ಮುಂಬೈ:ಸ್ಟಾರ್​​ ನಟ, ನಟಿಯರನ್ನು ಐಷಾರಾಮಿ ಬ್ರ್ಯಾಂಡ್‌ಗಳು ಮಾಡೆಲ್‌ಗಳನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಆದರೆ ಕೊಳೆಗೇರಿಯಿಂದ(ಸ್ಲಮ್‌) ಬಂದ ಹುಡುಗಿಯನ್ನು ಮಾಡೆಲ್​ ಆಗಿ ಮಾಡಿರುವುದು ಸಖತ್​ ಸುದ್ದಿಯಲ್ಲಿದೆ.
ಸ್ಲಮ್‌ನಲ್ಲಿ ಬೆಳೆದ 14 ವರ್ಷದ ಮಲೀಶಾ ಖರ್ವಾ ಐಷಾರಾಮಿ ಸೌಂದರ್ಯ ಬ್ರ್ಯಾಂಡ್‌ಗೆ ಮಾಡೆಲ್ ಆಗಿದ್ದಾಳೆ. ಪ್ರತಿಷ್ಠಿತ ಬ್ಯೂಟಿ ಬ್ರ್ಯಾಂಡ್‌ ಫಾರೆಸ್ಟ್‌ ಎಸೆನ್ಷಿಯಲ್ಸ್‌ನ ‘ಯುವತಿ ಕಲೆಕ್ಷನ್’ ಜಾಹೀರಾತಿನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿದ್ದಾಳೆ.
2020ರಲ್ಲಿ ಮುಂಬೈನಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಫ್‌ಮನ್ ಅವರ ಕಣ್ಣಿಗೆ ಮಲೀಶಾ ಕಾಣಿಸಿಕೊಂಡಿದ್ದಳು. ನಂತರ ಆ ಹುಡುಗಿಗಾಗಿ ಗೋ ಫಂಡ್ ಮಿ ಎಂಬ ಫಂಡ್ ರೈಸಿಂಗ್ ಪೇಜ್‌ ಶುರು ಮಾಡಿದ್ದರು. ಪ್ರಸ್ತುತ ಈ 14 ವರ್ಷ ವಯಸ್ಸಿನ ಮಲೀಶಾ ಇನ್​ಸ್ಟಾಗ್ರಾಮ್​​ನಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇವರು ಆಗಾಗ ತಾವು ಹಾಕುವ ಪೋಸ್ಟ್‌ಗಳಿಗೆ #princessfromtheslum ಎಂಬ ಹ್ಯಾಶ್‌ಟ್ಯಾಗ್‌ನ್ನು ಹಾಕುತ್ತಾರೆ. ಇತ್ತೀಚೆಗೆ ಮಲೀಶಾ ಅವರು ಹಲವು ವಸ್ತುಗಳಿಗೆ ಮಾಡೆಲಿಂಗ್ ಮಾಡಿದ್ದು, ‘ಲೈವ್ ಯುವರ್ ಫೇರಿಟೇಲ್’ ಎಂಬ ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ.
A post shared by @forestessentials
ಇದನ್ನೂ ಓದಿ:ಏನೇ ಆದ್ರೂ ಆರ್​ಸಿಬಿ ನನ್ನ ಫೇವರಿಟ್… ಕಪ್ ಗೆಲ್ಲುವ ಸಮಯ ಬಂದೇ ಬರುತ್ತದೆ: ಡಿಕೆಶಿ
ಇದೀಗ ಮಲೀಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2.5 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಅಲ್ಲದೇ ಮಾಡೆಲಿಂಗ್‌ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಆಕೆಯ ನಗು ತುಂಬಾ ಚೆನ್ನಾಗಿದೆ. ಇದು ಪ್ರತಿಯೊಬ್ಬ ಜನ ಸಾಮಾನ್ಯನಿಗೆ ಸಂಬಂಧಿಸಿದ ಮುಖವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twenty =
Remember me
