ಗ್ವಾಲಿಯರ್​:ಈತ ತಂದೆಯ ರೈಫಲ್ ಸ್ವಚ್ಛಗೊಳಿಸಲು ಹೋಗಿದ್ದೇ ಜೀವಕ್ಕೆ ಮುಳುವಾಗಿದೆ. ಅಪ್ಪನ ರೈಫಲ್ ಸ್ವಚ್ಛಗೊಳಿಸುತ್ತಿದ್ದಾಗ ಅಕಸ್ಮಾತ್ ಆಗಿ ಟ್ರಿಗರ್​ ಅದುಮಿದ ಮಗ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇಂಥದ್ದೊಂದು ದುರಂತ ಮಧ್ಯಪ್ರದೇಶದಲ್ಲಿ ನಡೆದಿದೆ.
ಉದ್ಯಮಿ ಹಾಗೂ ಪತ್ರಕರ್ತನೂ ಆಗಿರುವ ಅಭಿಷೇಕ್ ಸಕ್ಸೇನಾ ಸಾವಿಗೀಡಾದ ಪುತ್ರ. ಮಧ್ಯಪ್ರದೇಶದ ಭಿಂಡ್​ ಜಿಲ್ಲೆಯ ಲಹರ್​ ನಿವಾಸಿ ಆಗಿರುವ ಈತ ಈ ದುರಂತ ಸಾವಿಗೆ ಒಳಗಾಗಿದ್ದಾನೆ. ಗ್ವಾಲಿಯರ್​ನ ತಟಿಪುರ ಪ್ರದೇಶದ ದರ್ಪಣ್ ಕಾಲನಿಯಲ್ಲಿ ತಂದೆಯ ಲೈಸೆನ್ಸ್ಡ್ ರೈಫಲ್ ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಲಹರ್ ನಿವಾಸಿ ಆಗಿರುವ ಇವರಿಗೆ ದರ್ಪಣ್ ಕಾಲನಿಯಲ್ಲಿ ಇನ್ನೊಂದು ಮನೆ ಇದ್ದು, ಕುಟುಂಬ ಎರಡನೇ ಮಹಡಿಯಲ್ಲಿ ವಾಸವಿದ್ದು, ಗ್ರೌಂಡ್​ ಫ್ಲೋರ್ ಖಾಲಿ ಇತ್ತು. ಅಭಿಷೇಕ್ ತಂದೆಯ ರೈಫಲ್​ನೊಂದಿಗೆ ಗ್ರೌಂಡ್​​ ಫ್ಲೋರ್​ಗೆ ಬಂದಿದ್ದ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಅದಾಗಿ ಕೆಲವೇ ನಿಮಿಷಗಳಲ್ಲಿ ಗುಂಡಿನ ಶಬ್ದ ಕೇಳಿದ್ದು, ಕುಟುಂಬಸ್ಥರು ಕೆಳಕ್ಕೆ ಓಡಿ ಬಂದಿದ್ದರು. ಆಗ ಗುಂಡಿನ ಗಾಯದೊಂದಿಗೆ ಅಭಿಷೇಕ್ ಸತ್ತು ಬಿದ್ದಿರುವುದು ಕಂಡುಬಂದಿದೆ. ಸ್ಥಳದಲ್ಲಿ ಕ್ಲೀನಿಂಗ್ ಆಯಿಲ್ ಮತ್ತಿತರ ವಸ್ತುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ರೈಫಲ್ ಕ್ಲೀನ್ ಮಾಡುವಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಅಭಿಷೇಕ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ರೈಫಲ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
