ಕೋಲ್ಕತ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರದಂದು ವಿನೂತನ ರೀತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಉತ್ತಿಗೆಗೆ ಪ್ಲೇಕಾರ್ಡ್​ ನೇತು ಹಾಕಿಕೊಂಡು ಎಲೆಕ್ಟ್ರಿಕ್​ ಸ್ಕೂಟರ್​ ಸವಾರಿ ಮಾಡಿ ಬಂದಿದ್ದಾರೆ.
ಮಮತಾರನ್ನು ಸಚಿವ ಫಿರ್ಹಾದ್ ಹಕೀಮ್ ಅವರು ಸ್ಕೂಟರ್​ನಲ್ಲಿ ಕೂರಿಸಿಕೊಂಡು ಸವಾರಿ ನಡೆಸಿದ್ದಾರೆ. ನಬನ್ನಾದ ಜನರು ಅವರ ಮುಖ್ಯಮಂತ್ರಿಯ ಈ ಹೋರಾಟವನ್ನು ಕಣ್ಣು ತುಂಬಿಸಿಕೊಂಡಿದ್ದಾರೆ. ಮಮತಾ ಅವರು ದಾರಿಯುದ್ದಕ್ಕೂ ರಸ್ತೆ ಬಳಿ ಸೇರಿದ್ದ ಜನರಿಗೆ ಕೈ ಬೀಸುತ್ತಾ ಸಾಗಿದ್ದಾರೆ.
ಮಮತಾ ಅವರು ಕುತ್ತಿಗೆಗೆ ಪ್ಲೇ ಕಾರ್ಡ್​ ಒಂದನ್ನು ನೇತು ಹಾಕಿಕೊಂಡಿದ್ದರು. ಅದರಲ್ಲಿ “ನಿಮ್ಮ ಬಾಯಲ್ಲಿ ಏನು ತುಂಬಿಕೊಂಡಿದ್ದೀರಿ. ಪೆಟ್ರೋಲ್​, ಡೀಸೆಲ್​, ಅಡುಗೆ ಅನಿಲದ ದರ ಏರಿಕೆಯಾಗುತ್ತಿದೆ” ಎನ್ನುವ ಬರಹವು ಕಂಡುಬಂದಿದೆ. ಸ್ಕೂಟರ್​ ಸವಾರಿಯ ನಂತರ ಮಾತನಾಡಿದ ಅವರು ದೇಶದಲ್ಲಿ ಆಗುತ್ತಿರುವ ಇಂಧನ ಬೆಲೆ ಏರಿಕೆಯ ವಿರುದ್ಧದ ಹೋರಾಟವಿದು ಎಂದು ಹೇಳಿಕೊಂಡಿದ್ದಾರೆ.
ದೇಶದಲ್ಲಿ ಮೋದಿ ಸರ್ಕಾರ ಬರುವಾಗ ಬಂದು ಬಂದ ನಂತರ ಇಂಧನ ಬೆಲೆ ಯಾವ ರೀತಿಯಲ್ಲಿ ವ್ಯತ್ಯಾಸವಾಗಿದೆಯನ್ನುವುದನ್ನು ನೀವೇ ನೋಡಬಹುದು. ಮೋದಿ ಮತ್ತು ಅಮಿತ್​ ಷಾ ಜೋಡಿ ದೇಶವನ್ನು ಮಾರಾಟ ಮಾಡುತ್ತಿದೆ. ಬಿಜೆಪಿ ದೇಶದ್ರೋಹಿಗಳ ಪಕ್ಷ ಎಂದು ವಾಗ್ವಾದ ನಡೆಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

#WATCH| West Bengal Chief Minister Mamata Banerjee travels on an electric scooter in Kolkata as a mark of protest against rising fuel prices.pic.twitter.com/q1bBM9Dtua
— ANI (@ANI)February 25, 2021

ಮತ್ತೆ ಏರಿತು ಎಲ್​ಪಿಜಿ ಸಿಲಿಂಡರ್​ ದರ! ಒಂದೇ ತಿಂಗಳಲ್ಲಿ 100 ರೂಪಾಯಿ ಏರಿಕೆ

“ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
