ಕೋಲ್ಕತ:ಮಮತಾ ಬ್ಯಾನರ್ಜಿ ಅವರು ನೇತಾಜಿ ಸುಭಾಷ್​ ಚಂದ್ರ ಬೋಸರ 124ನೇ ಜನ್ಮದಿನಾಚರಣೆಯಂದು ಕೇಂದ್ರ ಸರ್ಕಾರದ ಬಳಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ದೆಹಲಿ ಮಾತ್ರ ಏಕೆ ರಾಜಧಾನಿಯಾಗಬೇಕು ದೇಶದ ನಾಲ್ಕು ದಿಕ್ಕಿನಲ್ಲಿ ನಾಲ್ಕು ರಾಜಧಾನಿ ರಚಿಸಿ, ಅಲ್ಲಿಯೂ ಸಂಸತ್​ ಅಧಿವೇಶನಗಳನ್ನು ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕೊನೆಗೂ ನಾಲ್ಕು ವರ್ಷಗಳ ಬಳಿಕ ಶಾಸಕನಿಗೆ ಶಿಕ್ಷೆ; 2 ವರ್ಷ ಜೈಲು, 1 ಲಕ್ಷ ರೂ. ದಂಡ…
ದೆಹಲಿ ಮಾತ್ರ ಏಕೆ ರಾಜಧಾನಿಯಾಗಬೇಕು? ಅಲ್ಲಿ ಮಾತ್ರ ಏಕೆ ಸಂಸತ್​ ರಚನೆಯಾಗಬೇಕು? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಎಲ್ಲವೂ ದೆಹಲಿಗೆ ಮಾತ್ರವೇ ಸೀಮಿತವಾಗಿರುವುದಾದರೂ ಏಕೆ? ನಾಲ್ಕು ರಾಷ್ಟ್ರೀಯ ರಾಜಧಾನಿ ರಚಿಸುವ ಕೂಗಿನ ಪರ ಸಂಸತ್‌ನಲ್ಲಿ ಧ್ವನಿ ಎತ್ತುವಂತೆ ನನ್ನ ಸಂಸತ್ ಸದಸ್ಯರಿಗೆ ನಾನು ಮನವಿ ಮಾಡುತ್ತೇನೆ. ನಮ್ಮ ಆಲೋಚನೆಗಳನ್ನು ಬದಲಿಸಬೇಕಿದೆ. ಕೇವಲ ಒಬ್ಬ ನಾಯಕನಿಂದ ಒಂದು ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಇದು ಮ್ಯಾಜಿಕ್ ಸ್ಯಾಂಡ್​.. ಬಿಸಿ ಮಾಡಿದ್ರೆ ಸಾಕು ಚಿನ್ನ ಆಗುತ್ತೆ!; 4 ಕೆ.ಜಿ. ಮರಳಿಗೆ 50 ಲಕ್ಷ ರೂ. ಕೊಟ್ಟೇ ಬಿಟ್ಟ ಜುವೆಲ್ಲರಿ ಮಾಲೀಕ…
ಕೇಂದ್ರ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸಂಸತ್​ ರಚಿಸುತ್ತದೆ. ಸಾವಿರಾರು ಕೋಟಿ ರೂಪಾಯಿ ಕೊಟ್ಟು ವಿಮಾನಗಳನ್ನು ಖರೀದಿಸುತ್ತದೆ. ಆದರೆ ನೇತಾಜಿಗೆ ಒಂದು ಸ್ಮಾರಕ ನಿರ್ಮಿಸಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದ್ದಾರೆ. ನೇತಾಜಿ ಅವರ ಜನ್ಮದಿನೋತ್ಸವ ಆಚರಿಸುವಾಗ ‘ಪರಾಕ್ರಮ’ ಎಂಬ ಪದವನ್ನು ಕೇಂದ್ರ ಸರ್ಕಾರ ಏಕೆ ಬಳಸುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ’ ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್​)
ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ

ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + eleven =
Remember me
