ಕಲ್ಕತ್ತಾ:ಮುಂಬರುವ ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದ್ದು, ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್ ಅವರಿಗೂ ಟಿಕೆಟ್​ ನೀಡಿದೆ. ಸುಶ್ಮಿತಾ ದೇವ್, ಎಂ.ಡಿ. ನಾದಿಮುಲ್ ಹಕ್ ಮತ್ತು ಮಮತಾ ಬಾಲಾ ಠಾಕೂರ್ ಅವರಿಗೆ ರಾಜ್ಯಸಭೆ ಚುನಾವಣೆಯ ಟಿಕೆಟ್​ ನೀಡಲಾಗಿದೆ.
ಹಿರಿಯ ಪತ್ರಕರ್ತೆ ಸಾಗರಿಕಾ ಘೋಷ್​ ಅವರು ಮೋದಿ ಸರ್ಕಾರದ ವಿರುದ್ಧ ತಮ್ಮ ಅಂಕಣಗಳ ಮೂಲಕ ನಿರಂತರವಾಗಿ ವಾಗ್ದಾಳಿ ನಡೆಸುತ್ತ ಬಂದಿದ್ದಾರೆ. ರಾಜ್ಯಸಭೆ ಚುನಾವಣೆಗೆ ಸ್ಫರ್ದಿಸುವ ಮೂಲಕ ಅವರು ರಾಜಕೀಯ ಪ್ರವೇಶ ಪಡೆಯುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಟಿಎಂಸಿ ಸಾಗರಿಕಾ ಘೋಷ್​, ಸುಶ್ಮಿತಾ ದೇವ್, ಎಂ.ಡಿ. ನಾದಿಮುಲ್ ಹಕ್ ಮತ್ತು ಮಮತಾ ಬಾಲಾ ಠಾಕೂರ್ ಅವರನ್ನು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಘೋಷಿಸಲು ಪಕ್ಷ ಹರ್ಷಿಸುತ್ತದೆ. ಪ್ರತಿ ಭಾರತೀಯನ ಹಕ್ಕುಗಳಿಗಾಗಿ ತೃಣಮೂಲದ ಅದಮ್ಯ ಮನೋಭಾವ ಮತ್ತು ಪ್ರತಿಪಾದನೆಯ ನಿರಂತರ ಪರಂಪರೆಯನ್ನು ಎತ್ತಿಹಿಡಿಯಲು ಈ ನಾಲ್ವರು ಕೆಲಸ ಮಾಡಲೆಂದು ಪಕ್ಷ ಆಶಿಸುತ್ತದೆ ಎಂದು ಶುಭ ಹಾರೈಸಿದೆ.
We are pleased to announce the candidature of@sagarikaghose,@SushmitaDevAITC,@MdNadimulHaque6and Mamata Thakur for the forthcoming Rajya Sabha elections.We extend our heartfelt wishes to them and may they work towards upholding Trinamool’s enduring legacy of indomitable…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 13 =
Remember me
