ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣದ ರಂಗೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಜೀವನದಲ್ಲೇ ಇಂಥಾ ಕೆಟ್ಟ ಪ್ರಧಾನಿ ಮತ್ತು ಗೃಹ ಮಂತ್ರಿಯನ್ನು ನೋಡಿಲ್ಲ ಎಂದು ಅವರು ಇಂದು ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.
ಹೂಗ್ಲಿ ಕ್ಷೇತ್ರದಲ್ಲಿ ಭಾನುವಾರದಂದು ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ ಅವರು ಬಿಜೆಪಿಯ ಕಾಲೆಳೆದಿದ್ದಾರೆ. ನಾನು ಏಳು ಬಾರಿ ಸಂಸತ್ತಿನ ಸದಸ್ಯೆಯಾಗಿ ಕೆಲಸ ಮಾಡಿದ್ದೇನೆ. ಹಲವು ಸರ್ಕಾರಗಳನ್ನು ನೋಡಿದ್ದೇನೆ. ಆದರೆ ಈವರೆಗೆ ಪ್ರಧಾನಿ ನರೇಂದ್ರ ಮೋದಿಯಷ್ಟು ಕೆಟ್ಟ ಪ್ರಧಾನಿಯನ್ನು ಹಾಗೂ ಗೃಹ ಮಂತ್ರಿ ಅಮಿತ್​ ಷಾರಷ್ಟು ಕೆಟ್ಟ ಗೃಹ ಮಂತ್ರಿಯನ್ನು ನೋಡಿರಲಿಲ್ಲ. ಇಷ್ಟು ಕೆಟ್ಟ ಸರ್ಕಾರವನ್ನು ನೋಡುತ್ತಿರುವುದು ಇದೇ ಮೊದಲು ಎಂದು ಅವರು ಟೀಕಿಸಿದ್ದಾರೆ.
ಈ ನಾಯಕರು ಸರ್ಕಾರದಲ್ಲಿದ್ದುಕೊಂಡೇ ಜನರನ್ನು ಕೊಲ್ಲುತ್ತಿದ್ದಾರೆ. ಬರೀ ಸುಳ್ಳನ್ನೇ ಹೇಳಿಕೊಂಡು ಜೀವನ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಬದಲಾವಣೆ ಬೇಕಿದೆ ಎನ್ನುತ್ತಾರೆ. ಆದರೆ ಅವರಿಗೆ ಒಂದು ನೆನಪಿರಲಿ. ನಾನು ಬದುಕಿರುವವರೆಗೂ ನನ್ನ ಪಶ್ಚಿಮ ಬಂಗಾಳವನ್ನು ಅವರಿಗೆ ಬಿಟ್ಟುಕೊಡುವುದಿಲ್ಲ ಎಂದು ಅವರು ಗಟ್ಟಿಯಾಗಿ ನುಡಿದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಎರಡು ಹಂತದ ಚುನಾವಣೆ ಮುಗಿದಿದ್ದು, ಇನ್ನು ಆರು ಹಂತಗಳು ಬಾಕಿಯಿವೆ. (ಏಜೆನ್ಸೀಸ್​)
ಮೊಟ್ಟೆ ಇಡೋದು ಮೊಸಳೆಯಾದರೂ ಕಾವು ಕೊಡೋದು ಅದಲ್ಲ! ಹೇಗಾಗುತ್ತೆ ಅದರ ಸಂತಾನೋತ್ಪತ್ತಿ?

ಈ ಪಾನ್​ ಬೆಲೆ 600 ರೂಪಾಯಿ! ಇದರೊಳಗೆ ಅಂತದ್ದೇನಿದೆ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
