್​,​ ಆಘಾತಕಾರಿ ವರದಿ ಬಹಿರಂಗ

ರಾತ್ರಿಯಿಡೀ ರೈತರು-ಪೊಲೀಸರ ನಡುವೆ ವಾಗ್ವಾದ; ಮಾತುಕತೆಗೆ ಸರ್ಕಾರ ಸಿದ್ಧ ಎಂದ ಕೃಷಿ ಸಚಿವ ಅರ್ಜುನ್ ಮುಂಡಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 7 =
Remember me
