ತಿರುವನಂತಪುರಂ:ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ವಿಚಾರವಾಗಿ 2015ರ ಜನವರಿಯಲ್ಲಿ ಟೆನ್ನಿಸ್​ ತಾರೆ ಮರಿಯಾ ಶರಪೋವಾ ನೀಡಿದ್ದ ಹೇಳಿಕೆಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿ, ನಿಂದಿಸಿದ್ದರು. ಅದರಲ್ಲೂ ವಿಶೇಷವಾಗಿ ಬಹುತೇಕ ಕೇರಳಿಗರೇ ಶರಪೋವಾರನ್ನು ಟಾರ್ಗೆಟ್​ ಮಾಡಿದ್ದರು. ಇದೀಗ ಅದೇ ನೆಟ್ಟಿಗರು ಶರಪೋವಾರ ಫೇಸ್​ಬುಕ್​ ಖಾತೆಗೆ ತೆರಳಿ ಕ್ಷಮೆಯಾಚಿಸುತ್ತಿದ್ದಾರೆ.
ಕ್ರಿಕೆಟ್​ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಯಾರೆಂದು ನನಗೆ ತಿಳಿದಿಲ್ಲ ಎಂದು 2015ರಲ್ಲಿ ಮರಿಯಾ ಹೇಳಿದ್ದರು. ಇದರ ಬೆನ್ನಲ್ಲೇ ಆಕೆಯ ಮೇಲೆ ಮುಗಿಬಿದ್ದ ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆ ಆರು ವರ್ಷಗಳ ಹಿಂದೆ ನಡೆದಿತ್ತು. ಇದೀಗ ಅದೇ ವಿಚಾರ ಮತ್ತೊಮ್ಮೆ ಪ್ರಚಲಿತಕ್ಕೆ ಬಂದಿದೆ. ಅದಕ್ಕೂ ಸಚಿನ್​ ಅವರೇ ಕಾರಣರಾಗಿದ್ದಾರೆ.
ಪಾಪ್​ ಗಾಯಕಿ ರಹಾನ ಟ್ವೀಟ್​ ಬಳಿ ರೈತರ ಪ್ರತಿಭಟನೆ ಅಂತಾರಾಷ್ಟ್ರಿಯ ಗಮನಸೆಳೆದಿದ್ದು, ದೆಹಲಿಯ ಕೆಲವು ಭಾಗದಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿರುವುದಕ್ಕೆ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿರುವ ನಡುವೆಯೇ ಬುಧವಾರ ಟ್ವೀಟ್​ ಮಾಡಿದ್ದ ಸಚಿನ್​, ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವವರಲ್ಲ. ಭಾರತೀಯರಿಗೆ ಭಾರತ ತಿಳಿದಿದೆ ಮತ್ತು ಭಾರತ ಬಗ್ಗೆ ಅವರೇ ನಿರ್ಧರಿಸುತ್ತಾರೆ. ರಾಷ್ಟ್ರದ ಒಗ್ಗಟ್ಟಾಗಿ ಉಳಿದುಕೊಳ್ಳೋಣ ಎಂದು ಕೇಂದ್ರ ಸರ್ಕಾರ ನೀಡಿದ್ದ #IndiaTogether ಮತ್ತು #IndiaAgainstPropaganda ಎಂಬ ಹ್ಯಾಷ್​ಟ್ಯಾಗ್​ ಹಾಕಿ ಬರೆದುಕೊಂಡಿದ್ದರು.
ಇದೀಗ ಮರಿಯಾ ಶರಫೋವಾ ಫೇಸ್​ಬುಕ್​ ಪೇಜ್​ ಹುಡುಕಿಕೊಂಡು ಹೋಗಿರುವ ಕೇರಳದ ನೆಟ್ಟಿಗರು, ಆಕೆಗೆ ಕ್ಷಮೆಯಾಚಿಸಿ ಸಾಲು ಸಾಲು ಟ್ವೀಟ್​ ಮಾಡುತ್ತಿದ್ದಾರೆ. ಪ್ರೀತಿಯ ಮರಿಯಾ, ಸಚಿನ್​ ಹೆಸರಿನಲ್ಲಿ ನಿಮ್ಮ ಮೇಲೆ ನಾವು ಮಾಡಿದ ಸೈಬರ್​ ದಾಳಿಗೆ ಕ್ಷಮೆ ಇರಲಿ ಎಂದು ನೆಟ್ಟಿಗನೊಬ್ಬರ ಕಮೆಂಟಿಸಿದ್ದಾರೆ.
ಅಂದು ಪಕ್ವತೆ ಇಲ್ಲದೆ ನಾನು ಕೆಲವೊಂದು ಕಾಮೆಂಟ್​ಗಳನ್ನು ಸಚಿನ್​ ಪರವಾಗಿ ಮಾಡಿ ನಿಮ್ಮನ್ನು ನಿಂದಿಸಿದೆ. ನನ್ನ ಕ್ಷಮಿಸಿ ಮರಿಯಾ ಎಂದು ಮತ್ತೊಬ್ಬ ನೆಟ್ಟಿಗ ಟ್ವಿಟಿಸಿದ್ದಾರೆ. ಸಚಿನ್​ ಗೊತ್ತಿಲ್ಲ ಎಂದು ನಾವೆಲ್ಲ ನಿಮ್ಮನ್ನು ನಿಂದಿಸಿದೆವು. ಸಚಿನ್​ರನ್ನು ತಿಳಿಯದಿರುವುದೇ ಉತ್ತಮ ಎಂದು ಇನ್ನೋರ್ವ ನೆಟ್ಟಿಗ ಹೇಳಿದ್ದಾನೆ. ಹೀಗೆ ಅನೇಕ ಮಂದಿ ಶರಪೋವಾರ ಬಳಿ ಕ್ಷಮೆಯಾಚಿಸಿ ರೈತರ ಪ್ರತಿಭಟನೆಗೆ ನಿಲ್ಲಲಿಲ್ಲ ಎಂದು ಆರೋಪಿಸಿ ಸಚಿನ್​ ನಡೆಯನ್ನು ಖಂಡಿಸಿದ್ದಾರೆ.
ಕೊನೆಯಲ್ಲಿ ನೆಟ್ಟಿಗನೊಬ್ಬ ವಯನಾಡಿಗೆ ಪ್ರವಾಸ ಮಾಡುವಂತೆ ಕೇಳಿಕೊಂಡಿದ್ದು, ಮೋಜಿನ ವಾಸ್ತವ್ಯಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
ಫ್ರೆಂಡ್ಸ್​ ಜತೆ ಡ್ಯಾನ್ಸ್​ ಮಾಡಲು ಗಂಡನ ಒತ್ತಾಯ: ನಾಲ್ಕನೇ ಬಾರಿ ಕೈಕೊಟ್ಟ ಅದೃಷ್ಟ, ಮಹಿಳೆ ದುರಂತ ಸಾವು!

ಮಾಜಿ ಪ್ರಿಯಕರನನ್ನು ಇನ್ನೊಂದು ಬಾರಿ ತಬ್ಬಿಕೊಳ್ಳಬಹುದೇ?: ವರನನ್ನು ಕೇಳಿದ ವಧುವಿನ ಗತಿ ಏನಾಯ್ತು?

ಅತ್ತ ಅಮೆರಿಕದಲ್ಲಿ ಟೆಕ್ಕಿ ಪತಿ ವಾಸ: ಇತ್ತ ಮಗಳ ಜತೆ ಮಹಿಳೆ ನೇಣಿಗೆ ಶರಣಾಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
