ಪುಣೆ:ತನ್ನ ಹದಿಹರೆಯದ ಮಗಳ ಮೇಲೆ ಮತ್ತೆ ಮತ್ತೆ ಬಲಾತ್ಕಾರ ಮಾಡಿ ಅಮಾನುಷವಾಗಿ ನಡೆದುಕೊಂಡ ಗಂಡಸಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಪುಣೆಯ ವಿಶೇಷ ಪೋಕ್ಸೋ ಕೋರ್ಟ್ ವಿಧಿಸಿದೆ. ಬಲಾತ್ಕಾರದ ಫಲವಾಗಿ ಮಗಳು ಗರ್ಭಿಣಿಯಾಗಿ ನಂತರ ಗರ್ಭಪಾತವಾಗಿದೆ. ಆ ನಂತರವೂ ಅವಳ ಮೇಲೆ ಲೈಂಗಿಕ ಶೋಷಣೆ ಮುಂದುವರೆಸಿದ ಎನ್ನಲಾದ ದುಷ್ಕರ್ಮಿಗೆ ನ್ಯಾಯಾಲಯ, ಗರಿಷ್ಠ ಅವಧಿಯ ಶಿಕ್ಷೆಯನ್ನು ವಿಧಿಸಿದೆ.
ಈ ಕುರಿತು ಅಕ್ಟೋಬರ್ 2019 ರಲ್ಲಿ ಹದಿನಾರು ವರ್ಷದ ಬಾಲಕಿಯೊಬ್ಬಳು ವೃತ್ತಿಯಿಂದ ಕಂಟ್ರಾಕ್ಟರ್ ಆದ ತನ್ನ ತಂದೆಯ ವಿರುದ್ಧ ಅತ್ಯಾಚಾರದ ದೂರು ಸಲ್ಲಿಸಿದ್ದಳು. ಐದು ತಿಂಗಳವರೆಗೆ ಮತ್ತೆ ಮತ್ತೆ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆ ಮಾಡಿದ್ದು, ತಾನು ಗರ್ಭಿಣಿಯಾಗಿ ನಂತರ ಗರ್ಭಪಾತವಾಯಿತು. ಆ ನಂತರವೂ ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದು, ತಡೆಯಲು ಬಂದ ತಾಯಿಯ ಮೇಲೆ ಹಲ್ಲೆ ನಡೆಸಿದುದಾಗಿ ಬಾಲಕಿ ದೂರು ನೀಡಿದ್ದಳು.
ಇದನ್ನೂ ಓದಿ:ತಾಯಿ ಇಲ್ಲದ ಮಗುವಿಗೆ ಕಿರಾತಕರಾದ ಬಂಧುಗಳು … ಹೀಗೂ ಇರ್ತಾರಾ ?!
ಪುಣೆಯ ಕೋಢ್ವಾ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಇನ್ಸ್​ಪೆಕ್ಟರ್ ಸ್ವರಾಜ್ ಪಾಟೀಲ್ ಈ ಪ್ರಕರಣದ ತನಿಖೆ ನಡೆಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮೊಕದ್ದಮೆ ನಡೆಸಿದ ವಕೀಲೆ ಅರುಂಧತಿ ಬ್ರಹ್ಮೆ ಅವರು, ಒಟ್ಟು ಎಂಟು ಸಾಕ್ಷಿಗಳ ಪರೀಕ್ಷೆ ನಡೆಸಿದ್ದರು. ವಿಚಾರಣೆ ನಡೆಸಿದ ಪೋಕ್ಸೋ ಕೋರ್ಟ್ ನ್ಯಾಯಾಧೀಶರಾದ ಕೆ.ಕೆ.ಜಹಗೀರ್​ದಾರ್, 37 ವರ್ಷದ ಅಪರಾಧಿಗೆ ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಅತ್ಯಾಚಾರ ಮತ್ತು ಇತರ ಅಪರಾಧಗಳಿಗೆ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.
“ಆರೋಪಿಯು ತನ್ನ ಮಗಳ ವಿರುದ್ಧ ಮಾಡಿರುವ ಅಪರಾಧವು ಘೋರವಾದುದು ಎಂಬ ಸರ್ಕಾರಿ ವಕೀಲರ ಮಾತನ್ನು ಒಪ್ಪುತ್ತೇನೆ. ಅವನಿಗೆ ಪಾಠ ಕಲಿಸಲು ಮತ್ತು ಸಮಾಜಕ್ಕೆ ಉದಾಹರಣೆ ನೀಡಲು, ಗರಿಷ್ಠ ಶಿಕ್ಷೆಯನ್ನು ನೀಡುವುದು ಅವಶ್ಯಕವಾಗಿದೆ” ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕಲ್ಲಿದ್ದಲು ಕಳ್ಳಸಾಗಾಣಿಕೆ : ಅಭಿಷೇಕ್ ಬ್ಯಾನರ್ಜಿ ಹೆಂಡತಿಗೆ ಸಿಬಿಐ ನೋಟೀಸು

ಹೆಚ್ಚು ಹರಡುವ ಹೊಸ ರೂಪ ತಾಳುತ್ತಿದೆ ಕರೊನಾ : ವಹಿಸಿರಿ ಕಟ್ಟೆಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
