ಕೊಲ್ಕತ :ನಂದೀಗ್ರಾಮದಲ್ಲಿ ವೈಯಕ್ತಿಕವಾಗಿ ಸೋಲು ಅನುಭವಿಸಿದರೂ, ತಮ್ಮ ಪಕ್ಷಕ್ಕೆ ಭಾರೀ ಬಹುಮತ ಬಂದ ಪರಿಣಾಮವಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಿಯಮಾನುಸಾರ ಸಿಎಂ ಪದವಿಯಲ್ಲಿ ಮುಂದುವರಿಯಲು 6 ತಿಂಗಳಲ್ಲಿ ಅವರು ವಿಧಾನಸಭಾ ಸದಸ್ಯರಾಗಿ ಚುನಾಯಿತರಾಗಬೇಕಾಗಿದೆ.
ಈ ಸನ್ನಿವೇಶದಲ್ಲಿ ಮಮತಾ ಅವರು, ತಮ್ಮ ಹಿಂದಿನ ಕ್ಷೇತ್ರವಾದ ಭವಾನಿಪುರ​ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆ ಎದುರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವಾಗಿ ಭವಾನಿಪುರದಿಂದ ಟಿಎಂಸಿ ಶಾಸಕರಾಗಿ ಆಯ್ಕೆಯಾಗಿದ್ದ ಸೋವನ್​ದೇಬ್ ಚಟ್ಟೋಪಾಧ್ಯಾಯ ಅವರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:100 ಆಮ್ಲಜನಕ ಸಾಂದ್ರಕ, 1 ಕೋಟಿ ರೂ.​ ದೇಣಿಗೆ ನೀಡಿದ ಟಿವಿಎಸ್​
2011 ರ ಉಪಚುನಾವಣೆಯಲ್ಲಿ ಬ್ಯಾನರ್ಜಿ ಅವರು ಭವಾನಿಪುರದಿಂದ ಶಾಸಕಿಯಾಗಿ ಜಯಿಸಿದ್ದರು. ಮತ್ತೆ 2016 ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಂದೀಗ್ರಾಮದಲ್ಲಿ ಸ್ಪರ್ಧಿಸಿದ ಅವರು, ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದರು.
ಚುನಾಯಿತರಾದ ಮೂರೇ ವಾರಗಳಲ್ಲಿ ರಾಜೀನಾಮೆ ನೀಡಿರುವ ಟಿಎಂಸಿಯ ಹಿರಿಯ ನಾಯಕರಾದ ಚಟ್ಟೋಪಾಧ್ಯಾಯ್​ ಅವರು, ಖಾರದಾಹ್​ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಟಿಎಂಸಿ ನಾಯಕಿ ಕಾಜಲ್ ಸಿನ್ಹಾ ಅವರ ನಿಧನದಿಂದ ಈ ಸ್ಥಾನ ತೆರವಾಗಿದೆ.(ಏಜೆನ್ಸೀಸ್)
ವಿವಾಹೇತರ ಸಂಬಂಧ ಬೆಳೆಸಿದ ಪೊಲೀಸ್​​ಗೆ ಇನ್​ಕ್ರಿಮೆಂಟ್ ಕಟ್ !

ಬ್ಲ್ಯಾಕ್ ಫಂಗಸ್​ ಔಷಧಿ ಸೋಗಿನಲ್ಲಿ ಸೈಬರ್​ ಖದೀಮರ ಆಟ ಶುರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 3 =
Remember me
