ಕಲ್ಕತ್ತ:ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಯುಕ್ತ ಕಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬಿಜೆಪಿ ಭಾನುವಾರ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು, ತಮ್ಮ ಹರಿತ ಮಾತುಗಳಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಕೆಣಕಿದ್ದರು.
ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಮತದಾರರನ್ನು ದಾರಿ ತಪ್ಪಿಸಲು ಪ್ರಧಾನಿಯವರು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಮೋದಿ ಅವರಿಗೆ ನಾಚಿಕೆ ಆಗಬೇಕು’ ಎಂದು ಹೇಳಿದ್ದಾರೆ. ಎಲ್​ಪಿಜಿ ಗ್ಯಾಸ್ ದರ ಏರಿಕೆ ಕುರಿತು ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಮತಾ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಖಾಲಿ ಭರವಸೆಗಳನ್ನು ನೀಡಿರುವ ಮೋದಿಯವರನ್ನು ಇನ್ಮುಂದೆ ಎಂದಿಗೂ ನಂಬುವುದಿಲ್ಲ. 2014 ರ ಮೊದಲು ಹೇಳಿದಂತೆ ಪ್ರಧಾನಿಯವರು ಏಕೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಪಶ್ಚಿಮ ಬಂಗಾಳ ಚುನಾವಣೆ: ಕಲ್ಲು ಒಡೆಯುವ ಕೂಲಿಯ ಹೆಂಡತಿ ಬಿಜೆಪಿ ಅಭ್ಯರ್ಥಿ!
‘ಮೋದಿ ಅವರೇ ನೀವು ಸಾಕಷ್ಟು ಹುಸಿ ಭರವಸೆಗಳನ್ನು ಜನರಿಗೆ ನೀಡಿದ್ದಿರಾ. ಇನ್ಮುಂದೆ ನಿಮ್ಮ ಆಟ ನಡೆಯವುದಿಲ್ಲ. ಜನಸಾಮಾನ್ಯರಿಗೆ ಎಲ್​ಪಿಜೆ ಗ್ಯಾಸ್ ಸಿಗದಂತೆ ಮಾಡಿಟ್ಟಿದ್ದಿರಾ. ನಿಮಗೆ ತಾಕತ್ ಇದ್ದರೇ ಎಲ್​ಪಿಜಿ ದರ ಕಡಿಮೆ ಮಾಡಿ ನೋಡೊಣ’ ಎಂದು ಸವಾಲು ಹಾಕಿದ್ದಾರೆ. ‘ಬಂಗಾಳದಲ್ಲಿ ಮೋದಿ ಭಾಷಣ ಮಾಡಿದ್ದು ಅವರೇ ಇರಬಹುದು. ಆದರೆ, ಅದನ್ನು ಗುಜರಾತ್​ನಲ್ಲಿ ತಯಾರು ಮಾಡಲಾಗಿದೆ. ಮೈಕ್​ ಮುಂದಿನ ಗ್ಲಾಸ್​ನಲ್ಲಿ ಅಳವಡಿಸಿದ ಯಂತ್ರದಿಂದ ಭಾಷಣ ಮಾಡಿದ್ದಾರೆ’ ಎಂದು ಮಮತಾ ಮೋದಿ ಭಾಷಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇನ್ನು ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ‘ಬಂಗಾಳದ ಜನ ನಿಮ್ಮನ್ನು ದೀದಿ (ಅಕ್ಕ) ಎಂದು ಕರೆಯುತ್ತಾರೆ. ಆದರೆ, ನೀವು ನಿಮ್ಮ ಅಳಿಯನಿಗೆ ಮಾತ್ರ ಅತ್ತೆಯಾಗಿ ಉಳಿದಿರಿ ಎಂದು ವ್ಯಂಗ್ಯವಾಡಿದ ಮೋದಿ, ಕಲ್ಕತ್ತ ಭಾರತದ ಭವಿಷ್ಯದ ನಗರವಾಗಿ ಬೆಳೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು.
‘ಮಹಿಳಾ ಸುರಕ್ಷತೆಗಾಗಿ ರಾಜ್ಯದಲ್ಲಿ ಟಿಎಂಸಿ ಸರ್ಕಾರ ಏನೂ ಮಾಡಿಲ್ಲ. ರಾಜಕೀಯ ಹತ್ಯೆಗಳಿಂದ ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಬಂಗಾಳದ ತಾಯಂದಿರು ಕಣ್ಣೀರು ಸುರಿಸಿದ್ದಾರೆ’ ಎಂದು ಪಿಎಂ ಮೋದಿ ಹೇಳಿದರು. ‘ಪಶ್ಚಿಮ ಬಂಗಾಳಕ್ಕೆ ಶಾಂತಿ, ಸುವ್ಯವಸ್ಥೆ ಮತ್ತು ಅಭಿವೃದ್ಧಿ ಬೇಕಾಗಿದೆ. 2047 ರಲ್ಲಿ ಪಶ್ಚಿಮ ಬಂಗಾಳ ಮತ್ತೆ ದೇಶವನ್ನು ಮುನ್ನಡೆಸಲಿದೆ’ ಎಂದು ಪಿಎಂ ಹೇಳಿದ್ದರು.
ಪಶ್ಚಿಮ ಬಂಗಾಳ ಚುನಾವಣೆ : ಡೆಬ್ರಾ ಕ್ಷೇತ್ರದಲ್ಲಿ ಐಪಿಎಸ್​ v/s ಐಪಿಎಸ್

ದೀದಿಯನ್ನು ಕೆಣಕಿದ ಮೋದಿ: ‘ಅಳಿಯನ ಅತ್ತೆಯಾಗಿ ಉಳಿದ ದೀದಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
