ಕೋಲ್ಕತ:ದೇಶವನ್ನು ಉನ್ನತ ಹಾದಿಯಲ್ಲಿ ಮುನ್ನಡೆಸುವುದಕ್ಕೆ ಇರುವ ಸ್ವಾಭಾವಿಕ ಆಯ್ಕೆ ಎಂದರೆ ಅದು ಮಮತಾ ಬ್ಯಾನರ್ಜಿ ಅವರೇ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ. ದೇಶದಲ್ಲಿರುವ ವಿರೋಧ ಪಕ್ಷಗಳಲ್ಲಿ ನಂಬರ್ 1 ನಾಯಕಿ ಅವರು ಎಂದು ಸಂಸದ ಮಮತಾ ಅವರನ್ನು ಹಾಡಿ ಹೊಗಳಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಸಂದರ್ಶನದ ವೇಳೆ ಕಲ್ಯಾಣ್ ಬ್ಯಾನರ್ಜಿ ಈ ಮಾತನ್ನು ಹೇಳಿದ್ದಾರೆ. ಜನರು ಮಮತಾ ಅವರಲ್ಲಿ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಮೋದಿಯನ್ನು ಕೆಳಗಿಳಿಸಿ ಬೇರೆ ಯಾರಾದರೂ ಪ್ರಧಾನಿ ಸ್ಥಾನದಲ್ಲಿ ಕೂರಬಹುದೆಂದರೆ ಅದು ಮಮತಾ ಅವರು ಮಾತ್ರ. ಮಮತಾ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳ ವಿರುದ್ಧದ ಹೋರಾಟದ ಹೆಸರು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರನ್ನು ವಿರುದ್ಧ ಮಾತಿಗಿಳಿದ ಅವರು, ಪ್ರಧಾನಿಯವರಿಗೆ 2021ರ ಪಶ್ಚಿಮ ಬಂಗಾಳ ಚುನಾವಣೆಯು ತಕ್ಕ ಪಾಠ ಕಲಿಸಿದೆ ಎಂದು ಹೇಳಿದರು. ಪೆಗಾಸಸ್ ವಿಚಾರದಲ್ಲಿ ಕೇಂದ್ರ ಸರ್ಕಾರ ಅಚಲವಾಗಿದೆ. ಆದರೆ ನಾವು ನಮ್ಮ ಧ್ವನಿಯನ್ನು ಸಣ್ಣಗಾಗಲು ಬಿಡುವುದಿಲ್ಲ. ಈ ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)
ಗ್ರಾಹಕರಿಗೆ ಶಾಕ್ ಕೊಟ್ಟ ಏರ್​ಟೆಲ್! ಅಗ್ಗದ ರಿಚಾರ್ಜ್ ಪ್ಲಾನ್ ಕಿತ್ತು ಹಾಕಿದ ಸಂಸ್ಥೆ

ಒಂದೇ ಹಾಡಿನಿಂದ ವೈರಲ್ ಆದ ಬಾಲಕ! ರಾಜ್ಯದ ಮುಖ್ಯಮಂತ್ರಿ ಬಾಯಲ್ಲೂ ಅವನದ್ದೇ ಮಾತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
