ಕೋಲ್ಕತ್ತಾ:ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆಯು ಪಶ್ಚಿಮ ಬಂಗಾಳದ ರಾಜಕಾರಣವನ್ನೇ ಅಲ್ಲಾಡಿಸುತ್ತಿದೆ. ಈ ಘಟನೆ ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅತ್ಯಾಚಾರದ ಕುರಿತು ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಈಗ ವೈರಲ್ ಆಗಿವೆ.
ಇದನ್ನೂ ಓದಿ:ಪಾಕ್​ ಸ್ವಾತಂತ್ರ್ಯ ದಿನಾಚರಣೆಯಲ್ಲೇ ಯುವತಿಗೆ ಪುಂಡರ ಕಾಟ! ಅಸಹ್ಯ ವರ್ತನೆಗೆ ನೆಟ್ಟಿಗರ ಕಿಡಿ
ಹುಡುಗಿಯರು ಮತ್ತು ಹುಡುಗರು ಮುಕ್ತವಾಗಿ ಮಾತನಾಡುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಕಾಮೆಂಟ್ ಮಾಡಿರುವುದು ಗಮನಾರ್ಹವಾಗಿದೆ.
ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪ್ರದೇಶದಲ್ಲಿ 2012ರಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಇದು ಅಂದು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಮತಾಬ್ಯಾನರ್ಜಿ, ‘ಇತ್ತೀಚಿನ ದಿನಗಳಲ್ಲಿ ಹುಡುಗ-ಹುಡುಗಿಯರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹಿಂದೆ ಹೆಣ್ಣು ಮತ್ತು ಗಂಡು ಪರಸ್ಪರ ಕೈ ಹಿಡಿದುಕೊಂಡರೆ ಅವರನ್ನು ಹಿಡಿದು ಪೋಷಕರಿಗೆ ಒಪ್ಪಿಸುತ್ತಿದ್ದರು. ಪೋಷಕರು ಛೀಮಾರಿ ಹಾಕುತ್ತಿದ್ದರು. ಆದರೆ ಈಗ ಎಲ್ಲವೂ ತೆರೆದ ಮಾರುಕಟ್ಟೆಯಂತೆ ಯುವಜನರಿಗೆ ಸ್ವೇಚ್ಛೆಗೆ ಅವಕಾಶಗಳಿವೆ’ ಎಂದಿದ್ದರು.
ಮಮತಾ ಅವರ ಈ ಹೇಳಿಕೆ ಆಗ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಬಳಿಕ ಅವರು ಇದಕ್ಕೆ ವಿವರಣೆ ನೀಡಿದ್ದರು. ಅವರ ಕಾಮೆಂಟ್‌ಗಳನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಈಗ ಕೋಲ್ಕತ್ತಾ ಅತ್ಯಾಚಾರ ಪ್ರಕರಣದ ನಂತರ ಮಮತಾ ಬ್ಯಾನರ್ಜಿ ಅವರ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಗಿರಗಿಟ್ಲೆಯಂತೆ ತಿರುಗುತ್ತ ಸದ್ದು ಮಾಡುತ್ತಿವೆ.
ಇಂತಹ ಮುಖ್ಯಮಂತ್ರಿ ಆಡಳಿತದಲ್ಲಿ ವೈದ್ಯ ಅತ್ಯಾಚಾರ, ಕೊಲೆಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆಯೇ? ಎಂದು ನೆಟಿಜನ್‌ಗಳು ಟೀಕಿಸುತ್ತಿದ್ದಾರೆ.
ಆ್ಯಪ್​ಡೌನ್​ಲೋಡ್​ ಮಾಡುವ ಮುನ್ನ ಎಚ್ಚರ..ನಕಲಿ ಆ್ಯಪ್​ ಮೊರೆಹೋದ ವೃದ್ಧನಿಗೆ ಏನಾಯ್ತು ನೋಡಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 − 1 =
Remember me
