ಕೋಲ್ಕತ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ರಾಜ್ಯಪಾಲರಾದ ಜಗದೀಪ್ ಧಂಖರ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಅವರೊಬ್ಬ ಕ್ರಿಮಿನಲ್, ಭ್ರಷ್ಟ ಎಂದು ಆರೋಪಿಸಿದ್ದಾರೆ.
1990ರ ಜೈನ ಹವಾಲಾ ಹಗರಣದಲ್ಲಿ ಜಗದೀಪ್ ಧಂಖರ್ ಅವರ ಹೆಸರಿದೆ. ಅವರೊಬ್ಬ ಕ್ರಿಮಿನಲ್. ಅವರು ನ್ಯಾಯಾಲಯಕ್ಕೆ ಹೋಗಿ ಪ್ರಕರಣದಲ್ಲಿದ್ದ ಹೆಸರನ್ನು ತೆರವುಗೊಳಿಸಿದ್ದರು. ಆದರೆ ಮತ್ತೆ, ಅರ್ಜಿ ಸಲ್ಲಿಸಲಾಗಿದ್ದು, ಅದು ಇನ್ನೂ ಬಾಕಿ ಉಳಿದಿದೆ. ಅವರು ಭ್ರಷ್ಟ ವ್ಯಕ್ತಿ ಎಂದು ಹೇಳಲು ನನಗೆ ವಿಷಾದವಿದೆ. ಕೇಂದ್ರಕ್ಕೆ ಈ ವಿಚಾರ ತಿಳಿದಿಲ್ಲದಿದ್ದರೆ, ನಾನು ಹೇಳುತ್ತೇನೆ. ಚಾರ್ಜ್‌ಶೀಟ್ ತಂದು ಅವನ ಹೆಸರು ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ನೋಡಲಿ. ಈ ರೀತಿಯ ವ್ಯಕ್ತಿಯನ್ನು ರಾಜ್ಯಪಾಲರಾಗಿ ಮುಂದುವರಿಸಲು ಕೇಂದ್ರ ಏಕೆ ಅನುಮತಿಸುತ್ತಿದೆ? ಎಂದು ಮಮತಾ ಬ್ಯಾನರ್ಜಿ ಅವರು ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ.
ಉತ್ತರ ಬಂಗಾಳದ ಶಾಂತಿಯುತ ಪರಿಸ್ಥಿತಿಯನ್ನು ಭಂಗಗೊಳಿಸಲು ರಾಜ್ಯಪಾಲರು ಪ್ರಯತ್ನಿಸುತ್ತಿದ್ದಾರೆ ಮತ್ತು ರಾಜ್ಯ ವಿಭಜಿಸುವ ಪರವಾಗಿರುವ ಜನರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಾರೆ. ಧಂಗೆ ನಡೆಸಿ ಎಂದು ಅವರೇ ಹೇಳಿಕೊಡುತ್ತಾರೆ. ಇದು ರಾಜ್ಯಪಾಲರು ಮಾಡುವ ಕೆಲಸವೇ? ಈಗಾಗಲೇ ರಾಜ್ಯಪಾಲರನ್ನು ಬದಲಿಸಿ ಎಂದು ನಾನು ಕೇಂದ್ರಕ್ಕೆ ಮೂರು ಬಾರಿ ಪತ್ರ ಬರೆದಿದ್ದೇನೆ ಎಂದು ಮಮತಾ ಅವರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆದರೆ ಈ ಆರೋಪವನ್ನು ಜಗದೀಪ್ ಅವರು ತಳ್ಳಿ ಹಾಕಿದ್ದಾರೆ. “ನನಗೆ ಚಾರ್ಜ್‌ಶೀಟ್ ನೀಡಿಲ್ಲ. ಅಂತಹ ಯಾವುದೇ ದಾಖಲೆಗಳಿಲ್ಲ. ಇದು ಸತ್ಯಗಳಿಂದ ದೂರವಿದೆ. ಇದು ಸರಳ ಸುಳ್ಳು ಮತ್ತು ತಪ್ಪು ಮಾಹಿತಿ. ನಾನು ಯಾವುದೇ ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ತೆಗೆದುಕೊಂಡಿಲ್ಲ” ಎಂದು ಹೇಳಿದ್ದಾರೆ. (ಏಜೆನ್ಸೀಸ್)
ರಾಮನಂತೆ ಬಿಲ್ಲನ್ನು ಮುರಿದು ಮದುವೆಯಾದ ವರ; ವೈರಲ್ ಆಯ್ತು ವಿಡಿಯೋ

‘ಮಲ್ಗೋಣ ಬಾ ಅಂತ ಕರೀತಾನೆ!’ ಸುದೀಪ್ ಎದುರೇ ಮಂಜುನ ನಡವಳಿಕೆ ಖಂಡಿಸಿದ ಚಕ್ರವರ್ತಿ! ಪರ್ಸನಲ್​ ವಿಚಾರವೂ ಬಯಲು

11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 19 =
Remember me
