ನವದೆಹಲಿ:ಕಳೆದ ಎರಡು ತಿಂಗಳಿನಿಂದ ಮುಚ್ಚಿದ್ದ ಹೋಟೆಲ್​, ರೆಸ್ಟೋರಂಟ್​, ಮಾಲ್​ಗಳು ಸೋಮವಾರ (ಜೂನ್​ 8) ಆರಂಭವಾಗಲಿವೆ. ಇದಕ್ಕಾಗಿ ಹಲವು ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಬಿಡುಗಡೆ ಮಾಡಿದೆ.
ಮಾಲ್​ಗಳು ಆರಂಭವಾದರೂ, ಅಲ್ಲಿನ ಚಿತ್ರಮಂದಿರಗಳು ಅಥವಾ ಮಲ್ಟಿಪ್ಲೆಕ್ಸ್​ಹಾಗೂ ಗೇಮಿಂಗ್​ ಸೆಂಟರ್​ಗಳನ್ನು ತೆರೆಯುವಂತಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಜತೆಗೆ, ಗ್ರಾಹಕರಿಗೂ ಹಲವು ನಿರ್ಬಂಧಗಳನ್ನು ವಿಧಿಸಿದರೆ ಅಚ್ಚರಿಯೇನಿಲ್ಲ.
ಇದನ್ನೂ ಓದಿ;ಕರೊನಾ ಲಸಿಕೆಗೆ ಇನ್ನೊಂದೇ ಹೆಜ್ಜೆ…! ಜುಲೈನಲ್ಲಿ 30 ಸಾವಿರ ಜನರ ಮೇಲೆ ಅಂತಿಮ ಪರೀಕ್ಷೆ
ಹೋಟೆಲ್​ ಹಾಗೂ ರೆಸ್ಟೋರಂಟ್​ಗಳಲ್ಲಿ ಆಸನ ಸಾಮರ್ಥ್ಯದ ಶೇ.50 ಜನರಿಗೆ ಮಾತ್ರ ಅವಕಾಶವಿರಲಿದೆ. ಸೋಂಕು ಹರಡುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಜತೆಗೆ, ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್​ ಮತ್ತಿತರ ಭಿತ್ತಿಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ.
ಗ್ರಾಹಕರು ಮಾಸ್ಕ್​ ಧರಿಸುವುದು ಕಡ್ಡಾಯ. ಅಂತೆಯೇ ಸಿಬ್ಬಂದಿ ಕೂಡ ಮಾಸ್ಕ್​ ಧರಿಸಿರಬೇಕು. ಹ್ಯಾಂಡ್​ ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಬಳಕೆ ಕಡ್ಡಾಯವಾಗಿದ್ದು, ರೋಗ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿರಲಿದೆ. ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕಿದೆ.
ಇದನ್ನೂ ಓದಿ;ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ
ಹಿರಿಯ ಸಿಬ್ಬಂದಿ, ಗರ್ಭಿಣಿಯರು, ದೀರ್ಘಕಾಲದ ರೋಗದಿಂದ ಬಳಲುತ್ತಿರುವವರು ಮೊದಲಾದವರನ್ನು ಜನರೊಂದಿಗೆ ನೇರ ಸಂಪರ್ಕ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸದಂತೆ ತಿಳಿಸಲಾಗಿದೆ. ಹೀಗಾಗಿ ಮಾಲ್​, ಹೋಟೆಲ್​ ರೆಸ್ಟೋರಂಟ್​ಗಳಲ್ಲಿ ಗ್ರಾಹಕರಿಗೂ ಇವನ್ನು ಅನ್ವಯಿಸಬಹುದು. ಏಕೆಂದರೆ, 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರುವುದು ಕ್ಷೇಮ ಎಂದು ಸರ್ಕಾರ ನಿರ್ದೇಶನ ನೀಡಿದೆ. ಹೀಗಾಗಿ ಹೋಟೆಲ್​, ಮಾಲ್​ಗಳಲ್ಲಿ ಇವರಿಗೆ ಪ್ರವೇಶ ನಿರಾಕರಿಸಿದರೆ ಅಚ್ಚರಿಯಿಲ್ಲ.
ಗ್ರಾಹಕರ ಗುರುತು, ಸಂಪರ್ಕ ಸಂಖ್ಯೆ ಮೊದಲಾದವುಗಳನ್ನು ಬಯಸಿದಲ್ಲಿ ತಪ್ಪೇನಿಲ್ಲ. ಕಾರ್ಡ್​ ಮೂಲಕ ಪಾವತಿಸಿದರೆ ಆ ಮೂಲಕ ನಿಮ್ಮನ್ನು ಗುರುತಿಸಲು ಅನುವಾಗುತ್ತದೆ. ಒಂದೇ ಕುಟುಂಬದವರಾದರೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕಾಗಿರುವುದರಿಂದ ದೂರ, ದೂರ ನಿಲ್ಲುವುದು ಅನಿವಾರ್ಯ. ಮಾಲ್​ ತೆರೆದಿದೆ ಎಂದು ಕೈಕೈ ಹಿಡಿದು ಜೋಡಿಯಾಗಿ ಸುತ್ತಲಾಗುವುದಿಲ್ಲ ಎಚ್ಚರವಿರಲಿ…..!
ಅಮೆರಿಕ ತಯಾರಿಸಿದೆ 20 ಲಕ್ಷ ಡೋಸ್​ ಕರೊನಾ ಲಸಿಕೆ; ಟ್ರಂಪ್​ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
