ಚೆನ್ನೈ :ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೂ ಮಾರ್ಕ್ಸ್​ವಾದಿ ಎಡಪಕ್ಷಗಳಿಗೂ ಕಟ್ಟಾ ವಿರೋಧವಿರಬಹುದು. ಆದರೆ ತಮಿಳುನಾಡಿನ ಸೇಲಂನಲ್ಲಿ ಅದೇ ಹೆಸರಿನ ಯುವತಿಯು ‘ಸೋಷಿಯಲಿಸಂ’ ಎಂಬ ಹೆಸರಿನ ಯುವಕನನ್ನು ವರಿಸಿದ್ದಾಳೆ!
ಇಂದು ನಡೆದ ವಿವಾಹೋತ್ಸವದಲ್ಲಿ ಪಿ.ಮಮತಾ ಬ್ಯಾನರ್ಜಿ ಎಂಬ ವಧುವು ಎ.ಎಂ.ಸೋಷಿಯಲಿಸಂ ಎಂಬ ವರನ ಕೈಹಿಡಿದಳು. ಈ ಸರಳ ಸಮಾರಂಭದಲ್ಲಿ ತಮಿಳುನಾಡು ಸಿಪಿಐ ಅಧ್ಯಕ್ಷ ಆರ್​.ಮುತ್ತರಸನ್, ಸಂಸದ ತಿರುಪ್ಪುರ್​ ಕೆ.ಸುಬ್ಬರಾಯನ್ ಸೇರಿದಂತೆ ಹಲವು ಎಡಪಕ್ಷದ ನಾಯಕರು ಭಾಗವಹಿಸಿದ್ದರು. ವಧುವರರ ಹೆಸರಿನ ವಿಶಿಷ್ಟತೆಯಿಂದಾಗಿ ಕೆಲವು ದಿನಗಳಿಂದ ಇವರ ಮದುವೆ ಆಮಂತ್ರಣ ಪತ್ರಿಕೆಯು ವೈರಲ್ ಆಗಿ, ನೆಟ್ಟಿಗರ ಗಮನ ಸೆಳೆದಿತ್ತು.
ಇದನ್ನೂ ಓದಿ:ಇಂಧನ ಬೆಲೆ ಏರಿಕೆ : ಜನಹಿತ ಯೋಜನೆಗಳಿಗಾಗಿ ಹಣ ಉಳಿಸುತ್ತಿದ್ದೇವೆ ಎಂದ ತೈಲ ಸಚಿವ
ಇಂಗ್ಲೀಷ್​ ಲಿಟರೇಚರ್​ನಲ್ಲಿ ಪದವಿ ಹೊಂದಿರುವ ಈ ಮಮತಾ, ಕಾಂಗ್ರೆಸ್​ ಬೆಂಬಲಿಗರ ಕುಟುಂಬಕ್ಕೆ ಸೇರಿದವಳು. ಅವರ ತಂದೆತಾಯಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯಿಂದ ಪ್ರೇರಿತರಾಗಿ ಈ ಹೆಸರು ಇಟ್ಟಿದ್ದಾರೆ ಎನ್ನಲಾಗಿದೆ.
29 ವರ್ಷದ ವರನು ಸಿಪಿಐನ ಸೇಲಂ ಜಿಲ್ಲಾ ಕಾರ್ಯದರ್ಶಿ ಎ.ಮೋಹನ್ ಅವರ ಮಗ. ಸೋವಿಯತ್​ ಯೂನಿಯನ್​ನ ಅಂತ್ಯದ ವೇಳೆ ಹುಟ್ಟಿದ ಅವನಿಗೆ ಸೋಷಿಯಲಿಸಂ ಎಂದು ಹೆಸರು ನೀಡಿದ್ದಾರೆ. ಇನ್ನು ಅವನ ಸೋದರರ ಹೆಸರು ಕಮ್ಯುನಿಸಂ ಮತ್ತು ಲೆನಿನಿಸಂ. ಇವರ ಕುಟುಂಬವಿಡೀ ಸಿಪಿಐ ಬೆಂಬಲಿಗರಿಂದ ತುಂಬಿದೆ ಎನ್ನಲಾಗಿದೆ.(ಏಜೆನ್ಸೀಸ್)
VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್​ಗೆ ಕಸದ ಅಭಿಷೇಕ!

ಮಗಳಿಗೆ ಹೇರ್​ಕಟ್​ ಮಾಡಿದ ಮಾಜಿ ಮಿಸ್​ ಯೂನಿವರ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 15 =
Remember me
