ಲಖನೌ:ಸ್ಕೂಟರ್​ಗೆ ಡಿಕ್ಕಿ ಹೊಡೆದ ಟ್ರಕ್​ ಒಂದು ಸುಮಾರು 1 ಕಿ.ಮೀ ದೂರ ಎಳೆದೊಯ್ದ ಪರಿಣಾಮ ತಾತ ಮತ್ತು ಮೊಮ್ಮಗ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಾನ್ಪುರ್​-ಸಾಗರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ತಾತ ಸ್ಥಳದಲ್ಲೇ ಸತ್ತರೆ, 6 ವರ್ಷದ ಮೊಮ್ಮಗನನ್ನು ಸ್ಕೂಟರ್​ ಸಮೇತ ಸುಮಾರು 1 ಕಿ.ಮೀ ದೂರ ಟ್ರಕ್​ ಎಳೆದೊಯ್ದಿದೆ. ದಾರಿಹೋಕರು ಸಾಕಷ್ಟು ಮನವಿ ಮಾಡಿದರೂ ವಾಹನ ನಿಲ್ಲಿಸದ ಟ್ರಕ್​ ಚಾಲಕ ಉದ್ಧಟತನ ಪ್ರದರ್ಶಿಸಿದ್ದಾನೆ. ಕೋಪಗೊಂಡ ಗ್ರಾಮಸ್ಥರು ಕಲ್ಲು ತೆಗೆದು ಟ್ರಕ್​ನತ್ತ ಬೀಸಿದರೂ ನಿಲ್ಲಿಸಲಿಲ್ಲ. ಕೊನೆಗೂ ಹೇಗೋ ಟ್ರಕ್​ ಅನ್ನು ತೆಡೆದು ನಿಲ್ಲಿಸಲಾಯಿತು.
ಇದನ್ನೂ ಓದಿ:ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್​
ಇದೇ ಸಂದರ್ಭದಲ್ಲಿ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಕ್​ ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕನ ಮೃತದೇಹವನ್ನು ವಶಕ್ಕೆ ಪಡೆದರು ಮತ್ತು ಟ್ರಕ್​ ಚಾಲಕನನ್ನು ಬಂಧಿಸಿದರು.
ಮೃತರನ್ನು ತಾತ ಉದಿತ್​ ನಾರಾಯಣ್​ ಛಾನ್ಸುರಿಯಾ ಮತ್ತು ಅವರ ಮೊಮ್ಮಗ ಸಾತ್ವಿಕ್​ ಎಂದು ಗುರುತಿಸಲಾಗಿದೆ. ತಾತ ಮತ್ತು ಮೊಮ್ಮಗ ಮಾರುಕಟ್ಟೆಗೆ ಹೋಗಿವಾಗ ದುರ್ಘಟನೆ ಸಂಭವಿಸಿದೆ. ಚಾಲಕನನ್ನು ಬಂಧಿಸಲಾಗಿದೆ ಎಂದು ಮೊಹೋಬಾ ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಮೃತದೇಹವನ್ನು ಆ್ಯಂಬುಲೆನ್ಸ್​ ಮೂಲಕ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.(ಏಜೆನ್ಸೀಸ್​)
महोबा में दो किमी तक स्कूटी घिसटती रही मगर इसको रोकने का साहस किसी में नहीं हुआ। एक बच्चा भी स्कूटी में था…हे भगवान 😳@mahobapoliceइस ड्राईवर की ख़िदमत बढ़िया से करिएगाpic.twitter.com/ey2sDhZGzE
— Mamta Tripathi (@MamtaTripathi80)February 26, 2023

ಮದುವೆ ಊಟ ಸೇವಿಸಿ 43 ಮಂದಿ ಅಸ್ವಸ್ಥ: ವಾಂತಿ,ಭೇದಿಯಿಂದ ಆಸ್ಪತ್ರೆಗೆ ದಾಖಲು

ಮನ್ ಕಿ ಬಾತ್ | ಚಾಮರಾಜನಗರ ವ್ಯಕ್ತಿಗೆ ಲಾಲಿಹಾಡು ವಿಭಾಗದಲ್ಲಿ ಮೊದಲ ಪ್ರಶಸ್ತಿ ಘೋಷಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
