ಕೊಚ್ಚಿ:ಹಬ್ಬ, ನಾಗದೇವತೆ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ್ದ ಕಜಾನ್​ ಖಾನ್​ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಕಜಾನ್​ ಖಾನ್​, ನಿಧನದ ಸುದ್ದಿಯನ್ನು ಮಲಯಾಳಂ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ ಎನ್. ಎಂ ಬಾದುಷಾ ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
​ಕಜಾನ್​ ಖಾನ್​ ಅವರು ಪ್ರಧಾನವಾಗಿ ಖಳನಟನ ಪಾತ್ರಗಳಲ್ಲೇ ನಟಿಸುತ್ತಿದ್ದರು. 1993 ರಲ್ಲಿ ಮೋಹನ್ ಲಾಲ್ ಅವರ ‘ಗಂಧರ್ವಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಮಲಯಾಳಂ ನಟ ದಿಲೀಪ್ ಅಭಿನಯದ ‘ಸಿಐಡಿ ಮೂಸಾ’ ಚಿತ್ರದಲ್ಲಿನ ವಿಲನ್​ ಪಾತ್ರಕ್ಕಾಗಿ ಕಜನ್ ಖಾನ್ ಬಹಳ ಮೆಚ್ಚುಗೆಯನ್ನು ಪಡೆದರು.
ಇದನ್ನೂ ಓದಿ:ನಗದುರಹಿತ ಆರೋಗ್ಯ ಸೇವೆ, ನನಸಾಗದ ನೌಕರರ ಕನಸು: ನಿಯಮಾವಳಿ ಮಾತ್ರ ರಚನೆ, ಜಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ
ಕಜನ್ ಖಾನ್ ಅವರು “ಗಂಧರ್ವಂ,” “ಸಿಐಡಿ ಮೂಸ,” “ದಿ ಕಿಂಗ್,” “ವರ್ಣಪಕಿಟ್ಟು,” “ಡ್ರೀಮ್ಸ್,” “ದಿ ಡಾನ್,” “ಮಾಯಾಮೋಹಿನಿ,” “ರಾಜಾಧಿರಾಜ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಕನ್ನಡದಲ್ಲಿ ಹಬ್ಬ, ನಾಗದೇವತೆ ಮತ್ತು ಚೆಲುವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಕಜಾನ್​ ಖಾನ್​ ಅವರು ಆ ಕಾಲದಲ್ಲಿಯೇ ದಕ್ಷಿಣ ಭಾರತದ ಹ್ಯಾಂಡ್​ಸಮ್​ ಖಳನಟ ಎಂಬ ಹೆಸರು ಪಡೆದುಕೊಂಡಿದ್ದರು. ಕಜಾನ್ ಖಾನ್ ಅವರ ಹಠಾತ್ ನಿಧನವು ಚಿತ್ರರಂಗದ ಬಂಧುಗಳು ಮತ್ತು ಅವರ ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿದೆ. ನೆಚ್ಚಿನ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್​)
ಉಡುಗೆಯ ಸೊಬಗು, ನೀಡಲಿ ಮೆರುಗು..

ಹೇಗಿದ್ದಾಳೆ ಚಾರ್ಲಿ?; ಚಿತ್ರತಂಡಕ್ಕೆ ವರ್ಷದ ಸಂಭ್ರಮ, ಶ್ವಾನಕ್ಕೆ ಖುಷಿ ಬದುಕಿನ ಸಡಗರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 8 =
Remember me
