ಕೋಲ್ಕತ್ತ:ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ರ‍್ಯಾಲಿ ನಡೆಸಲು ಅವಕಾಶ ಕೊಡಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಾಕ್​ಡೌನ್​ ಹೇರುತ್ತಿದ್ದಾರೆ ಎಂದು ರಾಜ್ಯದ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಆರೋಪಿಸಿದ್ದಾರೆ.
ಕರೊನಾ ಇಲ್ಲಿ ನಾಶವಾಗಿದೆ. ಆದರೂ ದೀದಿ ನಾಟಕ ಮಾಡುತ್ತಿದ್ದಾರೆ. ಬಿಜೆಪಿಗೆ ಯಾವುದೇ ಸಭೆ, ರ‍್ಯಾಲಿ ಆಯೋಜಿಸಲು ಬಿಡಬಾರದು ಎಂಬ ಒಂದೇ ಕಾರಣಕ್ಕೆ ಈ ಲಾಕ್​ಡೌನ್​ ಹೇರುತ್ತಿದ್ದಾರೆ ಎಂದು ನಿನ್ನೆ ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.ಇದನ್ನೂ ಓದಿ:ಮಕ್ಕಳ ಎದುರೇ ಮಹಿಳೆಯನ್ನು ರೇಪ್​​ ಮಾಡಿದ ದುರುಳರು; ಅವಳ್ಯಾಕೆ ಹೋಗಬೇಕಿತ್ತು ಎಂದ ಪೊಲೀಸ್​ ಮುಖ್ಯಸ್ಥ
ದಿಲೀಪ್​ ಘೋಷ್​ ಮಾತನಾಡಿದ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಪಶ್ಚಿಮಬಂಗಾಳದಲ್ಲಿ ಬಿಜೆಪಿಗೆ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದ ಮೇಲೆ ಮಮತಾ ಬ್ಯಾನರ್ಜಿ ಮತ್ತು ಅವರ ಬೆಂಬಲಿಗರು, ಸೋದರ ಸಂಬಂಧಿಗಳು ಅಸ್ವಸ್ಥರಾಗಿದ್ದಾರೆ. ಆದರೆ ತಾವೆಲ್ಲ ಕರೊನಾ ವೈರಸ್​ನಿಂದ ಭಯಗೊಂಡಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)
ಪಬ್‌ಜಿ ಆಡಬೇಡ ಎಂದಿದ್ದಕ್ಕೆ ಈ ಹುಡುಗ ಹೀಗೆ ಮಾಡೋದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 3 =
Remember me
